ಬೆಂಗಳೂರು : ತಾಯಂದಿರು, ಮಠಾಧೀಶರು, ವಿವಿಧ ಧರ್ಮದ ಜನರು ತಲೆ ಮೇಲೆ ಹಾಕುವ ಬಟ್ಟೆ (ದುಪ್ಪಟ) ಗೌರವದ ಸೂಚಕ ಎಂದು ಸಿದ್ದರಾಮಯ್ಯ ಹೇಳಿದ್ದ ಮಾತನ್ನು ತಿರುಚುವ ಕೆಲಸ ಬಿಜೆಪಿ ಮಾಡುತ್ತಿದೆ. ಈ ಮೂಲಕ ಬಿಜೆಪಿ ಮಠಾಧೀಶರನ್ನು ಅವಮಾನಗೊಳಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್. ಆಂಜನೇಯ ಆರೋಪಿಸಿದ್ದಾರೆ.
ಶಾಲೆಯೊಂದರ ಮುಖ್ಯಶಿಕ್ಷಕರು , ಪಿಟಿ ಮಾಸ್ಟರ್ ಬಗೆಹರಿಸಬೇಕಿದ್ದ ಹಿಜಾಬ್ ಎಂಬ ಸಣ್ಣ ವಿಷಯ ನಾಡಿನಲ್ಲಿ ಧರ್ಮಗಳ ಮಧ್ಯೆ ಕಂದಕವನ್ನು ಸೃಷ್ಟಿಸಿ, ಕೋರ್ಟ್ ಮೆಟ್ಟಲೇರಿ, ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡುವ ರೀತಿ ಆಗಿದೆ.
ಇದಕ್ಕೆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನಾಯಕರ ಮನಸ್ಸಿನಲ್ಲಿರುವ ವಿಷದ ನಂಜು ಕಾರಣ. ಈಗ ಹಿಜಾಬ್ ವಿವಾದ ತಣ್ಣಗಾಗುತ್ತಿದ್ದಂತೆ ಆತಂಕಕ್ಕೆ ಒಳಗಾಗಿರುವ ಬಿಜೆಪಿ ನಾಯಕರು, ಅದನ್ನು ಜೀವಂತವಾಗಿ ಇಡುವ ಪ್ರಯತ್ನ ನಡೆಸುತ್ತಿದ್ದಾರೆ.
ಸಿದ್ದರಾಮಯ್ಯ ಅವರು ದೇಶದ ಮಠಾಧೀಶರು, ತಾಯಂದಿರು ಗೌರವದ ಸೂಚಕವಾಗಿ ತಲೆ ಮೇಲೆ ಬಟ್ಟೆ ಹಾಕುತ್ತಾರೆ ಎಂದು ಹೇಳಿದ ಮಾತನ್ನೇ ತಿರುಚುವ ಕೆಲಸಕ್ಕೆ ಕೈ ಹಾಕಿದೆ.
ಈ ಮೂಲಕ ನಾಡಿನ ಮಠಾಧೀಶರನ್ನು ಅವಮಾನಗೊಳಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಸಿದ್ದರಾಮಯ್ಯ ಹೇಳದ ಮಾತನ್ನು ಬಿಜೆಪಿ ನಾಯಕರೇ ಹೇಳಿ, ನಮ್ಮ ಧರ್ಮಾಧಿಕಾರಿಗಳಿಗೆ ಅಪಮಾನ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ.
ಇದನ್ನೂ ಓದಿ : ಬೆಳ್ತಂಗಡಿ : ಮೆದುಳಿನ ರಕ್ತಸ್ರಾವದಿಂದ ಕೊಕ್ಕಡದ ಗ್ರಾಮಕರಣಿಕ ರೂಪೇಶ್ ನಿಧನ