Advertisement

ಸ್ವಯಂ ಜಾಗೃತರಾಗಬೇಕಿದೆ ಜನ

04:39 PM Jun 25, 2020 | Naveen |

ಹಗರಿಬೊಮ್ಮನಹಳ್ಳಿ: ಕೋವಿಡ್ ವೈರಸ್‌ ನಿಂದಾಗಿ ಇಡೀ ವಿಶ್ವವೇ ತಲ್ಲಣಗೊಂಡಿದೆ. ಕಣ್ಣಿಗೆ ಕಾಣದ ವೈರಸ್‌ ವಿರುದ್ಧ ನಾವೆಲ್ಲ ಹೋರಾಡಬೇಕಿದೆ ಎಂದು ಕಿರಾಣಿ ವರ್ತಕರ ಸಂಘದ ಅಧ್ಯಕ್ಷ ಬಸವರೆಡ್ಡಿ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ವೃತ್ತದ ಬಳಿ ಪುರಸಭೆ ಸಹಯೋಗದೊಂದಿಗೆ ಕಿರಾಣಿ ವರ್ತಕರ ಸಂಘದಿಂದ ನಡೆದ ಕೋವಿಡ್ ಜನಜಾಗೃತಿ ಕಾರ್ಯಕ್ರಮಕ್ಕೆ ಸ್ಯಾನಿಟೈಸರ್‌ ಸಿಂಪಡಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು. ಕೋವಿಡ್ ಮದ್ದಿಲ್ಲದ ಮಹಾಮಾರಿಯಾಗಿದೆ ಆದ್ದರಿಂದ ಸಾರ್ವಜನಿಕರು ಸ್ವಯಂ ಜಾಗೃತಿ ಹೊಂದಬೇಕು ಎಂದರು. ಜೂ.25ರಂದು ನಡೆಯುವ ಎಸ್ಸೆಎಸ್ಸೆಎಲ್‌ಸಿ ಪರೀಕ್ಷಾ ಕೇಂದ್ರಗಳಿಗೂ ಸಹ ಸ್ಯಾನಿಟೈಸರ್‌ ಸಿಂಪಡಣೆ ಮಾಡುತ್ತೇವೆ ಎಂದು ತಿಳಿಸಿದರು.

ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಗಂಗಣ್ಣ ಮಾತನಾಡಿ, ಕೋವಿಡ್ ತಡೆಗಟ್ಟಲು ಸರಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು. ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಮಾತನಾಡಿದರು. ಕಿರಾಣಿ ವರ್ತಕರ ಸಂಘದ ಉಪಾಧ್ಯಕ್ಷ ರೂಪಾರಾಂಜೀ, ಕಾರ್ಯದರ್ಶಿ ಕುಮಾರ್‌, ಖಜಾಂಚಿ ಸಂದೀಪ್‌, ಕೊಟ್ರೇಶ್‌, ವೀರಯ್ಯ ಸ್ವಾಮಿ, ವಿಕ್ರಮ್‌, ವಿವಿಧ ವರ್ತಕರು, ಪರಿಸರ ಅಭಿಯಂತ ಜಗದೀಶ, ನೈರ್ಮಲ್ಯ ಮೇಸ್ತ್ರಿ ವೀರಣ್ಣ, ಪ್ರಭಾಕರ, ಆರೋಗ್ಯಾಧಿಕಾರಿ ಶಶಿಭೂಷಣ್‌ ಹಿರೇಮಠ, ನಾಗರತ್ನ, ಜಯಲಕ್ಷ್ಮಿ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next