Advertisement
ನಗರದಲ್ಲಿ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಕೆ.ಎನ್. ರಾಜಣ್ಣ ಮತ್ತು ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಜಂಟಿ ಸುದ್ದಿಗೋಷ್ಠಿ ನಡೆಸಿದರು.
Related Articles
Advertisement
ದೇವೇಗೌಡರ ಋಣ ತೀರಿಸುವ ಆಸೆ ಇತ್ತು. ಆದರೆ ಚುನಾವಣೆಗೆ ನಿಂತಾಗ ಒಮ್ಮೆ ಮನೆಗೆ ಬಂದು ಮಾತಾಡಿಲ್ಲ, ಕೊನೇ ಪಕ್ಷ ಕರೆ ಮಾಡಿ ಕರೆದಿದ್ದರೂ ಅವರು ಇದ್ದಲ್ಲಿಗೆ ಹೋಗಿ ಮಾತನಾಡುತ್ತಿದ್ದೆ. ಅವರೇ ವೋಟ್ ಕೇಳದಿದ್ದಾಗ ಯಾರಿಗೆ ವೋಟ್ ಹಾಕೋದು? ಅವರು ಮನೆಗೆ ಬಂದು ಕೇಳಿದ್ದರು. ಹಾಗಾಗಿ ಬಸವರಾಜ್ ಗೆ ಬೆಂಬಲ ನೀಡಿದ್ದೆವು. ಬಸವರಾಜ್ ಗೆ ಬೆಂಬಲ ನೀಡಿದ್ದೆವೆಯೇ ಹೊರತು ಬಿಜೆಪಿಗೆ ಅಲ್ಲ ಎಂದರು.
ಪತ್ರಿಕಾಗೋಷ್ಠಿಗೆ ಜೆಡಿಎಸ್ ಶಾಸಕ ಎಸ್.ಆರ್. ಶ್ರೀನಿವಾಸ್ ಉಪಸ್ಥಿತಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಪಕ್ಷಕ್ಕೆ ಮೀರಿದ ಸ್ನೇಹ ವಿಶ್ವಾಸ ನಮ್ಮದು ಎಂದರು.
ಶಾಸಕ ಎಸ್.ಆರ್ ಶ್ರೀನಿವಾಸ್ ಮಾತನಾಡಿ, ನಾಯಕರು ಒಳಗೊಂದು ಹೊರಗೊಂದು ಮಾತನಾಡಬಾರದು. ಒಳ ಒಪ್ಪಂದ ಸತ್ಯ. ನಾನು ಆಡಿದ ಮಾತಿಗೆ ಬದ್ಧ. ನಾನು ಜೆಡಿಎಸ್ ನಲ್ಲೇ ಇರುತ್ತೇನೆ. ಹಿಂದಿನಿಂದಲೂ ರಾಜಣ್ಣ ಅವರ ಮೇಲೆ ಗೌರವವಿದೆ. ಅವರು ಗಾಡ್ ಫಾದರ್. ಪಕ್ಷೇತರನಾಗಿ ನಿಂತಾಗ ಗೆಲ್ಲಲು ಸಹಕಾರ ನೀಡಿದ್ದರು ಎಂದರು
ಬಿಜೆಪಿ ಸರಕಾರ ಬೀಳಲು ಬಿಡಲ್ಲ ಎಂದು ನಮ್ಮ ನಾಯಕರೇ ಹೇಳಿದ್ದಾರೆ. ಇನ್ನು 2.5ವರ್ಷ ಸರಕಾರ ಬೀಳಲ್ಲ, ಮಧ್ಯಂತರ ಚುನಾವಣೆ ಬರಲ್ಲ. ಆದರೆ, ಬಿಜೆಪಿಗೆ ನನ್ನ ಬೆಂಬಲವಿಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರ ಬಿಜೆಪಿಯರವನ್ನೇ ಕೇಳಬೇಕು. ಜೆಡಿಎಸ್ -ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ನಾನು ಬಿಜೆಪಿ ಜೊತೆ ಹೋಗಲ್ಲ ಅದಕ್ಕೆ ನನ್ನ ವಿರೋಧವಿದೆ ಎಂದರು.
ಶ್ರೀನಿವಾಸ್ ಕಾಂಗ್ರೆಸ್ ಗೆ?
ತುಮಕೂರು ಜಿಲ್ಲೆಯಲ್ಲಿ ಶೀಘ್ರ ರಾಜಕೀಯ ಬದಲಾವಣೆಗಳಾಗುವುದು ಖಚಿತವಾಗಿದೆ. ಹಲವು ರಾಜಕಾರಣಿಗಳು ಕಾಂಗ್ರೆಸ್ ಗೆ ಬರುವುದು ಖಚಿತಗೊಂಡಿದೆ. ಪ್ರಾರಂಭಿಕವಾಗಿ ಎಸ್.ಆರ್ ಶ್ರೀನಿವಾಸ್ ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ. ಮುಂದೆ ಇನ್ನೂ ಹಲವರು ಸೇರುವ ಸಾಧ್ಯತೆಯಿದೆ. ಆದರೆ ಶ್ರೀನಿವಾಸ್ ಮಾತ್ರ ನಾನು ಇನ್ನೂ ಜೆಡಿಎಸ್ ಬಿಟ್ಟಿಲ್ಲ ಎನ್ನುತ್ತಾರೆ.