Advertisement

ಗುತ್ತು, ಬೀಡಿನ ಮನೆತನದ ಬಗ್ಗೆ ಗೊತ್ತಾ?

08:26 AM Jan 18, 2019 | |

ಮರೆಯಾಗಿದ್ದ ಸಮಾಜದ ರಕ್ಷಣಾ ಜವಾಬ್ದಾರಿ ಹೊಂದಿದ್ದ ಗುತ್ತಿನ ಆಡಳಿತ ವ್ಯವಸ್ಥೆ ಇಂದು ಮತ್ತೆ ತೆರೆಕಾಣಲು ತಯಾರಿ ನಡೆಯುತ್ತಿದೆ. ಮಂಗಳೂರು ತಾಲೂಕಿನ ಗುರುಪುರ ಗೋಳಿದಡಿಗುತ್ತು ಮನೆತನದಲ್ಲಿ ಈ ಬಗ್ಗೆ ಚಿಂತನ ಮಂಥನ ಜ.19 ಹಾಗೂ 20ರಂದು ನಡೆಯಲಿದೆ. ಈ ಭಾಗದಲ್ಲಿ 1720 ಗುತ್ತಿನ ಮನೆ,198 ಬೀಡಿನ ಮನೆ ,28 ಪರಡಿ ,18 ಮಾಗಂದಗಡಿ ಇದ್ದು ಎಲ್ಲರನೂ ಒಟ್ಟಾಗಿ ಕರೆತರುವ ವ್ಯವಸ್ಥೆ ಇದಾಗಿದೆ. ಇದಕ್ಕಾಗಿ ಗುತ್ತಿನ ಮನೆಯವರು, ಬೀಡಿನ ಮನೆಯವರು,ಬಾರಿಕೆ ಮನೆಯವರು ,ಪರಾಡಿ ಮನೆಯವರು ,ಪುನರಪಿ ದೈವೀಕ ಮತ್ತು ಆಧ್ಯಾತ್ಮಿಕ ಬಲದಿಂದ ಚರ್ಚಿಸಿ ಸಂಘಟಿತರಾಗಲು ಹೊರಟಿದ್ದಾರೆ. ಈ ಮನೆತನಗಳಿಗೆ ತಲೆತಲಾಂತರದಿಂದ ಅಲಿಖಿತವಾಗಿ ರೂಢಿಯಲ್ಲಿ ಬಂದಿರುವ ದೈವೀದತ್ತವಾದ ಸಂವಿಧಾನ ಕೂಡ ಆಗಿದ್ದು ಈಗ ಮತ್ತೆ ಪುನರಪಿ ಗುತ್ತಿನ ಆಡಳಿತ ವ್ಯವಸ್ಥೆ ಕಲ್ಪನೆಗೆ ಅಡಿಪಾಯ ಹಾಕಲು ಸನ್ನದ್ದವಾಗಿದೆ. 

Advertisement

ಗುತ್ತಿನ ಆಡಳಿತ ವ್ಯವಸ್ಥೆ:  ಈ ಹಿಂದೆ ರೂಢಿಯಲ್ಲಿದ್ದ ಗುತ್ತುಗಳು -ಬೀಡಿನ ಮನೆಗಳ ಆಡಳಿತವೇ ಈಗಿನ ದೇಶಿಯ ಪ್ರಜಾಪ್ರಭುತ್ವ ಆಡಳಿತದಲ್ಲಿ ಮತ್ತು ಸಂವಿಧಾನದ ಆಶಯಕ್ಕೆ ಒಳಪಟ್ಟು ಸಮಾನಾಂತರದಲ್ಲಿದ್ದರೆ. ಗ್ರಾಮೀಣ ಬದುಕು ಸುಂದರವಾಗಲು ಸಾಧ್ಯ. ಬಹು ಸೊಗಸಾಗಿದ್ದ ಗ್ರಾಮ ಜೀವನ ಬರಡಾಗಿ ದಿನೇ ದಿನೇ ನಾಶದ ಹಂತಕ್ಕೆ ಹೋಗುತ್ತಿದೆ.ದೈವೀಕ  ಪ್ರೇರಣೆಯುಳ್ಳ ಮತ್ತು ಆಧ್ಯಾತ್ಮಿಕ ತಳಹದಿಯ ನಿಯಮ ಬದ್ಧವಾದ ಗುತ್ತಿನ ಆಡಳಿತವು  ಈಗಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಊರುಗೋಲಾಗಿ ನಿಂತು ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ. 

ಪುರಾತನ ಆಡಳಿತ ವ್ಯವಸ್ಥೆ : ಭರತ ಖಂಡವನ್ನು ಏಕಚಕ್ರಾಧಿಪತ್ಯದ ಆಡಳಿತದಲ್ಲಿ ಒಂದೇ ಸಮಗ್ರತೆಯ  ಸೂತ್ರದಲ್ಲಿ ಅಳಿದವರಲ್ಲಿ ಕೊನೆಯವರು ಪಾಂಡವರು.ನಂತರ ಅವರ ಉತ್ತರಾಧಿಕಾರಿ ಮಹಾರಾಜ ಪರೀಕ್ಷಿತ ಮುಂದಕ್ಕೆ ಅವನ ಉತ್ತರಾಧಿಕಾರಿ ಜನಮೇಜಯನ ಕಾಲಕ್ಕೆ ಪ್ರತಿಕ್ರಿಯೆ ಹೆಚ್ಚುತ್ತಾ ಬಂದುದನ್ನು ಕಂಡು ಅವನ ಮೊಮ್ಮಗ ಸುದನ್ವನು ಒಂದು ವಿಸ್ತೃತ ವಿಭಜೀಕೃತ ಪ್ರಾದೇಶಿಕ ಶಾಸನ ಪದ್ಧತಿಯನ್ನು ಧರ್ಮದ ಆಧಾರದಲ್ಲಿ ರೂಪಿಸಿದನು.ಆದರಂತೆ ರಾಜ್ಯಾಂಗ ರಚಿಸಿ ಆಳ್ವಿಕೆಯನ್ನು ರೂಪಿಸಿದನು.ಆಡಳಿತ ಪದ್ಧತಿಯೇ ಪ್ರಸಕ್ತ ಅಳಿದುಳಿದು ಬಂದಿರುವ ಈಗ ನಮ್ಮ ಮುಂದಿರುವ ಮತ್ತು ತೀವ್ರವಾಗಿ ಬೇರೆ ಬೇರೆ ಕಾರಣಗಳಿಂದ ಸೊರಗಿರುವ  ಬೀಡು ಮತ್ತು ಗುತ್ತಿನ ಆಡಳಿತ ವ್ಯವಸ್ಥೆ .

ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರಿಕರಣದಿಂದ ಸ್ವರೂಪದಲ್ಲಿ ವಿಭಾಗಿಸಲಾಗಿದ್ದು ಸಮಗ್ರ ದೇಶ ಅದಕ್ಕೆ ಆಧರಿಸಿ ಮುಖ್ಯ ಸಂವಿಧಾನವಾದ ಚಕ್ರವರ್ತಿ,16ನೇಯ ಒಂದು ಭಾಗ ಮಹಾಮಂಡಲಾಧಿಪತಿ,  ಮಂಡಲಾಧಿಪತಿ, ಮಂಡಲದ ಒಂದು ಭಾಗದ ರಾಜ ಮನೆತನ ಅರಸು ,ಅರಸು ಮನೆತನಕ್ಕೆ ಆದರಿಸಿ ಕಂದಾಯ ಮತ್ತು ನ್ಯಾಯ ನಿರ್ವಹಣೆಯಾಗಿ ಬೀಡು,ವಿಭಾಗೀಯ ಆಡಳಿತ ,ಅಂಶಿಕ ನ್ಯಾಯ ಮತ್ತು ನಿರ್ವಹಣೆಗಾಗಿ ಗುತ್ತು ಎಂಬುದಾಗಿ ಪ್ರಜಾ ಜನರಿಗೆ ಯಾವುದೇ ಕುಂದು ಕೊರತೆಯಿಲ್ಲದ ನೆಮ್ಮದಿಯ ಸಾಮಾಜಿಕ -ಆರ್ಥಿಕ ಮತ್ತು ಧಾರ್ಮಿಕ ಬದುಕನ್ನು ಈ ಪುರಾತನ ಆಡಳಿತ ವ್ಯವಸ್ಥೆ ಜಾರಿಯಲ್ಲಿತ್ತು. ಆ ಕಾಲದ ಸುದನ್ವ ಮಹಾರಾಜರಿಂದ ನಿರೂಪಿಸಲ್ಪಟ್ಟ ಪುರಾತನ ರಾಜ್ಯಾಂಗ ವ್ಯವಸ್ಥೆಯಲ್ಲಿ ಗುತ್ತಿನ ಮನೆಯು ಆಡಳಿತ ಪ್ರಕಾರದಲ್ಲಿ ಆರನೇ ಸ್ಥಾನದಲ್ಲಿದ್ದರೂ ಸಾಮಾಜಿಕವಾಗಿ  ತ್ಯಾಗ ,ತಪಸ್ಸು  ,ನ್ಯಾಯ ಪರತೆ ಹಾಗೂ ಸಮಾಜಮುಖಿ ಜೀವನ ಮತ್ತು ಒಳ್ಳೆಯತನದಿಂದ ಗುತ್ತಿನ ಮನೆತನದವರು ಮೊದಲನೆಯವರಾದರೂ .ಸುತ್ತಲಿನ ಸಮಾಜದ ಜನ ಆಷ್ಟೊಂದು ಗೌರವ ಪೂರ್ವಕವಾಗಿ ಗುತ್ತಿನ ಮನೆಗೆ ಯಾ ಬೀಡಿನ ಮನೆಗೆ ನಡೆದುಕೊಳ್ಳುತ್ತಿದ್ದರು.

