Advertisement
ಒಬ್ಬ ಖಡಕ್ ವಿಲನ್. ಅವನ ಹಿಂದೆ ನಿಂತಿರುವ ಆರಡಿಯ ಆರೇಳು ಮಂದಿ ರೌಡಿಗಳು. ಅವರೆಲ್ಲರದ್ದೂ ಕರಾಬ್ ಲುಕ್ಕು.ಭುಜದ ಕೆಳಗೆ ಇಳಿದಿರುವಷ್ಟು ಬಿಟ್ಟಿರುವ ಕೂದಲು, ಕೆಟ್ಟದಾಗಿ ಹರಡಿರುವ ದಾಡಿ, ನೋಡಿದರೆ ರಿಯಲ್ ರೌಡಿಗಳೇ ಎನಿಸುವಷ್ಟರ
ಮಟ್ಟಿಗೆ ಭಯ ಹುಟ್ಟಿಸೋ ರಾ ಫೇಸು. ಎದುರು ಎಂಥವನೇ ಬರಲಿ, ಕೊಚ್ಚಿ ಹಾಕುವಂತಹ ಧೈರ್ಯ. ಒಮ್ಮೆಲೆ ಜೋರಾಗಿ
ಆರ್ಭಟಿಸಿದರೆ, ಆ ಶಾಟ್ ಕಟ್ ಆಗುತ್ತೆ. ಆಮೇಲೆ, ಅವರೆಲ್ಲರೂ ತಮ್ಮ ಪಾಡಿಗೆ ತಾವು ಮುಂದಿನ ಶಾಟ್ ಬರೋವರೆಗೆ ಸುಮ್ಮನೆ
ಅತ್ತಿಂದಿತ್ತ, ಇತ್ತಿಂದತ್ತ ಓಡಾಡಿಕೊಂಡಿರುತ್ತಾರೆ. ಆದರೆ, ಅವರ್ಯಾರೂ ರಿಯಲ್ ರೌಡಿಗಳಲ್ಲ. ಯಾರೂ ಕೆಟ್ಟವರಲ್ಲ. ಅವರೆಲ್ಲರೂ ಫೈಟರ್! ಹೌದು, ಸುಂದರವಾಗಿರೋರು ಹೀರೋ ಆಗ್ತಾರೆ, ಗಟ್ಟಿಮುಟ್ಟಾದ ದೇಹ ಹೊಂದಿದವರು ಪ್ರಮುಖ ವಿಲನ್ ಆಗ್ತಾರೆ.
ಆದರೆ, ಕಪ್ಪಗೆ, ದಪ್ಪಗೆ, ತೆಳ್ಳಗೆ ಇದ್ದು, ಉದ್ದುದ್ದ ಕೂದಲು, ದಾಡಿ ಬೆಳೆಸಿಕೊಂಡವರು ಖಳನಟನ ಹಿಂದೆ ನಿಲ್ಲೋ ರೌಡಿಗಳಾಗುತ್ತಾರೆ.
