ನವದೆಹಲಿ : ಜ್ಞಾನವಾಪಿ ಮಸೀದಿಯೊಳಗಿನ ‘ಶಿವಲಿಂಗ’ ಎಂದು ಹೇಳಿರುವ ರಚನೆಯ ಕಾರ್ಬನ್ ಡೇಟಿಂಗ್ ಕುರಿತಾಗಿ ಹಿಂದೂ ಪರ ಅರ್ಜಿದಾರರು ಸಲ್ಲಿಸಿದ ಮನವಿಯ ತೀರ್ಪನ್ನು ವಾರಾಣಸಿ ನ್ಯಾಯಾಲಯವು ಶುಕ್ರವಾರ ಅಕ್ಟೋಬರ್ 11ಕ್ಕೆ ಮುಂದೂಡಿದೆ.
ನ್ಯಾಯಾಲಯವು ಅಂಜುಮನ್ ಇಸ್ಲಾಮಿಯಾ ಸಮಿತಿಯ ವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ತನ್ನ ಆದೇಶವನ್ನು ಅಕ್ಟೋಬರ್ 11 ರಂದು ಪ್ರಕಟಿಸುತ್ತದೆ.
ಹಿಂದೂ ಪರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ತೀರ್ಪನ್ನು ನ್ಯಾಯಾಲಯ ಇಂದು ಪ್ರಕಟಿಸಬೇಕಿತ್ತು. ಮಹತ್ವದ ವಿಚಾರಣೆಗೆ ಮುನ್ನ ನ್ಯಾಯಾಲಯದ ಆವರಣದ ಹೊರಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಇದನ್ನೂ ಓದಿ : ದಾಖಲೆಗಳನ್ನು ಸಲ್ಲಿಸಲು ನಾನು ಒಪ್ಪಿದ್ದೇನೆ: ಇಡಿ ವಿಚಾರಣೆ ಬಳಿಕ ಡಿ.ಕೆ.ಶಿವಕುಮಾರ್
ಇದು ನಮ್ಮ ಸೂಟ್ ಆಸ್ತಿಯ ಭಾಗವಾಗಿದೆ ಮತ್ತು ಸಿಪಿಸಿ ಯ ಆರ್ಡರ್ 26 ನಿಯಮ 10ಎ ಪ್ರಕಾರ, ನ್ಯಾಯಾಲಯವು ವೈಜ್ಞಾನಿಕ ತನಿಖೆಯನ್ನು ನಿರ್ದೇಶಿಸುವ ಅಧಿಕಾರವನ್ನು ಹೊಂದಿದೆ ಎಂದು ನಾವು ಹೇಳಿದ್ದೇವೆ. ಮುಸ್ಲಿಂ ಕಡೆಯವರು ಉತ್ತರಿಸಲು ಸ್ವಲ್ಪ ಸಮಯ ಕೇಳಿದ್ದಾರೆ. ಈಗ ಅಕ್ಟೋಬರ್ 11 ರಂದು ಈ ವಿಷಯದ ವಿಚಾರಣೆ ನಡೆಯಲಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಜೈನ್ ಹೇಳಿದ್ದಾರೆ.
ಮಸೀದಿಯೊಳಗೆ ಕಂಡುಬರುವ ರಚನೆಯು ಈ ಸೂಟ್ ಆಸ್ತಿಯ ಭಾಗವಾಗಿದೆಯೇ ಅಥವಾ ಇಲ್ಲವೇ ? ಎರಡನೆಯದಾಗಿ, ನ್ಯಾಯಾಲಯವು ವೈಜ್ಞಾನಿಕ ತನಿಖೆಗಾಗಿ ಆಯೋಗವನ್ನು ನೀಡಬಹುದೇ? ಎಂಬುದನ್ನು ಎರಡು ಅಂಶಗಳಲ್ಲಿ ಸ್ಪಷ್ಟಪಡಿಸುವಂತೆ ನ್ಯಾಯಾಲಯವು ನಮ್ಮನ್ನು ಕೇಳಿದೆ. ನಾವು ನಮ್ಮ ಉತ್ತರವನ್ನು ಸಲ್ಲಿಸಿದ್ದೇವೆ ಎಂದು ವಿಷ್ಣು ಜೈನ್ ಹೇಳಿದ್ದಾರೆ.