ಗುತ್ತು ನಿಮಗೆಷ್ಟು ಗೊತ್ತು ? 
ಸಮಾಜದ ಜನರ ಕಷ್ಟ -ಕಾರ್ಪಣ್ಯ ಭಾರ ಹೊರುವವರು ಎಂಬ ಅರ್ಥದಲ್ಲಿ ಗುತ್ತು ಎಂಬ ಶಬ್ದ ಬಳಕೆಗೆ ಬಂತು.ಭಾರವಾಹಕ ಅಂದರೆ ಹಿಂದೆ ಹೊರೆಯಲ್ಲಿ ಸಾಮಾನು ಸಾಗಣೆ ಇದ್ದ ಕಾಲು ದಾರಿ ಬದಿಯಲ್ಲಿ ಗಣ್ಣಾಣೆ ಅಥವಾ ಕಟ್ಟೆ ಅಥವಾ ಗುತ್ತಿನ ಕಂಬ ಎಂಬ ವ್ಯವಸ್ಥೆಯು ಇರುತ್ತಿತ್ತು. ಈ ದಾರಿಯಲ್ಲಿ ಹೊರೆಯನ್ನು ಹೊತ್ತುಕೊಂಡು ಹೋಗುವ ವ್ಯಕ್ತಿ ತನ್ನ ತಲೆಗೆ ಆ ಹೊರೆ  ಭಾರವಾದಾಗ ಆ ಹೊರೆಯನ್ನು ಈ ಗುತ್ತಿನ ಕಂಬ ಎಂಬ ಕಟ್ಟೆಯ ಮೇಲೆ ಇಳಿಸಿ ಸುಧಾರಿಸಿ ನಂತರ ಯಾರ ಸಹಾಯವೂ ಇಲ್ಲದೇ ಆ ಹೊರೆಯನ್ನು ಹೊತ್ತುಕೊಂಡು ಹೋಗುತ್ತಿದ್ದರು.ಆ ಹೊರೆಯನ್ನು ಇಳಿಸುವ ಕಂಬವೇ ಗುತ್ತಿನ ಕಲ್ಲು ಇಲ್ಲವೇ ಗುತ್ತಿನ ಕಂಬ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಸಮಾಜದ ವಿವಿಧ ರೀತಿಯ ಕಷ್ಟಗಳ ಭಾರವನ್ನು ಹೊತ್ತು ಸಮಸ್ಯೆ ಬಗೆಹರಿಸುವ ಮನೆಯು ಗುತ್ತಿನ ಮನೆ ಎಂದು ಕರೆಯಲ್ಪಟ್ಟು  ಸ್ಥಿರವಾಗಿ ನೆಲೆಯೂರಿತು. ಒಟ್ಟು ದೇಶದ 16×16 ರ ಒಂದು ಭಾಗದಲ್ಲಿ ಅರಸು ,ಬೀಡು ,ಗುತ್ತು ಮನೆಯ ಆಡಳಿತ ವ್ಯವಸ್ಥೆಯಲ್ಲಿ ಪರಸ್ಪರ ಪೂರಕತೆಯೊಂದಿಗೆ ಯಾವುದೇ ರೀತಿಯ ಭಂಗವಾಗದಂತೆ ಆಡಳಿತ ಒದಗಿಸುತ್ತಿತ್ತು.ಇದರಲ್ಲಿ 6ನೇ ವಿಭಾಗದ ವ್ಯವಸ್ಥೆಯಾದ ಗುತ್ತಿನ ಮನೆಯ ಗ್ರಾಮ ಪದ್ಧತಿಯ ಆಡಳಿತವು ಗಮನಸೆಳೆದಿದ್ದು ಅತ್ಯಂತ ಸತ್ಯ -ನ್ಯಾಯ-ಧರ್ಮ ಬದ್ಧವಾಗಿ ಆಧ್ಯಾತ್ಮಿಕ ಮತ್ತು ದೈವೀಕತೆಯ  ನೆರಳಿನ ಅಡಿಯಲ್ಲಿ ಅತ್ಯಂತ ಸುಸೂತ್ರವಾಗಿ ನಡೆಯುತ್ತಿತ್ತು.

Advertisement

ಗಡಿಕಾರರು :ಗಡಿಕಾರರು ಇಲ್ಲವೇ ಗಡಿ ಹಿಡಿದವರು ಗುತ್ತಿನ ಮನೆಯ ಯಾಜಮಾನರಾಗಿದ್ದು ಸುತ್ತಲಿನ ಸಮಾಜದ ಜನಹಿತಕ್ಕಾಗಿ ತನ್ನ ಕುಟುಂಬದಿಂದ ಹೊರ ಉಳಿಯುತ್ತಾರೆ. ಗುತ್ತಿನ ಯಾ ಬೀಡಿನ  ಮನೆಯ ಗಡಿಕಾರನನ್ನಾಗಿ ನೇಮಿಸಿ ಆ ಗುತ್ತಿನ ಮನೆಯ ಪ್ರಧಾನವಾದ ಮತ್ತು ಪಂಚದೈವಗಳ ಸಾನಿಧ್ಯಕ್ಕೆ ಬಿಟ್ಟುಕೊಡುತ್ತಾರೆ.   

