Advertisement

ಎಚ್‌1ಎನ್‌1 ರೋಗ ಹರಡದಂತೆ ಅಗತ್ಯ ಕ್ರಮ

06:30 AM Oct 16, 2018 | |

ಬಸವನಬಗೇವಾಡಿ: ರಾಜ್ಯದಲ್ಲಿ ಎಚ್‌1ಎನ್‌1 ರೋಗಹರಡದಂತೆ ಎಲ್ಲಾ ಆಸ್ಪತ್ರೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ಶಿವಾನಂದ ಪಾಟೀಲ ಹೇಳಿದರು.

Advertisement

ಪಟ್ಟಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ಎಚ್‌1ಎನ್‌1 ರೋಗ ಚಿಕಿತ್ಸೆಗೆ ಬೇಕಾಗುವ ಔಷಧೋಪಚಾರ ಸಿದಟಛಿವಾಗಿವೆ.

ಕಳೆದ ವರ್ಷ ರಾಜ್ಯದಲ್ಲಿ 3 ಸಾವಿರ ಜನರಿಗೆ ರೋಗ ತಲುಲಿದ್ದು 15 ಜನ ಮೃತಪಟ್ಟಿದ್ದರು. ಈ ವರ್ಷ ರಾಜ್ಯದಲ್ಲಿ 456 ಜನರಲ್ಲಿ ಎಚ್‌1ಎನ್‌1 ಕಂಡು ಬಂದಿದ್ದು 6 ಜನ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಎಚ್‌1ಎನ್‌1 ರೋಗ ಏಪ್ರಿಲ್‌ನಿಂದ ಅಕ್ಟೋಬರ್‌ ತಿಂಗಳವರೆಗೆ ಮಾತ್ರ ಹೆಚ್ಚಾಗಿ ಕಾಣಿಸಿಕೊಳ್ಳಲಿದ್ದು, ತೀವ್ರ ಸ್ವರೂಪದ ಜ್ವರ, ಗಂಟಲು ನೋವು, ಕೆಮ್ಮು, ಉಸಿರಾಟ ತೊಂದರೆ, ಎದೆ ನೋವು ಕಂಡು ಬಂದಲ್ಲಿ ತಕ್ಷಣ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next