ನವದೆಹಲಿ:ಮುಂಬೈ ಬಾಂಬ್ ಸ್ಫೋಟದ ರೂವಾರಿ, ಜೆಯುಡಿ ಉಗ್ರ ಹಫೀಜ್ ಸಯೀದ್ ಬಿಡುಗಡೆಯಾಗಿರುವುದಕ್ಕೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಪ್ಪುಗೆ ತಂತ್ರ ವಿಫಲವಾಗಿದೆ ಎಂದು ರಾಹುಲ್ ಶನಿವಾರ ಟೀಕಿಸಿದ್ದಾರೆ.
ನರೇಂದ್ರಭಾಯಿ, ಇದು ಯಾವುದೇ ರೀತಿಯಲ್ಲೂ ಪ್ರಯೋಜನವಾಗದು..ಸ್ಫೋಟ ರೂವಾರಿ ಬಂಧಮುಕ್ತವಾಗಿದ್ದಾನೆ.
ಲಷ್ಕರ್ ಎ ತೊಯ್ಬಾಗೆ ಪಾಕಿಸ್ತಾನದ ಐಎಸ್ಐ ಹಣಕಾಸು ನೆರವು ನೀಡಬಾರದೆಂದು ಅಮೆರಿಕ ಅಧ್ಯಕ್ಷ ಟ್ರಂಪ್ ಮುಂಜಾಗ್ರತೆ ವಹಿಸಿದ್ದಾರೆ…ಆದರೆ ನಿಮ್ಮ(ಮೋದಿ) ಅಪ್ಪುಗೆ ತಂತ್ರ ವಿಫಲವಾಗಿದೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡುವ ಮೂಲಕ ವ್ಯಂಗ್ಯವಾಡಿದ್ದಾರೆ.
ಇನ್ನೂ ಹೆಚ್ಚಿನ ಅಪ್ಪುಗೆಯ ಅಗತ್ಯವಿದೆ ಎಂದು ರಾಹುಲ್ ಮೋದಿಗೆ ಟಾಂಗ್ ನೀಡಿದ್ದಾರೆ. ಮುಂಬೈ ಸ್ಫೋಟ ರೂವಾರಿ ಹಫೀಜ್ ಸಯೀದ್ ನನ್ನು ಗೃಹಬಂಧನದಿಂದ ಪಾಕಿಸ್ತಾನ ಸರ್ಕಾರ ಸೂಕ್ತವಾದ ಸಾಕ್ಷ್ಯಾಧಾರ ನೀಡದ ಪರಿಣಾಮ ಬಿಡುಗಡೆಗೊಂಡ ಬೆನ್ನಲ್ಲೇ ರಾಹುಲ್ ಈ ಪ್ರತಿಕ್ರಿಯೆ ನೀಡಿದ್ದಾರೆ.