ಎಲ್ಲೆಲ್ಲಿದೆ ಗುತ್ತಿನ ಮನೆ : ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಬ್ಟಾಗಿಲು ಮನೆ ,ಮೆಟ್ಗಲ್ಲು ಮನೆ ,ಉತ್ತರ ಭಾರತದಲ್ಲಿ ಮುಂಡ ಮನೆಗಳು ,ದೇಶಪಾಂಡೆ ಮನೆಗಳು ,ಪಟ್ಟವರ್ಧನ ಮತ್ತು ಪಟ್ಟನಾಯಕ  ಮನೆಗಳು, ಬಂಗಾಳದಲ್ಲಿ ಮುಖರ್ಜಿ ಮನೆಗಳು ,ಉತ್ತರ ಪ್ರದೇಶ, ಗುಜರಾತ್ ಮತ್ತು ರಾಜಸ್ಥಾನಗಳಲ್ಲಿ ಸಚ್ಚೆದೇವ್ ಮನೆಗಳು ಸೇರಿದಂತೆ ದೇಶದಾದ್ಯಂತ ಬೇರೆ ಬೇರೆ ಹೆಸರಿನಲ್ಲಿ ಗುತ್ತಿನ ಮನೆಗಳು ಕಾಣಸಿಗುತ್ತದೆ. 


ಸೀಮಿತವಲ್ಲ: ಗುತ್ತಿನ ಮನೆಯು ಯಾವುದೇ ಒಂದು ಜಾತಿ ಅಥವಾ ಪಂಗಡಕ್ಕೆ ಸೀಮಿತವಾದುದ್ದಲ್ಲ .ಸಮಾಜದ ಎಲ್ಲಾ ವರ್ಗದ ಜನರೂ ಗುತ್ತಿನ ಮನೆಯ ಆಡಳಿತವನ್ನು ಆದರ್ಶ ಬದ್ದರಾಗಿ ನಡೆಸಿದ್ದಾರೆ. ವಿವಿಧ ಜಾತಿ-ಪಂಗಡಗಳಿಗೆ ಸೇರಿದ ಗುತ್ತಿನ ಮನೆಗಳು ಹಲವಾರು ಇವೆ. ಸಮರ್ಥವಾದ ಹಾಗೂ ಸತ್ಯ-ನ್ಯಾಯ-ಧರ್ಮ  ಬದ್ಧವಾದ ನಿರ್ವಹಣಾ ಭಾಗ ಮತ್ತು ಸಮಾಜಮುಖೀ ತ್ಯಾಗವೇ ಗುತ್ತಿನ ಮನೆಗೆ ಪ್ರಧಾನವೇ ಹೊರತು ಇಲ್ಲಿ ಜಾತಿ ಮತ್ತು ಪಂಗಡ ಮುಖ್ಯವಲ್ಲ.

ಸಾತಂತ್ರ್ಯೋತ್ತರ ದಶಕಗಳಲ್ಲಿ ಗುತ್ತಿನ ಮನೆಯ ಆಡಳಿತ ವ್ಯವಸ್ಥೆ : 1974ರಲ್ಲಿ ಜಾರಿಗೆ ಬಂದ ಭೂಮಸೂದೆ ಇಲ್ಲವೇ ಒಕ್ಕಲು ಮಸೂದೆ ಕಾನೂನು ನಂತರ ವಿವಿಧ ಕಾಲ ಘಟ್ಟದಲ್ಲಿ ಸಂವಿಧಾನದಲ್ಲಿ  ಚೌಕಟ್ಟಿನಲ್ಲಿ  ಆಗಿರುವ ಕೆಲವೊಂದು ಪಲ್ಲಟಗಳ ಹಿನ್ನಲೇ ತಮ್ಮ ಮೂಲಭೂತ ಸಿದ್ಧಾಂತವಾದ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯುವಲ್ಲಿ ಗುತ್ತುಗಳ ಅಸಮರ್ಪಕ ಕಾರ್ಯ ,ಆರ್ಥಿಕವಾದ ಹಿಂಜರಿಕೆ ,ಆಧ್ಯಾತ್ಮಿಕ ತಳಹದಿಯ ಕೊರತೆ ,ದೈವೀಕ ತಳಹದಿಯ  ನ್ಯಾಯ ನಿರ್ವಹಣೆಯನ್ನು ಗುತ್ತಿನ ಚಾವಡಿಯಲ್ಲಿ ಸ್ಥಗಿತಗೊಳಿಸಿದ್ದು ಮತ್ತು ಕೆಲವೊಂದು ಸ್ವಯಂಕೃತ ತಪ್ಪಿನಿಂದಾಗಿ ಗುತ್ತಿನ ಮನೆಗಳು ,ಬೀಡಿನ ಮನೆಗಳು ,ಬಾರಿಕೆ ಗಳು  ದಿನೇ ದಿನೇ ಸೊರಗುತ್ತಾ ಹೋಗಿ ಪ್ರಸಕ್ತ ದಿನಗಳಲ್ಲಿ ಗುತ್ತಿನ ಮನೆಗಳು ದೈವಾರಾಧನೆಗೆ ಮಾತ್ರ ಸೀಮಿತ ಮಾಡಿಕೊಂಡಿದ್ದಾರೆ. 

