Advertisement

ದರ್ಶನ್- ಇಂದ್ರಜಿತ್ ಪ್ರಕರಣದಲ್ಲಿ ನನ್ನ ಹೆಸರು ತಳಕು ಹಾಕುವ ಕೆಲಸ ಮಾಡಬೇಡಿ: ಕುಮಾರಸ್ವಾಮಿ

03:17 PM Jul 16, 2021 | Team Udayavani |

ಬೆಂಗಳೂರು: ನಿರ್ದೇಶಕ ಇಂದ್ರಜಿತ್ ಲಂಕೇಶ್ ಜೊತೆಗಿರುವ ಫೋಟೋ ವೈರಲ್ ವಿಚಾರದ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದು, ಇತ್ತೀಚೆಗೆ ನಾನು ಇಂದ್ರಜಿತ್ ಲಂಕೇಶ್ ಭೇಟಿಯಾಗಿಲ್ಲ. ಈ ಪ್ರಕರಣದಲ್ಲಿ ನನ್ನ ಹೆಸರು ತರಲು ಯಾಕೆ ಪ್ರಯತ್ನ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನಗೆ ಮಾಡಲು ಬೇಕಾದಷ್ಟು ಕೆಲಸವಿದೆ. ನಾನು ರಾಜಕೀಯ ಮಾಡಿದರೆ ನೇರವಾಗಿ ಮಾಡುತ್ತೇನೆ. ಕದ್ದು ಮುಚ್ಚಿ ರಾಜಕಾರಣ ನಾನು ಮಾಡುವುದಿಲ್ಲ. ನನ್ನಂತೆ ವಿಷಯವನ್ನು ಮುಕ್ತವಾಗಿ ಪ್ರಸ್ತಾಪ ಮಾಡುವವರು ಈ ದೇಶದಲ್ಲೇ ಇಲ್ಲ. ಮುಕ್ತವಾಗಿ ಎಲ್ಲರ ಜೊತೆ ಚರ್ಚೆ ಮಾಡುತ್ತೇನೆ. ಈ ಫೋಟೋ ಬಿಡುಗಡೆ ಮಾಡಿರುವ ಹಿಂದಿನ ಉದ್ದೇಶ ಏನೆಂದು ನನಗೆ ಗೊತ್ತಿಲ್ಲ. ಈ ಪ್ರಕರಣದಲ್ಲಿ ನನ್ನ ಹೆಸರು ತಳಕು ಹಾಕುವ ಕೆಲಸ ಮಾಡಬೇಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ:Darshan vs indrajit.. ನಾನು ದಲಿತನಲ್ಲ ಎಂದ ಗಂಗಾಧರ್ : ಇಂದ್ರಜಿತ್ ಗೆ ಹಿನ್ನಡೆ!

ಅನೇಕ ಬಾರಿ ಇಂದ್ರಜಿತ್ ಲಂಕೇಶ್ ನನ್ನನ್ನು ಭೇಟಿಯಾಗಿ ಇಂಟರ್ ವ್ಯೂ ತೆಗೆದುಕೊಂಡಿದ್ದಾರೆ. ಆದರೆ ಇತ್ತೀಚೆಗೆ ನಾನು ಇಂದ್ರಜಿತ್ ಲಂಕೇಶ ಭೇಟಿ ಮಾಡಿಲ್ಲ. ಪ್ರತಿ ನಿತ್ಯ ನೂರಾರು ಜನ ನನ್ನನ್ನು ಭೇಟಿಯಾಗುತ್ತಾರೆ. ಯುವಕರು, ವಯಸ್ಸಾಗಿರುವವರು ಫೊಟೋ ತೆಗೆದುಕೊಳ್ಳುತ್ತಾರೆ. ಆದರೆ ಈ ಫೋಟೋ ‌ಈಗ ಯಾರು ಉಪಯೋಗ ಮಾಡಿಕೊಳ್ಳಲು ಹೋಗುತ್ತಿದ್ದಾರೆ ಎನ್ನುವ ಸತ್ಯವನ್ನು ಇಂದ್ರಜಿತ್ ಲಂಕೇಶ್ ತಿಳಿಸಲಿ ಎಂದು ಕುಮಾರಸ್ವಾಮಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next