ಅದೊಂದು ಸಣ್ಣ ಹಳ್ಳಿ, ಹೆಸರು ನಾಗೆಕೊಪ್ಲು. ಊರಲ್ಲೊಂದು ವಿಚಿತ್ರ ಸಮಸ್ಯೆ, ಕೇಳುವುದಕ್ಕೆ ಭಯಾನಕ. ಅಲ್ಲಿ ಏನಾಗುತ್ತಿದೆ? ದುರ್ಘಟನೆಗಳ ಹಿಂದೆ ಯಾರ ಕೈವಾಡವಿದೆ? ಎಷ್ಟೇ ಹುಡುಕಿದರೂ ಸಿಗ ಲಾರದ ಉತ್ತರ, ಬಗೆಹರೆಯದ ಸಮಸ್ಯೆ. ಈ ಸಮಸ್ಯೆ ಮುಂದೆ ಹೇಗೆ ಅಂತ್ಯ ಕಾಣುತ್ತದೆ ಎಂಬುದೇ ಈ ವಾರ ತೆರೆಕಂಡ “ಹಗ್ಗ’ ಸಿನಿಮಾದ ಕಥಾ ಹಂದರ.
ಮೇಲ್ನೋಟಕ್ಕೆ ಇದು ಹಾರರ್ ಸಿನಿಮಾ ರೀತಿ ಕಂಡರೂ, ನಿಗೂಢತೆಯ ನಿರೂಪಣೆ ಇಲ್ಲಿ ಹೆಚ್ಚಾಗಿ ಕಂಡುಬಂದಿದೆ. ಚಿತ್ರದ ಮೊದಲಾರ್ಧ ಪ್ರೀತಿ, ಪ್ರೇಮ, ಹಾಡು, ಡ್ಯಾನ್ಸ್, ಫೈಟ್ ಹೀಗೆ ಸಾಗಿದರೆ, ಅಸಲಿ ಕಥೆ ಶುರುವಾಗುವುದೇ ಮಧ್ಯಂ ತರ ದಿಂದ. ವಿಚಿತ್ರ ಕೊಲೆ ಗಳ ಸರಣಿಯ ಹಿಂದಿರುವ ರಹಸ್ಯವನ್ನು ಬೆನ್ನು ಹತ್ತುವ ನಾಯಕ, ನಾಯಕಿಗೆ ಹಿಂದೆ ನಡೆದ ದುರ್ಘಟನೆ ಯೊಂದರ ಬಗ್ಗೆ ಅರಿವಿಗೆ ಬರುತ್ತದೆ. ಇಲ್ಲಿ ಪ್ರೇತಾತ್ಮದ ಸೇಡಿದೆ, ಹಳೆಯದೊಂದು ವೈಷಮ್ಯವಿದೆ, ವಾಮಾ ಚಾರ, ಮಾಟಮಂತ್ರಗಳ ಅಂಶಗಳೂ ಕಥೆಯಲ್ಲಿ ಅಡಕವಾಗಿವೆ. ಇವುಗಳಿಗೆಲ್ಲ ಕೊನೆ ಕಾಣಿಸುವತ್ತ ಕಥೆ ಸಾಗುತ್ತದೆ.
ಚಿತ್ರದ ದ್ವಿತೀಯಾರ್ಧದಲ್ಲಿ ಬರುವ ಸಣ್ಣ ಕಥೆಯೇ ಈ ಚಿತ್ರಕ್ಕೆ ತಿರುವು. ಹಗ್ಗ ಇಲ್ಲಿ ಕೇವಲ ಹಗ್ಗವಾಗದೇ ಕಥೆಗೆ ಜೀವ ತುಂಬುವ ವಸ್ತುವಾಗಿದೆ. ಗ್ರಾμಕ್ಸ್ ಅಂಶಗಳು ಚಿತ್ರದ ಮೆರಗನ್ನು ಹೆಚ್ಚಿಸಿವೆ. ಎರಡನೇ ಭಾಗದಂತೆ, ಮೊದಲನೇ ಭಾಗದಲ್ಲೂ ನಿರೂಪಣೆ ಇದ್ದಿದ್ದರೆ ಸಿನಿಮಾ ಮತ್ತಷ್ಟು ರೋಚಕವೆನಿಸುತ್ತಿತ್ತು. ಆದರೂ, ನಿರ್ದೇಶಕ ಅವಿನಾಶ್ ಕಥೆ ಕಟ್ಟಿಕೊಡುವಲ್ಲಿ ಎಡವಿಲ್ಲ.
ನಟಿ ಅನು ಪ್ರಭಾಕರ್ ಅವರ ಭಿನ್ನ ಅವತಾರವನ್ನು ಚಿತ್ರದಲ್ಲಿ ಕಾಣಬಹುದು. ಅವರ ಸಂಭಾಷಣೆಗಳು ಕಡಿಮೆ ಯಿದ್ದರೂ ನಟನೆಯಿಂದಲೇ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ನಟಿ ಭವಾನಿ ಪ್ರಕಾಶ್ ಅವರ ನಟನೆಯೂ ಚಿತ್ರದ ಮತ್ತೂಂದು ಹೈಲೈಟ್. ಹರ್ಷಿಕಾ ಪೂಣಚ್ಚ ಹಾಗೂ ವೇಣು ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಉಳಿದಂತೆ ಪ್ರಿಯಾ ಹೆಗ್ಡೆ, ಅವಿನಾಶ್, ಸುಧಾ ಬೆಳವಾಡಿ, ತಬಲಾ ನಾಣಿ, ಸಂಜು ಬಸಯ್ಯ ಚಿತ್ರದಲ್ಲಿ ನಟಿಸಿದ್ದಾರೆ.
ನಿತೀಶ ಡಂಬಳ