ಇದು ಕಲರ್‌ಫುಲ್ ಜಗತ್ತಿನ ನಿಜ ಚಿತ್ರಣ. ಸಿನಿಮಾ ಅಂದರೆ, ಅಲ್ಲಿ ಕಾಣಸಿಗೋದು, ಹೀರೋಯಿಸಂ, ಗ್ರಾಮರ್ ಇಲ್ಲದ ಗ್ಲಾಮರು,
ಕಟ್ಟಿಕೊಂಡವರ ಕಲರ್ ಕಲರ್ ಲೈಫು, ಇತ್ಯಾದಿ ಇತ್ಯಾದಿ. ಆದರೆ, ಹೀರೋಯಿಸಂಗೆ ಸಾಥ್ ಕೊಡುವ ಫೈಟರ್ಗಳ ಬದುಕು, ಬವಣೆ
ಯಾರೂಬ್ಬರಿಗೂ ಕಾಣದು. ಒಂದು ಸಿನಿಮಾ ಪರಿಪೂರ್ಣಗೊಳ್ಳ ಬೇಕಾದರೆ, ನಾಯಕನ ಸರಿಸಮ ಖಳನಾಯಕನೂ ಇರಬೇಕು. ಆ
ಖಳನಿಗೆ ಸರಿಸಮಾನಾಗಿ, ಕರಾಬ್ ಆಗಿರುವ ರೌಡಿಗಳೂ ಸಾಥ್ ಕೊಡಬೇಕು ಮತ್ತು ಅಂತಹ ಕರಾಬ್ ಆಗಿರುವ ಮಂದಿ ಇರದಿದ್ದರೆ
ನಿಜಕ್ಕೂ ಆ ಹೀರೋನ ಸಿನಿಮಾ ಪರಿಪೂರ್ಣವಾಗಲ್ಲ. ಇಲ್ಲೀಗ ಹೇಳ ಹೊರಟಿರುವ ವಿಷಯ ಕೂಡ ಅಂತಹ ಕರಾಬ್ ರೌಡಿಗಳ ಪಾತ್ರ ಮಾಡುವ ಮಂದಿಯದ್ದು.
ಆದರೆ, ಸಿನಿಮಾ ಮಂದಿಗೆ ಬೇಕಿರೋದು ಉದ್ದನೆಯ ಕೂದಲು, ದಪ್ಪನೆಯ ದಾಡಿ ಬಿಟ್ಟು, ನೋಡೋಕೆ ಭಯಂಕರ ಎನಿಸುವಂತಹ
ವ್ಯಕ್ತಿಗಳು ಮಾತ್ರ ಸಾಕು. ಅವರನ್ನಿಟ್ಟುಕೊಂಡೇ ಆ ಪಾತ್ರ, ದೃಶ್ಯಗಳಿಗೆ ಜೀವ ತುಂಬಲು ಪ್ರಯತ್ನಿಸುತ್ತಾರೆ. ಅಂತಹ ಪಾತ್ರಗಳಿಗಾಗಿಯೇ ಒಂದಷ್ಟು ಮಂದಿ ಜೀವ ತೇಯುತ್ತಿದ್ದಾರೆ. ಅವರೆಲ್ಲರಿಗೂ ಕಲೆಯ ಮೇಲೆ ಅಪಾರ ಪ್ರೀತಿ ಇದೆ. ಅವರಿಗೂ ನಟನಾಗಬೇಕೆಂಬ ಆಸೆ ಇದೆ. ಆದರೆ, ಅವರ ಹೇರ್‌ಸ್ಟೈಲು, ಲುಕ್ಕು, ಪರ್ಸನಾಲಿಟಿ ನೋಡಿ ಯಾರೂ ಅವರಿಗೆ ಒಳ್ಳೇ ಪಾತ್ರ ಕೊಡೋದಿಲ್ಲ. ವಿಲನ್ ಗ್ಯಾಂಗ್‌ನಲ್ಲಿ ರೌಡಿ ಪಾತ್ರಕ್ಕೆ ಸೂಟ್ ಆಗ್ತಾನೆ ಎಂಬ ಕಾರಣಕ್ಕೆ ಕರೆದು, ವಿಲನ್ ಗ್ಯಾಂಗ್‌ಗೆ ಹಾಕುತ್ತಾರೆ. ಆದರೆ, ಅವರ್ಯಾರಿಗೂ ಬೇಸರವಿಲ್ಲ. ಅದು ಅನಿವಾರ್ಯ ಕೂಡ. ಪಾತ್ರ ಮಾಡಬೇಕು, ಅದು ಎಂಥದ್ದೇ ಆಗಿದ್ದರೂ ಸರಿ, ಅಂತ ನಿರ್ಧರಿಸಿದವರೇ ಹೆಚ್ಚು ರೌಡಿಗಳ ಪಾತ್ರಕ್ಕೆ ಟ್ ಆಗಿದ್ದಾರೆ. ವರ್ಷಗಟ್ಟಲೆ ಕೂದಲು ಬಿಟ್ಟು, ದಾಡಿ ಬಿಟ್ಟು, ಕರಾಬ್ ಆಗಿಯೇ ಬದುಕು ಸವೆಸುವ ಅವರೆಲ್ಲರಿಗೂ ಆ ಕೂದಲು, ಎರ್ರಾಬಿರ್ರಿ ಬೆಳೆದ ಆ ದಾಡಿ, ಅವರ ಕರಾಬ್ ಲುಕ್ಕು ಅವರೆಲ್ಲರ ಬದುಕು ರೂಪಿಸಿದೆ ಅನ್ನೋದು ಅಷ್ಟೇ ಸತ್ಯ. ಗಾಂಧಿನಗರದಲ್ಲಿ ಅಂಥದ್ದೊಂದು ತಂಡವಿದೆ. ನೂರಾರು ಫೈಟರ್ ವರ್ಷಗಟ್ಟಲೆ ಕೂದಲು, ದಾಡಿ ಬಿಟ್ಟು ಅವಕಾಶ ಎದುರು ನೋಡುತ್ತಿರುವುದುಂಟು. ಬಂದ ಸಿನಿಮಾಗಳನ್ನು ಒಪ್ಪಿಕೊಂಡು ಕ್ಯಾಮೆರಾ ಮುಂದೆ ಮಚ್ಚು, ಲಾಂಗು ಹಿಡಿದು, ಹೀರೋ ಕೈಯಲ್ಲಿ ಹೊಡೆತ ತಿನ್ನುತ್ತಲೇ “ಹೊಟ್ಟೆಪಾಡು’ ನೋಡಿಕೊಳ್ಳುವವರೂ ಇದ್ದಾರೆ. ಅವರೆಲ್ಲರಿಗೂ ಆ ಕೂದಲೇ ಬದುಕು. ಮನೆ ಮಂದಿ ಅಷ್ಟೇ ಅಲ್ಲ, ಎಷ್ಟೋ ಸಲ, ಗೆಳೆಯರು “ಹಿಂಗೆ, ರೌಡಿ ತರಹ ಕೂದಲು, ಗಡ್ಡ ಬಿಟ್ಟು, ಕೆಟ್ಟ ಲುಕ್‌ನಲ್ಲಿದ್ದರೆ ಹೇಗೋ, ಕಟಿಂಗ್ ಮಾಡಿಸಿ, ನೀಟ್ ಆಗಿ ಬೇರೇ ಏನಾದರೂ ಕೆಲಸ ಮಾಡೋ ಅಂತ ಹೀಯಾಳಿಸಿದ್ದೂ ಇದೆ. ಆದರೆ, ಅವರ್ಯಾರಿಗೂ ಅವರ ಮಾತು ಬೇಕಿಲ್ಲ. ನೀಟ್ ಆಗಿದ್ದರೆ, ಹೊಟ್ಟೆ ತುಂಬೋದಿಲ್ಲ ಎಂಬ ಅರಿವೂ ಅವರಿಗಿದೆ. ಆ ಕಾರಣಕ್ಕೇ, “ಯಾರು ಏನಂದುಕೊಂಡರೂ ಪರವಾಗಿಲ್ಲ, ಕ್ಯಾಮೆರಾ ಮುಂದೆ ರೌಡಿಗಳಾಗಿದ್ದು, ಕ್ಯಾಮೆರಾ ಹಿಂದೆ ಒಳ್ಳೆಯವರಾಗಿದ್ದೀವಲ್ಲ ಅಷ್ಟು ಸಾಕು’ ಎಂಬ ಸಮಾಧಾನದಿಂದಲೇ, ಅದೆಷ್ಟೋ ಜೂನಿಯರ್ ಆರ್ಟಿಸ್ಟ್‌ಗಳು ದಶಕಗಳಿಂದಲೂ ಅವಕಾಶಕ್ಕಾಗಿಯೇ ಸಿಕ್ಕಾಪಟ್ಟೆ ಕೂದಲು ಬಿಟ್ಟು, ಕರಾಬ್ ಲುಕ್‌ನಲ್ಲೇ ಕ್ಯಾಮೆರಾ ಮುಂದೆ ನಿಂತು ಬದುಕು ನಡೆಸುತ್ತಿದ್ದಾರೆ. ಆ ಪೈಕಿ ಕೆಲವರು ಹೇಳ್ಳೋದೇನು ಗೊತ್ತಾ? “ಉಗ್ರಂ’ ಚಿತ್ರದಲ್ಲಿ ಉದ್ದ ಕೂದಲು, ದಾಡಿ ಬಿಟ್ಟು ಆರಡಿ
ಎತ್ತರವಿರುವ ಕಪ್ಪಗೆ ಕಾಣುವ ರೌಡಿಯೊಬ್ಬ ಗಮನಸೆಳೆಯುತ್ತಾನೆ.
