Advertisement

2+3+4 ಫಾರ್ಮುಲಾದ ಬಗ್ಗೆ ಕೋರ್ಟ್ ಗೆ ಹೋದವರಿಗೆ ಗೊತ್ತಿರಬಹುದು: ಕುಮಾರಸ್ವಾಮಿ

04:29 PM Mar 09, 2021 | Team Udayavani |

ಬೆಂಗಳೂರು: ರಮೇಶ್ ಜಾರಕಿಹೊಳಿ ಹೇಳಿದ 2+3+4 ಫಾರ್ಮುಲಾ ಬಗ್ಗೆ ನನಗೇನೂ ಗೊತ್ತಿಲ್ಲ. ಕೋರ್ಟ್ ಗೆ ಹೋಗಿ ಇಂಜಕ್ಷನ್ ತಂದವರಿಗೆ ಗೊತ್ತಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆಯವರು ರಾಜಕಾರಣಕ್ಕೆ ಬಂದಾಗಿನಿಂದಲೂ ಈ ಸಿಡಿ ಪ್ರಕರಣಗಳಂತಹವನ್ನು ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಇಂತಹಾ ಪ್ರಕರಣಗಳನ್ನು ಕೀಳುಮಟ್ಟದ ರಾಜಕಾರಣಕ್ಕೆ ಬಳಸಿಕೊಳ್ಳಬಾರದು. ಹಾಗಾಗಿ ಜಾರಕಿಹೊಳಿ ಪರ ಹೇಳಿಕೆ ಕೊಟ್ಟಿದ್ದೆ ಎಂದರು.

ಮಾಧ್ಯಮಗಳಲ್ಲಿ ಆ ಹೆಣ್ಣು ಮಗಳನ್ನು ಸಂತ್ರಸ್ಥೆ ಅಂತಾ ಬಿಂಬಿಸಲಾಗುತ್ತಿದೆ. ಆದರೆ ಆಕೆ ಇಲ್ಲಿಯ ತನಕ ಹೊರಗೆ ಬಂದಿಲ್ಲ. ಆಕೆಯ ತಂದೆ ತಾಯಿಗಳನ್ನು ಸಂತ್ರಸ್ಥರು ಎನ್ನಬೇಕೋ ಅಥವಾ ನಕಲಿ ಸಿಡಿ ಆಗಿದ್ದಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಸಂತ್ರಸ್ತರು ಎನ್ನಬೇಕೋ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಅಪ್ಪ ಯಾರೆಂದು ತಿಳಿಯಲು ಮಗ ಒತ್ತಾಯ : ಅತ್ಯಾಚಾರವಾದ 27 ವರ್ಷಗಳ ನಂತ್ರ ಮಹಿಳೆ ದೂರು!

ಸಚಿವರ ಕೋರ್ಟ್ ಮೊರೆ ವಿಚಾರವಾಗಿ ಮಾತನಾಡಿದ ಅವರು, ಆರು ಮಂದಿ ಮಂತ್ರಿಗಳು ಈಗಾಗಲೇ ಕೋರ್ಟ್ ಮೊರೆ ಹೋಗಿದ್ದಾರಂತೆ. ಅವರಿಗೆ ಈ ಐಡಿಯಾ ಯಾರು ಕೊಟ್ಟರೋ? ಜನ ಇವರ ಬಗ್ಗೆ ಏನಂದುಕೊಳ್ಳಬೇಕು ಎಂದು ಟೀಕಿಸಿದರು.

Advertisement

ಬಜೆಟ್ ಬಗ್ಗೆ ಮಾತನಾಡಿದ ಎಚ್ ಡಿಕೆ, ಬಜೆಟ್ ಬಗ್ಗೆ ಸರ್ಕಾರಕ್ಕೆ ಯಾವುದೇ ಸ್ಪಷ್ಟತೆಗಳಿಲ್ಲ. ಹಿಂದಿನ ಬಾರಿಯದ್ದನ್ನೇ ಸೇರಿಸಿ ಕೊಟ್ಟಿದ್ದಾರೆ. ಮಹಿಳೆಯರಿಗೆ ಹೆಚ್ಚು ಆದ್ಯತೆ ಕೊಟ್ಟಿದ್ದೀವಿ ಅಂತಾರೆ. ಎಲ್ಲಿ ಆದ್ಯತೆ ಕೊಟ್ಟಿದ್ದಾರೆ.? ಅರವತ್ತು ಸಾವಿರ ಮಹಿಳೆಯರಿಗೆ ಉದ್ಯೋಗದ ಅವಕಾಶ ಕೊಟ್ಟಿದ್ದೇನೆ ಎನ್ನುತ್ತಾರೆ. ನನಗಂತೂ ಅದು ಕಾಣುತ್ತಿಲ್ಲ. ವೀರಶೈವ ಮತ್ತು ಒಕ್ಕಲಿಗ ಸಮುದಾಯಕ್ಕೆ ಐನೂರು ಕೋಟಿ ವೆಚ್ಚ ಮಾಡಲು ಯೋಜಿಸಲಾಗಿದೆ ಎಂದಿದ್ದಾರೆ ಆದರೆ ಎಷ್ಟು ವರ್ಷದಲ್ಲಿ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಸಿಡಿ ಬಗ್ಗೆ 4 ತಿಂಗಳ ಮೊದಲೇ ಗೊತ್ತಿತ್ತು, ನಾನು ನಿರಪರಾಧಿ: ಕಣ್ಣೀರಿಟ್ಟ ರಮೇಶ್ ಜಾರಕಿಹೊಳಿ

ಯಾವುದಕ್ಕೆ ಬಜೆಟ್ ವಿಧಾನಸಭೆಯಲ್ಲಿ ಮಂಡನೆ ಮಾಡಬೇಕು? ನಾವು ಅಧಿಕಾರದಲ್ಲಿದ್ದಾಗ ಬಿಜೆಪಿ ಶಾಸಕರಿಗೂ ಅನುದಾನ ನೀಡಿದ್ದೇವೆ. ಈಗಲೂ 224 ಕ್ಷೇತ್ರಗಳಿಗೆನ್ಯಾಯಯುತ ಹಂಚಿಕೆ ಆಗಲಿ ಎಂದು ನಾವು ಬಯಸಿದ್ದೆವು ಎಂದರು

Advertisement

Udayavani is now on Telegram. Click here to join our channel and stay updated with the latest news.

Next