Advertisement

ಎಚ್‌-1 ಬಿ ವೀಸಾ ಅಮಾನತು? ಅಮೆರಿಕದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಹಿನ್ನೆಲೆಯಲ್ಲಿ ಈ ಕ್ರಮ

07:31 AM Jun 13, 2020 | mahesh |

ಅ.1ರಿಂದ ಪರಿಷ್ಕೃತ ನಿರ್ಧಾರ: ಮಾಧ್ಯಮ ವರದಿಯಲ್ಲಿ ಉಲ್ಲೇಖ
ಸದ್ಯ ಅಮೆರಿಕದಲ್ಲಿ ನೆಲೆಸಿರುವ ವೀಸಾ ಹೊಂದಿರುವವರಿಗೆ ಸಮಸ್ಯೆ ಇಲ್ಲ

Advertisement

ವಾಷಿಂಗ್ಟನ್‌: ಕೋವಿಡ್ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಭಾರೀ ನಿರುದ್ಯೋಗ ಸಮಸ್ಯೆ ಎದುರಾಗಿದೆ. ಹೀಗಾಗಿ, ಭಾರತೀಯ ಐಟಿ ವೃತ್ತಿಪರರಲ್ಲಿ ಹೆಚ್ಚು ಬೇಡಿಕೆ ಇರುವ ಎಚ್‌-1ಬಿ ಸೇರಿದಂತೆ ಹಲವಾರು ಉದ್ಯೋಗ ಸಂಬಂಧಿ ವೀಸಾಗಳನ್ನು ಅಮಾನತು ಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಚಿಂತನೆ ನಡೆಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಅಕ್ಟೋಬರ್‌ 1ರಿಂದ ಪ್ರಸ್ತಾವಿತ ಶಿಫಾರಸಗಳು ಜಾರಿಗೆ ಬರುವ ಸಾಧ್ಯತೆಗಳಿವೆ. ಇದರ ಜತೆಗೆ ನಿಯ ಮಗಳನ್ನು ಮುಂದಿನ ಹಣಕಾಸು ವರ್ಷಕ್ಕೂ ಅಮೆರಿಕ ಸರಕಾರ ವಿಸ್ತರಿಸುವ ಸಾಧ್ಯತೆಗಳೂ ಬರಬಹುದು ಎಂದು ಎಂದು ಅಧಿಕಾರಿಯೊಬ್ಬರ ಹೇಳಿಕೆ ಉಲ್ಲೇಖೀಸಿ “ದಿ ವಾಲ್‌ ಸ್ಟ್ರೀಟ್‌ ಜರ್ನಲ್‌’ ವರದಿ ಮಾಡಿದೆ. ಅಮಾನತು ತೆರವುಗೊಳಿಸುವವರೆಗೂ ಕೆಲಸ ಕ್ಕಾಗಿ ವಿದೇಶದಿಂದ ಯಾವುದೇ ಎಚ್‌-1ಬಿ ವೀಸಾದಾರರು ಬಾರದಂತೆ ತಡೆಯಬಹುದು. ಆದರೆ, ಈಗಾಗಲೇ ಅಮೆರಿಕದಲ್ಲಿ ನೆಲೆಸಿರುವ ವೀಸಾದಾರರಿಗೆ ಇದರಿಂದ ಪರಿಣಾಮ ಬೀರುವ ಸಾಧ್ಯತೆ ಇಲ್ಲ. ಎಚ್‌-1ಬಿ ವೀಸಾಗಳ ಜತೆಗೆ, ಅಲ್ಪಾವಧಿಯ ಪರಿಣಿತ ಕೆಲಸಗಾರರಿಗೆ ನೀಡ ಲಾಗುವ ಎಚ್‌-2ಬಿ, ಅಲ್ಪಾವಧಿಯ ಕೆಲಸಗಾ ರರಿಗೆ ನೀಡಲಾಗುವ ಜೆ-1, ಆಂತರಿಕ ಕಂಪನಿ ವರ್ಗಾವಣೆಗಾಗಿ ನೀಡಲಾಗುವ ಎಲ್‌-1 ವೀಸಾ ಗಳಿಗೂ ಈ ಅಮಾನತು ನಿಯಮ ಅನ್ವಯವಾ ಗಲಿದೆ ಎಂದು ವರದಿ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ವೇತಭವನದ ವಕ್ತಾರ ಹೊಗನ್‌ ಗಿಡ್ಲಿ, ಅಮೆರಿಕದ ಕಾರ್ಮಿಕರ ಹಿತ ಕಾಯಲು ಅಗತ್ಯವಿರುವ ಹಲವು ಪ್ರಸ್ತಾವಗಳನ್ನು ಪರಿಗಣಿಸಲಾಗುತ್ತಿದೆ. ಆದರೆ, ಈವರೆಗೂ ಯಾವುದೇ ಅಂತಿಮ ನಿರ್ಧಾರವನ್ನು ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ. ಈ ಮಧ್ಯೆ, ಯುಎಸ್‌ ಚೇಂಬರ್ಸ್‌ ಆಫ್ ಕಾಮರ್ಸ್‌ನ ಸಿಇಒ ಥಾಮಸ್‌ ಡೊನೊಹ್ಯೂ ಅವರು ಟ್ರಂಪ್‌ಗೆ ಪತ್ರ ಬರೆದು, ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

ಟ್ರಂಪ್‌ ವಿರುದ್ಧ ಬಿಡೆನ್‌ ವಾಗ್ಧಾಳಿ
ಅಮೆರಿಕ ಅಧ್ಯಕ್ಷ ಪಟ್ಟದ ರೇಸ್‌ನಲ್ಲಿರುವ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಅವರ ಎದುರಾಳಿ, ಡೆಮಾಕ್ರಟಿಕ್‌ ಪಕ್ಷದ ನಾಯಕ ಜೋ ಬಿಡೆನ್‌, ನಡುವಿನ ಬಹಿರಂಗ ವಾಗ್ಧಾಳಿ ಮತ್ತಷ್ಟು ತಾರಕಕ್ಕೇರಿದೆ. ಈ ಬಾರಿ ಟ್ರಂಪ್‌ ಅವರು ಮೋಸದಾಟಗಳಿಂದ ಚುನಾ ವಣೆ ಗೆಲ್ಲಬಹುದು ಎಂದು ಬಿಡೆನ್‌ ಅನುಮಾನವನ್ನು ವ್ಯಕ್ತ ಪಡಿ ಸಿದ್ದಾರೆ. ಜೊತೆಗೆ, ಟ್ರಂಪ್‌ ವೈಟ್‌ಹೌಸ್‌ ಬಿಡಲು ನಿರಾಕರಿಸಿದರೆ ಸೇನೆಯೇ ಅವರನ್ನು ಹೊರಹಾಕುತ್ತದೆ ಎಂದು ಲೇವಡಿ ಮಾಡಿದ್ದಾರೆ. ಬಿಡೆನ್‌ವರ ಟೀಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಟ್ರಂಪ್‌ ಅವರ ಚುನಾವಣಾ ಪ್ರಚಾರದ ನಿರ್ದೇಶಕ ಟಿಮ್‌ ಮುರ್ಟಾಫ್, “”ಇಂಥ ಅನುಮಾನಗಳು ಆಧಾರ ರಹಿತ. ಜನರಿಗೆ ಚುನಾವಣೆಗಳ ಮೇಲೆ ಅಪನಂಬಿಕೆ ಬರುವಂತೆ ಬಿಡೆನ್‌ ಮಾತನಾಡಿರುವುದು ಸರಿಯಲ್ಲ” ಎಂದು ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next