Advertisement
ಕಳೆದ ಕೊಯಿಲ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನದಿಂದ ಗ್ರಾಮದ ಪ್ರತಿ ಮನೆಗಳಿಗೂ ಏಕಾರತಿ, ಘಂಟಾ ಮಣಿ ಹಾಗೂ ತಟ್ಟೆಯನ್ನು ಪ್ರಸಾದ ರೂಪವಾಗಿ ನೀಡಲಾಗಿತ್ತು. ಅವುಗಳನ್ನು ಬಳಸಿ ವಿಜಯದಶಮಿಯದು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶುಚಿಭೂತರಾಗಿ, ಶುಭ್ರ ವಸ್ತ್ರ ಉಟ್ಟು ಮನೆಯ ದೇವರ ಕೋಣೆಯಲ್ಲಿ ತಮ್ಮ ಪುಸ್ತಕಗಳನ್ನಿಟ್ಟು ಅದಕ್ಕೆ ಹೂವು, ತುಳಸಿ, ಕುಂಕುಮ, ಅಕ್ಷತೆ ಇಟ್ಟು, ಆರತಿ ಎತ್ತಿ ಪೂಜೆ ಮಾಡಿ ಅದರ ಫೂಟೋಗಳನ್ನು ದೇವಸ್ಥಾನದ ಪ್ರಮುಖರೊಂದಿಗೆ ಹಂಚಿಕೊಳ್ಳುವ ಮೂಲಕ ಹೊಸದೊಂದು ಚಿಂತನೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿತ್ತು.
ಕೊಯಿಲ ಗ್ರಾಮದಲ್ಲಿ ಆರಂಭಗೊಂಡ ಚಿಂತನೆಯನ್ನು ಈ ಬಾರಿ ದೇವಾಲಯಗಳ ಸಂವರ್ಧನ ಸಮಿತಿಯ ಮೂಲಕ ದ.ಕ. ಹಾಗೂ ಕೊಡಗು ಜಿಲ್ಲೆಗಳಿಗೆ ವಿಸ್ತರಣೆ ಮಾಡಿದ್ದೇವೆ. ಎಲ್ಲೆಡೆ ಏಕಕಾಲದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ 5 ಸಾವಿರ ಮಕ್ಕಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ದೇವಾಲಯಗಳ ಸಂವರ್ಧನ ಸಮಿತಿಯ ಮಂಗಳೂರು ವಿಭಾಗ ಪ್ರಮುಖ್ ಕೇಶವ ಪ್ರಸಾದ್ ಮುಳಿಯ ಹೇಳಿದ್ದಾರೆ.
Related Articles
Advertisement