Advertisement

ಶೋಷಿತರ ಧ್ವನಿಯಾಗಿದ್ದ ಹಡಪದ ಅಪ್ಪಣ್ಣ

12:19 PM Jul 28, 2018 | Team Udayavani |

ಹುಣಸೂರು: ಸವಿತಾ ಸಮಾಜ ಸೇರಿದಂತೆ ಶೋಷಿತ ಸಮಾಜಗಳನ್ನು 2ಎಯಿಂದ ಪ್ರವರ್ಗ-1ಕ್ಕೆ ಸೇರಿಸಲು ಮುಖ್ಯಮಂತ್ರಿಗಳ ಮೇಲೆ ಒತ್ತಡ ಹಾಕುವುದಾಗಿ ಶಾಸಕ ಎಚ್‌.ವಿಶ್ವನಾಥ್‌ ತಿಳಿಸಿದರು. 

Advertisement

ನಗರದ ಅಂಬೇಡ್ಕರ್‌ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಸವಿತಾ ಸಮಾಜದ ಆಯೋಜಿಸಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸವಿತಾ ಸಮಾಜದಂತಹ ಶೋಷಿತ ಸಮಾಜಗಳು ಸಮಾಜದ ಮುಖ್ಯವಾಹಿನಿಗೆ ಬರಲು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು. ಉನ್ನತ ಹುದ್ದೆ ಪಡೆಯಲು ಶ್ರಮ ಹಾಕಬೇಕು ಎಂದರು. 

ಇದೀಗ ಎಲ್ಲಾ ಸಮಾಜಗಳನ್ನು ಗೌರವದಿಂದ ಕಾಣಲಾಗುತ್ತಿದೆ. ಸರ್ಕಾರ ಹಿಂದುಳಿದ ಸಮಾಜಗಳ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಆದ್ಯತೆ ನೀಡುತ್ತಿದೆ. ಇದಕ್ಕೆ ನಿಮ್ಮ ವೃತ್ತಿಯ ಜೊತೆಗೆ ಶಿಕ್ಷಣ ಪಡೆಯುವುದೇ ದೊಡ್ಡ ಗೌರವ. ಸಮಾಜಗಳು ಸಂಘಟನೆಯಿಂದ ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು. ನಿವೇಶನ ಸೇರಿದಂತೆ ನಿಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆ ಎಂದರು. 

ಶಿಕ್ಷಣ ಇಲಾಖೆಯ ರಂಗಯ್ಯನಕೊಪ್ಪಲು ಮಾಧುಪ್ರಸಾದ್‌ ಮಾತನಾಡಿ, 12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದಲ್ಲಿದ್ದ ಅಪ್ಪಣ್ಣ ಶೋಷಿತರಿಗೆ ಧ್ವನಿಯಾಗಿದ್ದವರು. ಪ್ರತಿಯೊಬ್ಬರೂ ಅಪ್ಪಣ್ಣನವರ ವಚನಗಳನ್ನು ಅಧ್ಯಯನ ಮಾಡಬೇಕು. ವಚನ ಸಾಹಿತ್ಯದಲ್ಲಿ 2 ಸಾವಿರಕ್ಕೂ ಅಧಿಕ ವಚನಗಳಿದ್ದರೆ, ಅದರಲ್ಲಿ ಹಡಪದ ಅಪ್ಪಣ್ಣನವರ 223 ವಚನಗಳು ಪ್ರಮುಖವಾದವು ಎಂದರು.

ಕಾರ್ಯಕ್ರಮದಲ್ಲಿ ಸಾಂಬಸದಾಶಿವ ಸ್ವಾಮೀಜಿ, ನಟರಾಜ ಸ್ವಾಮೀಜಿ, ತಹಶೀಲ್ದಾರ್‌ ಮೋಹನ್‌, ಸಮಿತಿ ಸದಸ್ಯ ಜಯರಾಂ, ತಾಲೂಕು ಅಧ್ಯಕ್ಷ ಗದ್ದಿಗೆ ಗೌರೀಶ್‌, ನಗರಸಭೆ ಅಧ್ಯಕ್ಷ ಶಿವಕುಮಾರ್‌, ಜಿಪಂ ಸದಸ್ಯ ಸುರೇಂದ್ರ, ತಾಪಂ ಅಧ್ಯಕ್ಷೆ ಪದ್ಮಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ್‌, ನಗರಸಭೆ ಸದಸ್ಯ ಬಾಬು, ಇಒ ಕೃಷ್ಣಕುಮಾರ್‌, ಸವಿತಾ ಸಮಾಜದ ದೇವರಾಜ್‌, ರಮೇಶ್‌,ಮಾದಪ್ಪ, ಜಲೇಂದ್ರ, ಕೃಷ್ಣ, ರಂಗಸ್ವಾಮಿ ಇತರರಿದ್ದರು. 

Advertisement

ಮೆರವಣಿಗೆ: ಕಾರ್ಯಕ್ರಮಕ್ಕೂ ಮುನ್ನ ಮಂಜುನಾಥ ದೇವಾಲಯದ ಬಳಿಯಿಂದ ಬೆಳ್ಳಿ ರಥದಲ್ಲಿ ಹಡಪದ ಅಪ್ಪಣ್ಣನವರ ಭಾವಚಿತ್ರವನ್ನಿರಿಸಿ ಮೆರವಣಿಗೆ ಮಾಡಲಾಯಿತು. ಕಳಸಹೊತ್ತ ನೂರಾರು ಹೆಂಗಳೆಯರು ಹಾಗೂ ನೂರಕ್ಕೂ ಹೆಚ್ಚು ಸಮಾಜದ ಕಲಾವಿದರು ಸ್ಯಾಕ್ನ್‌, ನಾದಸ್ವರ, ಡೋಲು ನುಡಿಸುವ ಮೂಲಕ ಇಡೀ ಮೆರವಣಿಗೆಗೆ ಕಳೆಕಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next