Advertisement

ಕುರುಬರಿಗೆ ಸಿದ್ದರಾಮಯ್ಯನ ನೋಡಿದ್ರೆ ಇಂಗ್ಲೀಷ್ ಫಿಲಂ ನೋಡಿದ ಹಾಗೆ: ಎಚ್. ವಿಶ್ವನಾಥ್

01:27 PM Oct 26, 2021 | Team Udayavani |

ಮೈಸೂರು: ಕುರುಬರಿಗೆ ಸಿದ್ದರಾಮಯ್ಯನ ನೋಡಿದರೆ ಇಂಗ್ಲೀಷ್ ಸಿನಿಮಾ ನೋಡಿದ ಹಾಗೆ ಆಗುತ್ತದೆ. ಅದಕ್ಕೆ ವೇದಿಕೆಗೆ ಬಂದಾಗೆಲ್ಲಾ ಶಿಳ್ಳೆ, ಚಪ್ಪಾಳೆ ಹೊಡೆಯುತ್ತಾರೆ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಕುರುಬ ಸಮುದಾಯವನ್ನು ಹೈಜಾಕ್ ಮಾಡಿಕೊಂಡಿದ್ದಾರೆ. ಸಮುದಾಯಕ್ಕಾಗಿ ಏನೂ ಮಾಡಿಲ್ಲ. ಕೆಲವೊಂದು ಸಮುದಾಯ ಭವನ, ಕಲ್ಯಾಣ ಮಂಟಪ ಮಾಡಿದ್ದಾರೆ ಅಷ್ಟೇ. ಸಮುದಾಯದ ಆರ್ಥಿಕವಾಗಿ ಮುಂದುವರೆಯೋದಕ್ಕೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಹಾನಗಲ್-ಸಿಂಧಗಿ ಕ್ಷೇತ್ರದ ಕುರುಬ ಸಮುದಾಯಕ್ಕೆ ಸಂದೇಶ ರವಾನಿಸಿದ ಅವರು, ಸಮುದಾಯ ಹಾಗೂ ದೇಶದ ಓಳಿತಿಗಾಗಿ ಬೊಮ್ಮಾಯಿ ನೇತೃತ್ವದ ಬಿಜೆಪಿಗೆ ಮತಹಾಕಿ. ಇನ್ನೂ ಒಂದೂವರೆ ವರ್ಷ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುತ್ತದೆ. ಕುರುಬ ಕಲ್ಯಾಣ ಬಿಜೆಪಿಯಿಂದ ಮಾತ್ರ ಸಾಧ್ಯ. ಬಸವರಾಜ ಬೊಮ್ಮಾಯಿ ಕುರುಬ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದ್ದಾರೆ. ಹಾಗಾಗಿ ಸಮುದಾಯದ ಅಭಿವೃದ್ಧಿಗಾಗಿ ಕುರುಬರು ಬಿಜೆಪಿ ಬೆಂಬಲಿಸಿ ಎಂದರು.