Related Articles
ಒಂದು ದೊಡ್ಡ ಕಥೆ. ರವಿ ಫುಟ್‌ಬಾಲ್ ಪ್ಲೇಯರ್. ರಾಜ್ಯಮಟ್ಟದ ಆಟಗಾರ ಎನಿಸಿಕೊಳ್ಳಬೇಕು, ಒಳ್ಳೇ ಗೋಲ್ ಕೀಪರ್ ಆಗಬೇಕೆಂಬ ಆಸೆ ಇತ್ತು. ಆದರೆ, ಆತ ಓದಿದ್ದು 8 ನೇ ಕ್ಲಾಸು. ಏನ್ಮಾಡೋದು, ಹೊಟ್ಟೆ ತುಂಬಿಸಿಕೊಳ್ಳಬೇಕಿತ್ತು.
ವೆಲ್ಡಿಂಗ್ ಕೆಲಸ ಕಲಿತರು. ಪೇಂಟಿಂಗ್ ಮಾಡೋದನ್ನೂ ಕಲಿತರು. ಅಲ್ಲೇಕೋ ನೆಮ್ಮದಿ ಸಿಗಲಿಲ್ಲ. ಚಿಕ್ಕಂದಿನಲ್ಲಿ
ಆರ್ಟಿಸ್ಟ್ ಆಗೋ ಆಸೆ ಮೂಲೆಯಲ್ಲಿತ್ತು. ಆರ್ಕೇಸ್ಟ್ರಾದಲ್ಲಿ ಸಿಂಗರ್ ಆಗೋ ಆಸೆ ಇತ್ತು. ಅದಾಗಲಿಲ್ಲ. ಸಣ್ಣಪುಟ್ಟ ಮಿಮಿಕ್ರಿ
ಮಾಡಿಕೊಂಡೇ ದಿನ ಕಳೆಯುತ್ತಿದ್ದರು. ಏನಾದ್ರೂ ಸರಿ, ಸಿನಿಮಾ ಪ್ರವೇಶ ಮಾಡಬೇಕು ಅಂತ ಡಿಸೈಡ್ ಮಾಡಿದರು.
ಕಳೆದ 12 ವರ್ಷಗಳ ಹಿಂದೆ ಕೂದಲು, ಗಡ್ಡ ಬಿಟ್ಟರು! ಡ್ಯಾನ್ಸ್ ಕ್ಲಾಸ್‌ಗೆ ಸೇರಿದರು. ನೋಡೋಕೆ ಕಪ್ಪಗೆ, ಉದ್ದಕ್ಕೆ ಇದೀಯಾ,
ಸಿನಿಮಾಗೆ ಟ್ರೈ ಮಾಡು ಅಂತ ಅಲ್ಲೊಬ್ಬರು ಹೇಳಿದ್ದೇ ತಡ, ಆ ಕೂದಲು, ಗಡ್ಡ, ಹೈಟು ಕರಾಬ್ ಲುಕ್ಕು ಅವರ ಪಾಲಿಗೆ ವರವಾಯ್ತು.
