Advertisement

ಕೋಳಿಫಾರಂ ಸ್ಥಳಾಂತರಕ್ಕೆ ಶಾಸಕ ನಾಯ್ಕ ಸೂಚನೆ

06:18 PM May 03, 2020 | Naveen |

ಹಗರಿಬೊಮ್ಮನಹಳ್ಳಿ: “ಒಂದಿಷ್ಟು ವಿಷನಾದ್ರೂ ಕೊಟ್ಟಬೇಡಿ. ಇಲ್ಲ ನೊಣಗಳ ಹಾವಳಿಯಿಂದ ನಮ್ಮನ್ನು ಮುಕ್ತಿಗೊಳಿಸಿ’ ಎಂದು ಶಾಸಕ ಎಸ್‌. ಭೀಮಾನಾಯ್ಕ ಬಳಿ ವಿವಿಧ ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡರು.

Advertisement

ಹೌದು. ತಾಲೂಕಿನ ಕ್ಯಾತ್ಯಾಯನಮರಡಿ, ಓಬಳಾಪುರ, ಕಡ್ಲಬಾಳು ಗ್ರಾಮಸ್ಥರು ನೊಣಗಳ ಹಾವಳಿಗೆ ಬೇಸತ್ತಿದ್ದಾರೆ. ಈ ಗ್ರಾಮಗಳ ಮಧ್ಯೆ ಭಾಗದಲ್ಲಿರುವ ಕೋಳಿಫಾರಂನಿಂದಾಗಿ ನೋಣಗಳ ಸಮಸ್ಯೆ ಜನರ ನಿದ್ದೆಗೆಡಿಸಿದೆ. ಜನರ ಸಮಸ್ಯೆ ಆಲಿಸಿದ ಶಾಸಕ ಭೀಮಾನಾಯ್ಕ ಓಬಳಾಪುರ ಗ್ರಾಮಕ್ಕೆ ಭೇಟಿ ನೀಡಿ ಜನರ ಸಂಕಷ್ಟಕ್ಕೆ ಸ್ಪಂದಿಸಿದರು. ಸ್ಥಳದಲ್ಲಿದ್ದ ತಹಶೀಲ್ದಾರ್‌ ಆಶಪ್ಪ ಪೂಜಾರ್‌ ಗೆ ಕೂಡಲೇ ಕೋಳಿಫಾರಂನ್ನು ಬಂದ್‌ ಮಾಡಿಸಿ. ಲಾಕ್‌ಡೌನ್‌ನಿಂದಾಗಿ ಕೋಳಿಗಳು ಫಾರಂನಲ್ಲಿಯೇ ಇರುವುದರಿಂದ ಈ ಸಮಸ್ಯೆ ಎದುರಾಗಿದೆ. ಕೂಡಲೇ ಆರು ತಿಂಗಳುಗಳ ಕಾಲ ಕೋಳಿಫಾರಂ ಬಂದ್‌ ಮಾಡಿಸಿ. ನಂತರ ಇಲ್ಲಿಯ ಗ್ರಾಮಸ್ಥರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಪ್ರಾರಂಭಿಸೋದೋ ಬೇಡವೋ ಎಂಬುದನ್ನು ಚರ್ಚಿಸೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ| ಸುಲೋಚನಾ, ಪಶು ಸಹಾಯಕ ನಿರ್ದೇಶಕ ಡಾ| ದೇವಗಿರಿ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ, ತಾಪಂ ಸದಸ್ಯ ಅನಿಲ್‌ ಜಾಣ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ, ಹಾಲ್ದಾಳ್‌ ವಿಜಯಕುಮಾರ, ಕೇಶವರೆಡ್ಡಿ, ಬಾಲಕೃಷ್ಣಬಾಬು, ಡಿ.ಮಂಜುನಾಥ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next