ಇದನ್ನೂ ಓದಿ:ಕಾಂಗ್ರೆಸ್ ಭಯೋತ್ಪಾದಕರನ್ನು ಬೆಂಬಲಿಸುವ ಪಕ್ಷ: ಸಿ.ಟಿ.ರವಿ ವಾಗ್ದಾಳಿ

ಸಿದ್ದರಾಮಯ್ಯ ನೀವೂ ಕೂಡ ಮುಖ್ಯಮಂತ್ರಿಯಾಗಿದ್ದವರು. ನಿಮಗೆ ಕುರುಬ ಜನಾಂಗ ಸೇರಿದಂತೆ ಎಲ್ಲಾ ಜನಾಂಗದವರು ಮತ ಹಾಕಿದ್ದಾರೆ. ಆದರೆ ನೀವು ಹಾಗೆ ಮಾತನಾಡುತ್ತಿರುವುದು ಸಮುದಾಯಕ್ಕೆ ಶೋಭೆ ತರುವಂತದಲ್ಲ. ಮುಖ್ಯಮಂತ್ರಿ, ಪ್ರಧಾನಿಗಳನ್ನು ಏಕವಚನದಲ್ಲಿ ಮಾತನಾಡೋದು ಸಭ್ಯ ಸಮಾಜದಲ್ಲಿ ಸಣ್ಣತನ. ಕುರಿ ಮತ್ತು ಕಂಬಳಿ ವೃತ್ತಿಯ, ಸಮುದಾಯದ ಸ್ವತ್ತು. ಅದು ಒಂದು ಜಾತಿಯ ಸ್ವತ್ತಲ್ಲ. ಪ್ರಪಂಚದಲ್ಲಿ ಕುರಿಯನ್ನು ಹೆಚ್ಚು ಸಾಕುವುದು ಯುರೋಪ್, ಎರಡನೇಯದ್ದು ಭಾರತ. ಯುರೋಪ್‌ನಲ್ಲಿ ಅದು ಬಹು ಮುಖ್ಯ ಉದ್ಯಮ. ಆದರೆ ಭಾರತ ದೇಶದಲ್ಲಿ ಅದನ್ನು ಸಂಕುಚಿತ ಮಾಡಿ ಒಂದು ಜಾತಿಗೆ ಸೀಮಿತ ಮಾಡಲಾಗುದೆ. ಸಿದ್ದರಾಮಯ್ಯ ಸಂಕುಚಿತ ಆದಂತೆ ಕುರುಬರು ಏಕಾಂಗಿಗಳಾಗುತ್ತಾರೆ. ಇದರ ಅಪಾಯ ಮನಗಂಡು ಎಚ್ಚರಿಕೆಯಿಂದ ಮಾತನಾಡಿ. ರಾಜಕಾರಣದಲ್ಲಿ ನೀವು ಏಕಾಂಗಿಗಳಾಗಿ ಬಿಡುತ್ತೀರಿ ಎಂದರು.

Advertisement

ಕೃತಜ್ಞತೆ ಇಲ್ಲದ ನಾಯಕ: ಸಿದ್ದರಾಮಯ್ಯಗೆ ಕೃತಜ್ಞತೆ ಎಂಬುದೇ ಇಲ್ಲ. ಈ ನಾಡಿನಲ್ಲಿ ಕೃತಜ್ಞತೆ ಇಲ್ಲದ ನಾಯಕ ಅಂದರೆ ಸಿದ್ದರಾಮಯ್ಯ. ಹೆಚ್‌.ಡಿ.ದೇವೇಗೌಡ ಅವರು ನಿಮ್ಮನ್ನು ಆಚೆಗೆ ಹಾಕಿದಾಗ ನಿಮ್ಮನ್ನು ಹಾತುಕೊಂಡವರು ನಾನು. ನಂತರ ಎಸ್‌ಎಂ.ಕೃಷ್ಣ, ಹೆಚ್‌.ಎಂ.ರೇವಣ್ಣ, ಮಲ್ಲಿಕಾರ್ಜುನ ಖರ್ಗೆ. ಕಾಂಗ್ರೆಸ್ ಗೆ ಕರೆತಂದು ನಿಮ್ಮನ್ನು ವಿರೋಧ ಪಕ್ಷದ ನಾಯಕ, ನಂತರ ಮುಖ್ಯಮಂತ್ರಿಯಾದಿರಿ ಎಂದರು.

ಸಿದ್ದರಾಮಯ್ಯ ಒಂತರ ಇಂಗ್ಲಿಷ್ ನವರ ರೀತಿ. ನಿಮ್ಮನ್ನ ಒಳಗೆ ಕರೆತಂದರೆ, ನೀವು ನಮ್ಮನ್ನು ಹೊರ ಹಾಕಿದಿರಿ. ಶ್ರೀನಿವಾಸ್ ಪ್ರಸಾದ್ ಮನೆಗೆ ಹೋಗುವಾಗ ನಾನು ನಿಮಗೆ ಗನ್‌ಮ್ಯಾನ್ ಆಗಿದ್ದೆ. ಆದರೆ ನೀವು ಯಾರನ್ನೂ ಬಿಡಲಿಲ್ಲ, ಹೊರ ಹಾಕಿದಿರಿ. ಎಸ್‌.ಎಂ.ಕೃಷ್ಣ ನಿಮ್ಮನ್ನ ಅನ್ ಪಾಲಿಷ್ಡ್ ಡೈಮಂಡ್ ಅಂದರು. ಆದರೆ ನೀವು ಅವರನ್ನೂ ಏಕವಚನದಲ್ಲಿ ಮಾತನಾಡಿದಿರಿ ಎಂದು ಸಿದ್ದರಾಮಯ್ಯ ವಿರುದ್ಧ ವಿಶ್ವನಾಥ್ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next