Advertisement

ಜಿಂದಾಲ್‌ ಕಾರ್ಖಾನೆ ಸ್ಥಗಿತಗೊಳಿಸಲು ಒತ್ತಾಯ

01:36 PM Jun 19, 2020 | Naveen |

ಹಗರಿಬೊಮ್ಮನಹಳ್ಳಿ: ಕೋವಿಡ್ ತಡೆಯುವ ಹಿನ್ನೆಲೆಯಲ್ಲಿ ಜಿಲ್ಲೆಯ ಜಿಂದಾಲ್‌ ಕಾರ್ಖಾನೆಯನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿ ಕನ್ನಡ ಯುವಶಕ್ತಿ ವೇದಿಕೆ ಮತ್ತು ಕೋವಿಡ್‌ 19 ವಾಲೈಂಟರ್ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಯುವಶಕ್ತಿ ವೇದಿಕೆ ಸಂತೋಷ ಪೂಜಾರ್‌ ಮಾತನಾಡಿ, ಜಿಲ್ಲೆಯಲ್ಲಿ 300ಕ್ಕೂ ಹೆಚ್ಚು ಕೋವಿಡ್ ಸೋಂಕಿತರಲ್ಲಿ ಬಹುತೇಕರು ಜಿಂದಾಲ್‌ ಕಾರ್ಖಾನೆಯವರಾಗಿದ್ದರೆ. ಜಿಲ್ಲೆಯಲ್ಲಿ ಕೋವಿಡ್ ಹಾವಳಿ ನಿರಂತರವಾಗಿದೆ. ಈ ಹಿನ್ನೆಲೆಯಲ್ಲಿ ಸಮುದಾಯದಲ್ಲಿ ಸೋಂಕು ಹರಡದಂತೆ ಕಾರ್ಖಾನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗದಂತೆ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕೂಡಲೇ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಈ ಕಂಪನಿಯನ್ನು ಸೀಲ್‌ಡೌನ್‌ ಮಾಡಬೇಕು ಎಂದು ಒತ್ತಾಯಿಸಿದರು.

ವೇದಿಕೆಯ ಅಧ್ಯಕ್ಷ ಸಂಚಿ ಶಿವಕುಮಾರ್‌, ಪದಾಧಿಕಾರಿಗಳಾದ ಚಂದ್ರಶೇಖರ, ಪೋಟೋ ವೀರೇಶ, ಎಂ. ಗುರುಬಸವರಾಜ, ಚಿಂತ್ರಪಳ್ಳಿ ನಾಗರಾಜ, ಅವಿನಾಶ ಜಾದವ್‌, ಫೋಟೋ ರಾಮಣ್ಣ, ಹರ್ಷಾಗೌಡ, ಜಿ.ಎಂ.ಜಗದೀಶ, ವಿನಯ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next