ಮನೇಲಿ ಕೂದಲು, ಗಡ್ಡ ಬಿಟ್ಟಿದ್ದನ್ನು ನೋಡಿ ಬೈದಿದ್ದೂ ಉಂಟು. ಅವೆಲ್ಲವನ್ನೂ ಕೇಳಿಸಿಕೊಂಡ ರವಿಗೆ ಆರ್ಟಿಸ್ಟ್ ಆಗುವ ಆಸೆ
ಕಣ್ಮುಂದೆ ಇತ್ತು. ಕಷ್ಟಪಟ್ಟು ಈಗ ಒಂದಷ್ಟು ಸಿನಿಮಾದಲ್ಲಿ ರೌಡಿ ಪಾತ್ರ ಮಾಡುತ್ತಿದ್ದಾರೆ. ಥ್ರಿಲ್ಲರ್ ಮಂಜು ಅವರೇ ರವಿಯನ್ನ
ಗುರುತಿಸಿ ಮೊದಲು “ಜೈಹೋ’ ಚಿತ್ರದಲ್ಲಿ ಅವಕಾಶ ಕೊಟ್ಟರು. ಅಲ್ಲಿಂದ “ಮಾದೇಶ’, “ವಂಶಿ’, “ಜಂಗ್ಲಿ’, “ಬಳ್ಳಾರಿ ನಾಗ’ ಸೇರಿದಂತೆ
ಸಾಕಷ್ಟು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈಗ “ಕೆಜಿಎಫ್’ನಲ್ಲೂ ವಿಲನ್ ಆಗಿ ನಟಿಸುತ್ತಿದ್ದಾರೆ. ಇಂದು ಗುರುತಿಸಿಕೊಳ್ಳೋಕೆ ಈ
ಕೂದಲು, ನನ್ನ ಕಲರ್ರೆà ಕಾರಣ’ ಎನ್ನುತ್ತಾರೆ ರವಿ.
Advertisement
ಇನ್ನು ಅಜಿತ್ ಡಿಗ್ರಿ ಓದಿದ್ದಾರೆ. ಇವರಿಗೂ ನಟಿಸೋ ಆಸೆ. ಆದರೆ, ಇವರ ಲುಕ್ ನೋಡಿದವರೆಲ್ಲರೂ ರೌಡಿ ಗ್ಯಾಂಗ್‌ನಲ್ಲೊಂದು ಪಾತ್ರ ಹೇಳುತ್ತಿದ್ದರು. ಅದಕ್ಕೆ ಸರಿಯಾಗಿ ಕೂದಲನ್ನೂ ಬಿಟ್ಟರು, ಪರ್ಸನಾಲಿಟಿ ಕೂಡ ರೌಡಿ ಪಾತ್ರಕ್ಕೆ ಹೋಲಿಕೆಯಾಗುತ್ತಿತ್ತು. ಮನೆಯಲ್ಲಿ ಕೂದಲು ಕಟ್ ಮಾಡಿಸು ಅಂತ ಬೈದವರೇ ಇಲ್ಲ. ಆದರೂ, ಅವರಿಗೆ ಅವಕಾಶ ಸಿಗೋದನ್ನು ನೋಡಿದ ಮೇಲೆ,ಮನೆಯವರೇ ಸುಮ್ಮನಾದರು. “ಟ್ರಿಗರ್’, “ಮರಿ ಟೈಗರ್’, “ಪಂಟ್ರಾ’, “ಕೆಜಿಎಫ್’ ಹಾಗೂ ಗುಜರಾತಿ ಭಾಷೆಯ “ದಿಲ್
