51ನೇ ಟೆಸ್ಟ್ ಆಡಲಿಳಿದ ಹಫೀಜ್ 126 ರನ್ ಬಾರಿಸಿದರು.
ಇದು ಅವರ 10ನೇ ಶತಕ. 208 ಎಸೆತಗಳ ಬ್ಯಾಟಿಂಗ್ ವೇಳೆ 15 ಬೌಂಡರಿ ದಾಖಲಾಯಿತು. ಜತೆಗಾರ ಇಮಾಮ್ ಉಲ್ ಹಕ್ ಕೂಡ ಕ್ರೀಸ್ ಆಕ್ರಮಿಸಿಕೊಂಡು ಆಸೀಸ್ ದಾಳಿಯನ್ನು ದಂಡಿಸತೊಡಗಿದರು. ಇವರಿಬ್ಬರೂ 63 ಓವರ್‌ಗಳ ಜತೆಯಾಟ ನಡೆಸಿ ಮೊದಲ ವಿಕೆಟಿಗೆ 205 ರನ್ ಪೇರಿಸಿದರು. ಇಮಾಮ್ ಗಳಿಕೆ 76 ರನ್ (188 ಎಸೆತ, 7 ಬೌಂಡರಿ, 2 ಸಿಕ್ಸರ್).
Advertisement
ಈ ಜೋಡಿಯನ್ನು ಸ್ಪಿನ್ನರ್ ಲಿಯೋನ್ ಬೇರ್ಪಡಿಸಿದ ಬಳಿಕ ಆಸ್ಟ್ರೇಲಿಯ ಹಿಡಿತ ಸಾಧಿಸ ತೊಡಗಿತು. ಆರಂಭಿಕರಿಬ್ಬರು 17 ರನ್ ಅಂತರದಲ್ಲಿ ಪೆವಿಲಿಯನ್ ಸೇರಿಕೊಂಡರು. ಶತಕವೀರ ಹಫೀಜ್ ವಿಕೆಟ್ ಸಿಡ್ಲ್ ಪಾಲಾಯಿತು. 80 ಎಸೆತಗಳಿಂದ 18 ರನ್ ಮಾಡಿದ ಆಜರ್ ಅಲಿ ಅವರನ್ನು ಹಾಲಂಡ್ ಪೆವಿಲಿಯನ್ನಿಗೆ ರವಾನಿಸಿದರು. ಮೂರೂ ವಿಕೆಟ್ ಅಂತಿಮ ಅವಧಿಯಲ್ಲಿ ಉರುಳಿತು. ಹ್ಯಾರಿಸ್ ಸೊಹೈಲ್ (15) ಮತ್ತು ಮೊಹಮ್ಮದ್ ಅಬ್ಟಾಸ್ (1) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.