ಪರ್ಬೊದ ಸಿರಿ : ಹಲವು ಕಾರಣಗಳಿಂದ ಸೊರಗಿರುವ ಬೀಡು ಮತ್ತು ಗುತ್ತಿನ ವ್ಯವಸ್ಥೆಗೆ ಪುನರಪಿ ಚಾಲನೆ ನೀಡುವುದಲ್ಲದೇ ಧರ್ಮಸಮ್ಮತ ,ಆದ್ಯಾತ್ಮಿಕ ತಳಹದಿಯಲ್ಲಿ ಜಾತಿ,ಮತ,ಧರ್ಮ ,ಬಡವ-ಬಲ್ಲಿದ ಬೇದವಿಲ್ಲದೆ ನ್ಯಾಯದಾನ ಕಲ್ಪಿಸುವ ಉದ್ದೇಶದಿಂದ ಜ.19,20ರಂದು ಗುರುಪುರದ ಗೋಳಿದಡಿಗುತ್ತಿನಲ್ಲಿ ಗುತ್ತುವ ಪರ್ಬೊ ಎನ್ನುವ ಪರ್ಬೊ ದ ಸಿರಿ ಉತ್ಸವ ನಡೆಯಲಿದೆ. ಇದೇ ಸಂದರ್ಭದಲ್ಲಿ ಮರೆಯಾಗುತ್ತಿರುವ ಗ್ರಾಮೀಣ ಬದುಕಿನ ಸೊಗಡನ್ನು ಮತ್ತೆ ನೆನಪಿಸುವ ಉದ್ದೇಶ ಹಾಗೂ ನಮ್ಮ ಗ್ರಾಮ ಜೀವನವನ್ನು ಬಿಂಬಿಸಿ ಪುನರುತ್ತಾನಗೊಳಿಸುವ ಧ್ಯೇಯದೊಂದಿಗೆ ವಿನೂತನವಾದ ಕಾರ್ಯಕ್ರಮ ಪರ್ಬೊದ ಸಿರಿ  ಗುರುಪುರ  ಗೋಳಿದಡಿಗುತ್ತು ವೈಧ್ಯನಾಥೇಶ್ವರ ಪ್ರಾಂಗಣದಲ್ಲಿ ನಡೆಯಲಿದೆ. 


