Advertisement

Kannada Cinema; ಮಾಂತ್ರಿಕ ಆಟ ಶುರು

10:40 AM Oct 18, 2024 | Team Udayavani |

ಮೂಢನಂಬಿಕೆಗಳನ್ನು ನಂಬಬೇಡಿ ಎಂಬ ಸಂದೇಶದ ಜೊತೆಗೆ ಭ್ರಮೆ ಹಾಗೂ ರಿಯಾ ಲಿಟಿಯ ಸುತ್ತ ನಡೆಯುವ ಕಥೆಯನ್ನೊಳಗೊಂಡ “ಮಾಂತ್ರಿಕ’ ಚಿತ್ರ ಇಂದು ತೆರೆಕಾಣುತ್ತಿದೆ. ವ್ಯಾನ ವರ್ಣ ಜಮ್ಮುಲ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಚಿತ್ರವಿದು.

Advertisement

ಸಕಾರಾತ್ಮಕ ಹಾಗೂ ನಕಾರಾತ್ಮಕ ಶಕ್ತಿಗಳ ಹಿಂದಿರುವ ಸತ್ಯಾಸತ್ಯತೆಯ ಹುಡುಕಾಟ ನಡೆಸುವ ವ್ಯಾಸವಾನ್‌ ಕೃಷ್ಟ ಎಂಬ ಘೋಸ್ಟ್‌ ಹಂಟರ್‌ ಪಾತ್ರದಲ್ಲೂ ಕಾಣಿಸಿಕೊಂಡಿರುವ ವ್ಯಾನ ವರ್ಣ ಜಮ್ಮುಲ ನಿರ್ಮಾಣ, ನಿರ್ದೇಶನ ಸೇರಿದಂತೆ 8 ವಿಭಾಗದಲ್ಲಿ ಕೆಲಸ ಮಾಡಿದ್ದಾರೆ.

ಕರ್ನಾಟಕ – ಮಹಾರಾಷ್ಟ್ರದ ಗಡಿ ಮಾನ್ಗುಡಿ ಎಂಬ ಸ್ಥಳದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವ ಟೈಂ ಟ್ರಾವೆಲ್‌ ಕಥೆಯಿದು.

ಮೊದಲು ನಮ್ಮ ಮನಸಿನಲ್ಲಿರುವ ಭಯ ಹೋಗಬೇಕು, ಹಾರರ್‌ ಜೊತೆಗೆ ಸಮಾಜಕ್ಕೆ ಸಂದೇಶ ಕೊಡುವ ಪ್ರಯತ್ನ ಮಾಡಿದ್ದೇವೆ ಎನ್ನುವುದು ನಿರ್ದೇಶಕರ ಮಾತು. ರಾಧಿಕಾ ಮಾಲಿ ಪಾಟೀಲ ಹಾಗೂ ಮೈಥಿಲಿ ನಾಯಕ್‌ ಚಿತ್ರದ ನಾಯಕಿಯರು. ನಿರ್ದೇ ಶಕರ ಪತ್ನಿ ಆಯನ ಚಿತ್ರದ ಕಾರ್ಯ ಕಾರಿ ನಿರ್ಮಾಪಕಿಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next