Advertisement
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್ ‘ಕಾಗಿನೆಲೆ ಶ್ರೀಗಳಿಗೆ ನನಗಾದ ಅನ್ಯಾಯ ಕಾಣಿಸಲಿಲ್ಲವೆ? ನಾನೂ ಕುರುಬನಲ್ಲವೆ? ನನಗೆ ಅನ್ಯಾಯ ಆದಾಗ ಸ್ವಾಮೀಜಿ ಎಲ್ಲಿದ್ದರು? ರಾಜ್ಯದಲ್ಲಿರುವ ಕುರುಬ ಸಂಘಟನೆಗಳು ಎಲ್ಲಿದ್ದವು? ನನಗೆ ಅನ್ಯಾಯ ಮಾಡಿವರು ಯಾರು? ಇದೇ ಸಿದ್ದರಾಮಯ್ಯ ಅಲ್ಲವೆ.ಕಾಂಗ್ರೆಸ್‌ಗೆ ಕರೆತಂದು ವಿರೋಧ ಪಕ್ಷದ ನಾಯಕನನ್ನಾಗಿಸಿದ ನನ್ನನ್ನೇ ಮೂಲೆ ಗುಂಪು ಮಾಡಿದಾಗ ಎಲ್ಲಿದ್ದರು’ ಎಂದು ತೀವ್ರವಾಗಿ ಕಿಡಿ ಕಾರಿದರು.
Related Articles
Advertisement
ತಿರುಗೇಟು ನೀಡಿದ ಕನಕಪೀಠದ ನಿರಂಜನಾನಂದಪುರಿ ಶ್ರೀ
ವಾಗ್ಧಾಳಿ ನಡೆಸಿದ ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಅವರಿಗೆ ಕಾಗಿನೆಲೆ ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು 1992 ರಿಂದ ಸಮಾಜ ಕಟ್ಟುವಲ್ಲಿ ವಿಶ್ವನಾಥ್ ಅವರದ್ದೂ ಕೂಡ ಪ್ರಮುಖ ಪಾತ್ರ ಇದೆ .ಅವರು ನಮ್ಮ ಸಮಾಜದ ಪ್ರಮುಖ ನಾಯಕರು. ನಮ್ಮನ್ನ ಟೀಕೆ ಮಾಡಿ ಸಾಮಾಜವನ್ನು ಟೀಕೆ ಮಾಡಿ ಅವರಿಗೆ ಒಳ್ಳೆಯದಾಗುತ್ತದೆ ಅಂತಾದರೆ ನಮ್ಮದೇನು ಅಭ್ಯಂತರವಿಲ್ಲ. ಅದಕ್ಕೆ ಪ್ರತಿಕ್ರಿಯೆ ನೀಡಲು ಇಚ್ಛಿಸುವುದಿಲ್ಲ.
ವಿಶ್ವನಾಥ್ ಅವರು ತಮ್ಮ ಸ್ವಯಂಕೃತ ತಪ್ಪಿನಿಂದ ರಾಜಕೀಯದಲ್ಲಿ ಹಾಳಾಗಿದ್ದಾರೆ. ಹಿಂದೆ ದೇವೇಗೌಡ ಅವರನ್ನು ಘಟಸರ್ಪ ಎಂದಿದ್ದರು. ಸಿದ್ದರಾಮಯ್ಯ ಅವರನ್ನು ಕಪ್ಪೆ ಎಂದಿದ್ದರು ಎಂದರು.
ನಾನು ರಾಜಕೀಯದಲ್ಲಿ ಎಂದಿಗೂ ಮೂಗು ತೂರಿಸುವುದಿಲ್ಲ. ನಮ್ಮ ಸಮಾಜಕ್ಕೆ ಅನ್ಯಾಯ ಆದಾಗ ಧ್ವನಿ ಎತ್ತುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.