Advertisement

ಹದಿಯಾ ಸಂತೋಷವಾಗಿ ಇದ್ದಾಳೆ: ಮಹಿಳಾ ಆಯೋಗ

06:55 AM Nov 07, 2017 | Team Udayavani |

ಕೊಟ್ಟಾಯಂ: ಕೇರಳ ಲವ್‌ ಜಿಹಾದ್‌ ಪ್ರಕರಣದಿಂದಾಗಿ ದೇಶದ ಕುತೂಹಲ ಕೆರಳಿಸಿರುವ ಯುವತಿ ಹದಿಯಾ ಆರೋಗ್ಯವಾಗಿದ್ದು, ಇದೇ 27ರಂದು ಸುಪ್ರೀಂ ಕೋರ್ಟ್‌ ಮುಂದೆ ಹಾಜರಾಗಲು ಕಾತರದಿಂದಿದ್ದಾಳೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಉಸ್ತುವಾರಿ ಹೊತ್ತಿರುವ ರೇಖಾ ಶರ್ಮಾ ಹೇಳಿದ್ದಾರೆ.

Advertisement

ಹದಿಯಾಳನ್ನು ಗೃಹಬಂಧನದಲ್ಲಿ ಇಡುವ ಮೂಲಕ ಮಹಿಳಾ ಹಕ್ಕುಗಳನ್ನು ಉಲ್ಲಂ ಸಲಾಗುತ್ತಿದೆ ಎಂದು ಕೇರಳದ ಮುಸ್ಲಿಂ ಸಂಘಟನೆಗಳು ಆರೋಪಿಸಿದ್ದವು. ಈ ಹಿನ್ನೆಲೆಯಲ್ಲಿ ರೇಖಾ ಅವರು ಸೋಮವಾರ ಕೊಟ್ಟಾಯಂ ನಲ್ಲಿರುವ ಹದಿಯಾಳ ಮನೆಗೆ ಭೇಟಿ ನೀಡಿದ್ದರು. ಬಳಿಕ ಮಾತನಾಡಿದ ಅವರು, “ನಾನು ಹದಿಯಾ(ಅಖೀಲಾ)ಳನ್ನು ಭೇಟಿಯಾದೆ.

ಆಕೆ ಆರೋಗ್ಯವಾಗಿದ್ದಾಳೆ. ಅವಳಿಗೆ ಯಾರೂ ಹಿಂಸೆ ನೀಡುತ್ತಿಲ್ಲ. ನಗು ನಗುತ್ತಾ, ಖುಷಿಯಾಗಿ ಇದ್ದಾಳೆ,’ ಎಂದು ಹೇಳಿದ್ದಾರೆ. ಅಲ್ಲದೆ, ನಾನು ಕೇರಳದಲ್ಲಿ ಒತ್ತಾಯ ಪೂರ್ವಕವಾಗಿ ಮತಾಂತರ ಆಗಿರುವ ಇತರೆ ಹೆಣ್ಣು ಮಕ್ಕಳೊಂ ದಿಗೆ ಮಾತನಾಡಿ, ನಂತರ ವರದಿ ಸಿದ್ಧಪಡಿಸುತ್ತೇನೆ ಎಂದೂ ರೇಖಾ ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next