ಉಡುಪಿ: ಗುರುಪೂರ್ಣಿಮೆ ಅಂಗವಾಗಿ ರವಿವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಗುರುವಂದನ ಮಹೋತ್ಸವವು ಪರ್ಯಾಯ ಶ್ರೀ ಪುತ್ತಿಗೆ ಮಠ, ಶ್ರೀಕೃಷ್ಣ ಮಠ, ತಿರುಪತಿ ದೇವಸ್ಥಾನದ ದಾಸ ಸಾಹಿತ್ಯ ಪ್ರಾಜೆಕ್ಟ್ ಸಹಭಾಗಿತ್ವದಲ್ಲಿ ನಡೆಯಿತು.
ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶ ರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸಿ, ಶ್ರೀಕೃಷ್ಣ ಹಾಗೂ ಭಗವಂತನ ಸಂದೇಶ ಹಾಗೂ ತತ್ವದರ್ಶಗಳನ್ನು ಪಾಲಿಸಿದರೆ ನೆಮ್ಮದಿ ಯಿಂದ ಇರಬಹುದು.
ಶ್ರೀಕೃಷ್ಣನ ಮೇಲೆ ಭಕ್ತಿ ಇದ್ದರಷ್ಟೇ ಜೀವನ ಸಾರ್ಥಕವಾಗಲು ಸಾಧ್ಯ. ಭಕ್ತಿಯಿಂದ ಪ್ರಾರ್ಥಿಸಿದರೆ ಆತ ಎಂದಿಗೂ ನಮ್ಮ ಕೈ ಬಿಡುವುದಿಲ್ಲ ಎಂದರು.
ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮಾತನಾಡಿ, ಗುರು ಪೂರ್ಣಿಮೆ ಸಂಭ್ರಮದ ದಿನವಾ ಗಿದೆ. ಭಗವಂತನ ನಿರಂತರ ಆರಾಧನೆ ಯಿಂದ ಪುಣ್ಯಪ್ರಾಪ್ತಿ ಸಾಧ್ಯ ಎಂದರು.
ದಾಸ ಸಾಹಿತ್ಯ ಪ್ರಾಜೆಕ್ಟ್ ನ ಮುಖ್ಯ ಅಧಿಕಾರಿ ಆನಂದತೀರ್ಥಾಚಾರ್ ಪಗಡಾಲ್, ಟಿಟಿಡಿ ವಿಶೇಷ ಅಧಿಕಾರಿ ರಾಜ್‌ಗೋಪಾಲ್ ಉಪಸ್ಥಿತರಿದ್ದರು. ಅಧಿಕ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.