ಕೆ.ಆರ್.ನಗರ: ತಾಲೂಕಿನಲ್ಲಿ ಕೆಲವು ಮಕ್ಕಳಲ್ಲಿ ಎಚ್1ಎನ್1 ಪ್ರಕರಣ ಕಂಡು ಬಂದಿದ್ದು, ಅದಕ್ಕೂ ಪ್ರತ್ಯೇಕ ವಾರ್ಡು ಪ್ರಾರಂಭಿಸಲು ಸೂಚಿಸಲಾಗಿದೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣ ದಲ್ಲಿ 96 ಲಕ್ಷ ರೂಗಳ ವೆಚ್ಚದ ವೈದ್ಯಕೀಯ ಆಮ್ಲಜನಕ ತಯಾರಿಕಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತಾಲೂಕು ಕೇಂದ್ರವಾದ ಸಾಲಿಗ್ರಾಮಕ್ಕೆ ತಹಶೀಲ್ದಾರ್ ಮತ್ತು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ನೇಮಕದ ಆದೇಶ ಒಂದೆರಡು ದಿನಗಳಲ್ಲಿ ಸರ್ಕಾರದಿಂದ ಹೊರ ಬೀಳಲಿದೆ.
ಬಿಳಿಕೆರೆ-ಬೇಲೂರು ರಾಜ್ಯ ಹೆದ್ದಾರಿ ಯನ್ನು 388 ಕೋಟಿ ರೂ ವೆಚ್ಚದಲ್ಲಿ ಚತುಷ್ಪಥ ರಸ್ತೆಗೆ ಮೇಲ್ದರ್ಜೆಗೇರಿಸಲು ಮಂಜೂರಾತಿ ದೊರೆತಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು. ಈ ವೇಳೆ ತಹಸೀಲ್ದಾರ್ ಎಸ್. ಸಂತೋಷ್, ತಾಪಂ ಇಒ ಎಚ್.ಕೆ.ಸತೀಶ್.
ಇದನ್ನೂ ಓದಿ:- ರಾಷ್ಟ್ರಮಟ್ಟದ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ ಗೌಳಿ ಪ್ರತಿಭೆ
ಪುರಸಭೆ ಸದಸ್ಯರಾದ ಕೆ.ಎಲ್.ಜಗದೀಶ್, ಕೆ.ಪಿ.ಪ್ರಭುಶಂಕರ್, ಸಿ.ಉಮೇಶ್, ಬಿ.ಎಸ್. ತೋಂಟದಾರ್ಯ, ಮಾಜಿ ಸದಸ್ಯ ಎನ್. ಶಿವಕುಮಾರ್, ಮುಖ್ಯಾಧಿಕಾರಿ ಡಿ.ಪುಟ್ಟರಾಜು, ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಆರ್. ಮಹೇಂದ್ರಪ್ಪ, ವೈದ್ಯಾಧಿಕಾರಿ ಡಾ.ಎಂ.ಎಸ್ .ನಾಗೇಂದ್ರ, ವೈದ್ಯರಾದ ಡಾ.ಮಾಧವ್, ಡಾ.ಚಂದ್ರಕಲಾ, ಡಾ.ತಿರುಮಲ್ಲೇಶ್, ಡಾ. ದೀಪ್ತಿ, ಜೆಡಿಎಸ್ ನಗರಾಧ್ಯಕ್ಷ ಎಂ.ಕೆ.ಮಹದೇವ್, ಮುಖಂಡರಾದ ಹನಸೋಗೆ ನಾಗರಾಜು, ಕೃಷ್ಣಶೆಟ್ಟಿ, ಕೆ,ಎಸ್.ಮಲ್ಲಪ್ಪ, ವೀರಭದ್ರಾಚಾರ್, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ದೊರೆಸ್ವಾಮಿ, ಗುತ್ತಿಗೆದಾರರಾದ ಜಯಶಂಕರ್, ಜಯಶಂಕರ್ ಬಾಬು, ಪಿಎಸ್‌ಐ ಚಂದ್ರಹಾಸ ಇತರರಿದ್ದರು. 96 ಲಕ್ಷ ರೂ.ವೆಚ್ಚದ ಆಮ್ಲಜನಕ ಉತ್ಪಾದನೆ ಘಟನೆ ಉದ್ಘಾ ಟಿಸಿದ ಶಾಸಕ ಸಾರಾ ಮಹೇಶ್.
ನಿತ್ಯ 100 ಜನರಿಗೆ ಆಕ್ಸಿಜನ್ ಪೂರೈಕೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಆಮ್ಲಜನಕ ಉತ್ಪಾದನಾ ಘಟಕದಲ್ಲಿ ಪ್ರತಿ ನಿಮಿಷಕ್ಕೆ ಅರ್ಧ ಲೀಟರ್ ವೈದ್ಯಕೀಯ ಆಮ್ಲಜನಕ ಉತ್ಪಾದಿಸಬಹುದು. ಈ ಘಟಕದಲ್ಲಿನ ವಿಶೇಷ ಯಂತ್ರ 56 ಲಕ್ಷ ರೂ.ಗಳದಾಗಿದ್ದು, ಇದನ್ನು ಡಿಆರ್‌ಡಿಒದಿಂದ ಖರೀದಿಸಲಾಗಿದೆ. ನಿತ್ಯ 50 ರೋಗಿಗಳಿಗೆ ದಿನದ 24 ಗಂಟೆ ಆಮ್ಲಜನಕ ಪೂರೈಸಬಹುದು. ಆಮ್ಲಜನಕ ಸಂಗ್ರಹಿಸಿಟ್ಟುಕೊಂಡರೆ 100 ರೋಗಿಗಳಿಗೆ ಪೂರೈಸಬಹುದಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಎಂ.ಎಸ್.ನಾಗೇಂದ್ರ ಹೇಳಿದರು.