ಗುತ್ತುಗಳ ಪುನರುಜ್ಜೀವನಕ್ಕೆ ಮುಂದಡಿ -ಒಂದು ಪ್ರಯತ್ನ

ಗುತ್ತು -ಬೀಡು -ಬಾರಿಕೆ -ಬಾವ -ಪರಡಿ ಎಂಬ ಹೆಸರಿನಲ್ಲಿ ಆಧ್ಯಾತ್ಮಿಕ ಬಲವುಳ್ಳ ಧರ್ಮದೇವತೆಗಳ ಸಂಕಲ್ಪದಂತೆ ನಡೆಯುವ ಸತ್ಯ -ನ್ಯಾಯ-ಧರ್ಮಪೂರಿತ ಈ ಆಡಳಿತ ವ್ಯವಸ್ಥೆಯು ಈಗಿನ ಸಂವಿಧಾನ ಬದ್ಧವಾದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಗೆ ಬೆನ್ನೆಲುಬಾಗಿ ನಿಂತರೆ ಪುರಾತನ  ಕಾಲದಲ್ಲಿ  ಜಗತ್ತನ್ನೇ ಮನಸೂರೆಗೊಂಡಂತಹ ವಿಶ್ವಗುರು ಭಾರತದ ಭಾರತೀಯರ ಪುನರಪೀ ಇಡೀ ವಿಶ್ವಕ್ಕೆ ದಾರಿದೀಪವಾಗುವುದರಲ್ಲಿ  ಸಂಶಯವಿಲ್ಲ .ಈ ಉದ್ದೇಶದಿಂದ ಜ.19 ಹಾಗೂ 20ರಂದು  ಗುರುಪುರ ಗೋಳಿದಡಿ ಗುತ್ತಿನಲ್ಲಿ ವಾರ್ಷಿಕವಾಗಿ ನಡೆಯುವ ವರ್ಸೊದ ಪರ್ಬೊ ಸಂದರ್ಭದಲ್ಲಿ ಈ ವಿಚಾರಕ್ಕೆ ಸಂಬಂಧಪಟ್ಟ ಮೂರು ವಿಷಯಗಳಲ್ಲಿ ನಡೆಯಲಿರುವ ಈ ಬಗೆಗಿನ  ಚಿಂತನ -ಮಂಥನವು ಗುತ್ತು ನಿಮಗೆಷ್ಟು ಗೊತ್ತು? ಎಂಬ ಶೀರ್ಷಿಕೆಯಲ್ಲಿ ವಿವಿಧ ಸಂಪನೂಲ್ಮ ವ್ಯಕ್ತಿಗಳು ಮತ್ತು ವಿದ್ವಾಂಸರುಗಳು ಸೂಚಿತ ವಿಚಾರದ ಮೇಲೆ ತಮ್ಮ ವಿಚಾರ ಮಂಡನೆ ಹಾಗೂ ನಿರ್ಣಯಗಳ ಅಂಗೀಕಾರ ನಡೆಯಲಿದೆ. 
ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಗಡಿಕಾರರು ,ಗೋಳಿದಡಿಗುತ್ತು,ಗುರುಪುರ

ಸದೃಡ ಸಮಾಜಕ್ಕೆ ಅನಿವಾರ್ಯ: ಗುತ್ತಿನ ಆಡಳಿತ ವ್ಯವಸ್ಥೆಯ ಮುಂದಿನ ವರ್ಷಗಳಲ್ಲಿ ಅನಿವಾರ್ಯವೂ ಮತ್ತು ಈಗಿರುವ ಶಿಥಿಲ ರಾಜಕೀಯ ಆಡಳಿತ ವ್ಯವಸ್ಥೆಯ ಸಮಸ್ಯೆಗೆ ಉಜ್ವಲ ಭವಿಷ್ಯವಿರುವ ಅನಾದಿಯ ತಳ ಹದಿಯಲ್ಲಿ ಪರ್ಯಾಯವಾದ ಒಂದು ಭದ್ರ  ವ್ಯವಸ್ಥೆಯಾಗಲಿದೆ.
ರೋಹಿತ್ ಕುಮಾರ್ ಕಟೀಲ್, ಅಂತರಾಷ್ಟ್ರೀಯ ಕ್ರೀಡಾ ಪಟು

ಹೆಬ್ರಿ ಉದಯಕುಮಾರ್ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next