ಮೈಸೂರು : ಶಾಲಾ,ಕಾಲೇಜು, ಆಡಳಿತ ಮಂಡಳಿಯವರನ್ನ ಶಿಕ್ಷಣ ತಜ್ಣರು ಎಂದು ಭ್ರಮಿಸಬೇಡಿ. ಹೆಚ್ಚು ಶಾಲಾ ಕಾಲೇಜು ನಡೆಸುವವರು ಶಿಕ್ಷಣ ತಜ್ಞರಲ್ಲ. ಶಿಕ್ಷಣ ಜ್ಞಾನ ಇಲ್ಲದವರು ಸಮಿತಿಯಲ್ಲಿದ್ದಾರೆ. ಶಿಕ್ಷಣ ನೀತಿ ಸಮರ್ಪಕ ಜಾರಿಯಾಗಬೇಕಾದ್ರೆ ಸಮುದಾಯ ಎಲ್ಲರು ಸಮಿತಿಯಲ್ಲಿರಬೇಕು, ಶಿಕ್ಷಣ ಮಾರುವವರನ್ನ ಸಮಿತಿಗೆ ಕರೆಯಬೇಡಿ ಎಂದು ಮೈಸೂರಿನ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಕುರಿತು ಮಾತನಾಡಿದ ಅವರು ರಾಜ್ಯದಲ್ಲಿ ಶಿಕ್ಷಣ ನೀತಿ ಜಾರಿಗೆ ಸಮಿತಿ ರಚನೆ ಆಗುತ್ತಿದೆ, ಹಾಗಾಗಿ ಶಿಕ್ಷಣ ನೀತಿ ಜಾರಿ ಹಾಗೂ ಶಾಲೆ ಆರಂಭಕ್ಕೆ ಅವಸರ ಬೇಡ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅವರಿಗೆ ವಿಶ್ವನಾಥ್ ಸಲಹೆ ನೀಡಿದ್ದಾರೆ.
ಅದೆ ರೀತಿ ಶಾಲೆ ಆರಂಭಕ್ಕು ಅವಸರ ಬೇಡ. ಶಾಲೆ ಪುನಾರರಂಭಕ್ಕೆ ಪೋಷಕರಾಗಲಿ ಮಕ್ಕಳಾಗಲಿ ಕೇಳುತ್ತಿಲ್ಲ. ಆಡಳಿತ ಮಂಡಳಿಯ ಒತ್ತಡಕ್ಕೆ ಮಣಿಯಬೇಡಿ. ಶಾಲೆಗಳು ಹಾಗೂ ಆಸ್ಪತ್ರೆಗೆ ನಡೆಸೋರು ನಮ್ಮ ರಾಜಕಾರಣಿಗಳೆ ಹೆಚ್ಚಾಗಿದ್ದಾರೆ ಆದುದರಿಂದ ಅವರ ಅಭಿಪ್ರಾಯ ಕೇಳಿದರೆ ಶಿಕ್ಷಣ ದುರಂತ ಕಾಣಬೇಕಾಗುತ್ತದೆ ಎಂದರು.
ಮೈಸೂರು ದಸರಾ ಸರಳವಾಗಿ ನಡೆಯಲಿ :
ಕೋವಿಡ್ ಕಾರಣದಿಂದ ಈ ಬಾರಿ ದಸರಾ ಸರಳವಾಗಿ, ಶಾಶ್ತ್ರೋತ್ರವಾಗಿ ನಡೆಯಲಿ ಇಂತಹ ಸಂದರ್ಭದಲ್ಲಿ ಹೆಚ್ಚು ಜನರು ಸೇರುವುದು ಒಳ್ಳೆಯದಲ್ಲ. ಹೆಚ್ಚು ಜನ ಸೇರಿದರೇ ನಾವೇ ಅದರ ದುಷ್ಪರಿಣಾಮ ಏದುರಿಸಬೇಕಾಗುತ್ತದೆ. ಚಾಮುಂಡೇಶ್ವರಿಯನ್ನ ಶ್ರದ್ಧಾಭಕ್ತಿಯಿಂದ ಆರಾಧಿಸಲಿ. ಆದ್ದರಿಂದ ಸರಳವಾಗಿ ಆಚರಣೆ ಮಾಡೊದೆ ಸೂಕ್ತ ಎಂದು ಹೇಳಿದ್ದಾರೆ.