Advertisement

ಎಚ್‌-1ಬಿ ವೀಸಾ ದುರುಪಯೋಗ 

10:54 PM Mar 28, 2017 | Team Udayavani |

ವಾಷಿಂಗ್ಟನ್‌: ಎಚ್‌1ಬಿ ವೀಸಾಗಳ ಭಾರೀ ಪ್ರಮಾಣದ ವಿತರಣೆಯಲ್ಲಿ ಭಾರತೀಯ ಕಂಪನಿಗಳು ವಲಸೆ ನೀತಿಯ ದುರಪಯೋಗ ಪಡೆದುಕೊಂಡಿವೆ ಎಂದು ಅಮೆರಿಕನ್‌ ಸಂಸದರೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ ವಲಸೆ ನೀತಿಯ ದುರುಪಯೋಗಗಳನ್ನು ತಡೆಯಲು ತಾವು ಮಸೂದೆಯೊಂದನ್ನು ಅಮೆರಿಕ ಸಂಸತ್ತಿನಲ್ಲಿ ಮಂಡಿಸಿದ್ದಾಗಿ ಅವರು ಹೇಳಿದ್ದಾರೆ. ಸಂಸದ ಡೆರೆಲ್‌ ಇಸ್ಸಾ ಈ ಬಗ್ಗೆ ಮಾತನಾಡಿ ತಮ್ಮ ಮಸೂದೆಯಲ್ಲಿ ಎಚ್‌1ಬಿ ವೀಸಾ ಹೊಂದಿದ ನೌಕರರಿಗೆ ಸಂಬಳ ಹೆಚ್ಚಿಸುವ ಪ್ರಸ್ತಾಪವಿದೆ. ಇದು ಪ್ರತಿಭಾನ್ವಿತರನ್ನು ಮಾತ್ರ ಅಮೆರಿಕದಲ್ಲಿ ಉಳಿಸಿಕೊಳ್ಳಲಿದ್ದು, ಎಚ್‌1ಬಿ ವೀಸಾ ವ್ಯವಸ್ಥೆಯಲ್ಲಿನ ಲೋಪಗಳನ್ನು ತೆಗೆದುಹಾಕಲಿದೆ ಎಂದು ಹೇಳಿದ್ದಾರೆ. 

Advertisement

ಈ ಮಸೂದೆಗೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಬೆಂಬಲ ವ್ಯಕ್ತಪಡಿಸಿದ್ದು, ಸದನದಲ್ಲೂ ಬೆಂಬಲಿ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಭಾರತೀಯ ಕಂಪನಿಗಳು ವ್ಯವಸ್ಥೆಯ ದೋಷಗಳೊಂದಿಗೆ ಆಟವಾಡಿ, ಅದನ್ನು ಸಂಪೂರ್ಣ ದುರುಪಯೋಗ ಪಡಿಸಿಕೊಂಡಿವೆ. ಶೇ.75ರಷ್ಟು ಕಂಪನಿಗಳಲ್ಲಿ ಭಾರತದವರೇ ಮಾಲೀಕರಾಗಿ, ನಿರ್ವಹಿಸಿಕೊಂಡು, ಸ್ವದೇಶಿಯರಿಗೆ ವೀಸಾ ನೀಡಲಾಗುತ್ತದೆ. ಆದರೆ ಎಚ್‌1ಬಿ ವೀಸಾದಲ್ಲಿನ ಸಣ್ಣ ಬದಲಾ ವಣೆಗೆ ಭಾರತ ಆತಂಕಗೊಳ್ಳುತ್ತದೆ.  ಇದು ಭಾರತವನ್ನು ಗುರಿಯಾಗಿಸಿ ಇಲ್ಲ. ನಿರ್ದಿಷ್ಟ ರಾಷ್ಟ್ರಕ್ಕಷ್ಟೇ ಸೀಮಿತವಾದ್ದನ್ನು ಅಳಿಸುತ್ತೇವೆ. ಅಮೆರಿಕಕ್ಕೆ ಆಗಮಿಸುವ ಅತ್ಯುತ್ತಮ, ಪ್ರತಿಭಾನ್ವಿತ ನೌಕರರಿಗೆ ಸಂಬಳ ಹೆಚ್ಚು ಮಾಡುತ್ತೇವೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next