ತು ದಿಲ್’ ಎಂಬ ಚಿತ್ರ ಮಾಡಿದ್ದಾರೆ. “ಕೂದಲು ಬಿಟ್ಟು ಓಡಾಡಿದರೆ, ಎಲ್ಲರೂ ವಿಚಿತ್ರವಾಗಿ ನೋಡ್ತಾರೆ. ಏನ್ಮಾಡೋದು, ನಾವು ಹೇಗೆ ಅಂತ ನಮಗೆ ಗೊತ್ತು. ಹಾಗಾಗಿ, ಕೂದಲನ್ನು ಪ್ರೀತಿಸುತ್ತ, ಸಿನಿಮಾ ಅವಕಾಶ ಪಡೆಯುತ್ತಿದ್ದೇನೆ. ನನ್ನ ಮೇಲೆ ಫ್ಯಾಮಿಲಿ ಕೂಡ ಡಿಪ್ಯಾಂಡ್ ಆಗಿದೆ’ ಈ ಕೂದಲು, ಕರಾಬ್ ಲುಕ್ಕೇ ನನಗೆ ಜೀವನಾಧಾರ’ ಎನ್ನುತ್ತಾರೆ ಅಜಿತ್. ಇವರ ಜತೆ ರಘು ಎಂಬ ಮತ್ತೂಬ್ಬ
ಜೂನಿಯರ್ ಆರ್ಟಿಸ್ಟ್ ಕೂಡ ನಾಲ್ಕು ವರ್ಷಗಳಿಂದಲೂ ಕೂದಲು ಬಿಟ್ಟು, ರೌಡಿ ಪಾತ್ರ ಮಾಡುತ್ತಿದ್ದಾರೆ. “ಗಲ್ಲಿ ಟೈಗರ್’, “ಮಾಸ್ಟರ್ ಪೀಸ್’, “ಮರಿ ಟೈಗರ್’, “ಕೆಜಿಎಫ್’ ಹೀಗೆ ಹತ್ತಾರು ಚಿತ್ರ ಮಾಡಿದ್ದಾರೆ. ಎಲ್ಲಾ ಚಿತ್ರಗಳಲ್ಲೂ ಹೊಡೆತ ತಿನ್ನೋದೇ ಪಾತ್ರ! ಹೊಡೆತ ತಿಂದರೆ ಮಾತ್ರ ಹೊಟ್ಟೆಪಾಡು. ಇಲ್ಲವಾದರೆ ಇಲ್ಲ ಎನ್ನುವ ರಘು, ಸಿನಿಮಾಗಾಗಿಯೇ ಕೂದಲು, ದಾಡಿ ಬಿಟ್ಟು, ಧಡೂತಿ ದೇಹ ಬೆಳೆಸಿಕೊಂಡಿದ್ದೇನೆ. ಈ ಲುಕ್ ಇಲ್ಲವೆಂದರೆ, ನಮ್ಮನ್ನ ಕರೆದು ಯಾರು ತಾನೇ ಅವಕಾಶ ಕೊಡ್ತಾರೆ’ ಎನ್ನುತ್ತಾರೆ ರಘು. ಸಂಜಯ್ ಹಾಗೂ ಸಂತೋಷ್ ಎಂಬ ಇಬ್ಬರು ಜೂನಿಯರ್ ಆರ್ಟಿಸ್ಟ್‌ಗಳು ಐದು ವರ್ಷದಿಂದ ಕೂದಲು ಬಿಟ್ಟು, ಸಿನಿಮಾದಲ್ಲಿ
ಸಿಗುವ ರೌಡಿ ಪಾತ್ರ ಮಾಡುತ್ತಲೇ ಬದುಕು ಕಾಣುತ್ತಿದ್ದಾರೆ. ಇಲ್ಲಿ ಫೈಟರ್ ಆಗಿ ಕೆಲವೊಮ್ಮೆ ಪೆಟ್ಟು ತಿಂದು, ನೋವು ಅನುಭವಿಸಿದರೂ, ಸಿನಿಮಾ ಮಾತ್ರ ಬಿಡೋದಿಲ್ಲ. ಇಲ್ಲೇ ಬದಕು ರೂಪಿಸಿಕೊಳ್ಳುವ ಆಸೆ ನಮ್ಮದು’ ಎನ್ನುತ್ತಾರೆ ಅವರು. ಸಿದ್ದು ಎಂಬ ಮತ್ತೂಬ್ಬ ಫೈಟರ್ ಕೂಡ ರೌಡಿಯಾಗಿಯೇ ನಟಿಸುತ್ತಿದ್ದಾರೆ. ಮನೆಯವರನ್ನು ನೋಡಿಕೊಳ್ಳಬೇಕು. ಓದಿರೋದು ಹತ್ತನೇ ಕ್ಲಾಸು. ಯಾವ ಕೆಲಸ ಸಿಗುತ್ತೆ ಹೇಳಿ, ಕೂದಲು ಬಿಟ್ಟರೆ, ಸಿನಿಮಾದಲ್ಲಿ ರೌಡಿ ಪಾತ್ರದ ಕೆಲಸ ಸಿಗುತ್ತೆ. ಲೈಫು ಹೇಗೋ ನಡೆಯುತ್ತೆ ಇನ್ನೇನು ಬೇಕು ಹೇಳಿ’ ಎನ್ನುತ್ತಾರೆ ಅವರು. ಇದು ಕೆಲವು ಉದಾಹರಣೆಗಳಷ್ಟೇ. ಈ ತರಹ ಅದೆಷ್ಟೋ ಮಂದಿ ಚಿತ್ರರಂಗದಲ್ಲಿ ಒದೆ ತಿನ್ನುತ್ತಲೇ ಇದ್ದಾರೆ. ಅವರಿಗೂ ಹೀರೋ ಆಗಬೇಕು, ಒಳ್ಳೆಯ ಪಾತ್ರಗಳನ್ನು ಮಾಡಬೇಕೆಂಬ ಆಸೆಯೇನೋ ಇದೆ. ಆದರೆ, ಅವರನ್ನು ಹೀರೋ
ಮಾಡುವವರಾದರೂ ಯಾರು? ಒಂದೋ ಅವರು ಉದ್ದಗೂದಲು ಬಿಟ್ಟು, ಲಾಂಗು ಹಿಡಿಯಬೇಕು, ಇಲ್ಲ ಕೆಲಸವಿಲ್ಲದೆ ಸುಮ್ಮನೆ
ಇರಬೇಕು. ಇದು ಬರೀ ಕನ್ನಡದಲ್ಲಷ್ಟೇ ಅಲ್ಲ. ಎಲ್ಲಾ ಚಿತ್ರರಂಗಗಳಲ್ಲೂ ರೌಡಿ ಪಾತ್ರ ಮಾಡುವವರಿಗೆ ಒಂದು ಡ್ರೆಸ್ ಕೋಡ್ ಇದ್ದೇ ಇರುತ್ತದೆ. ಕನ್ನಡ ಮತ್ತು ತಮಿಳಿನಲ್ಲಿ ಉದ್ದಗೂದಲಿದ್ದರೆ ರೌಡಿ ಪಟ್ಟ. ತೆಲುಗಿನಲ್ಲಿ ಅದರ ಜೊತೆಗೆ ವೈಟ್ ಆ್ಯಂಡ್ ವೈಟ್ ಇರಬೇಕು. ಇನ್ನು ಬಾಲಿವುಡ್‌ನಲ್ಲಿ ಈ ತರಹ ರೌಡಿಗಳ ಸಿನಿಮಾ ಕಡಿಮೆಯಾಗಿ, ಅಲ್ಲಿ ಮಾμಯಾ ಚಿತ್ರಗಳು ಹೆಚ್ಚಾಗಿರುವುದರಿಂದ ಬೆಳ್ಳಗಿದ್ದು, ಸೂಟು-ಬೂಟು ಇರಬೇಕು. ಹೀಗೆ ಒಂದೊಂದು ಚಿತ್ರರಂಗದಲ್ಲಿ ಒಂದೊಂದು ರೀತಿ. ಕನ್ನಡ ಚಿತ್ರಗಳಲ್ಲಿ ಮಾತ್ರ ರೌಡಿ ಪಾತ್ರ ಮಾಡೋಕೆ ಉದ್ದ ಕೂದಲು ಇರಲೇಬೇಕು. ವಿಜಯ್ ಭರಮಸಾಗರ