Advertisement

ಗುರುವಿನ ಕೈಹಿಡಿದು ನಮ್ಮ ಮನೆಗೆ ಮರಳುವುದು

12:42 AM Dec 30, 2020 | Team Udayavani |

ಈ ಕಥೆಯೂ ಬೌದ್ಧ ಮೂಲದ್ದೇ ಆಗಿದೆ. ಒಂದೂರು. ಆ ಊರಿನ ಆಡ್ಯ ವ್ಯಕ್ತಿಯ ಮಗ ಬಹಳ ಎಳೆಯ ವಯಸ್ಸಿನಲ್ಲಿಯೇ ಮನೆಯಿಂದ ತಪ್ಪಿಸಿಕೊಂಡಿದ್ದ. ಒಂದು ಕೆಟ್ಟ ಘಳಿಗೆಯಲ್ಲಿ ಮಗು ಕಾಣೆಯಾಗಿತ್ತು. ನಾಪತ್ತೆಯಾದ ಮಗುವನ್ನು ಹುಡುಕಾಡದ ಸ್ಥಳವಿಲ್ಲ. ಆದರೂ ಬಾಲಕ ಸಿಗಲಿಲ್ಲ.

Advertisement

ಇದಾಗಿ ಎಷ್ಟೋ ವರ್ಷಗಳ ಬಳಿಕ ಆ ಬಾಲಕ ತಿರುಗಾಡಿ ಯುವಕನಾಗಿ ಊರೂರು ಸುತ್ತಾಡುತ್ತ, ತಿರುಪೆ ಎತ್ತುತ್ತ ಮತ್ತೆ ಅದೇ ಊರಿಗೆ ಬಂದ. ಅವನಿಗೆ ತಾನು ಇದೇ ಊರಿನವನು ಎಂಬುದು ಮರೆತು ಹೋಗಿತ್ತು. ಹಾಗೆಯೇ ಭಿಕ್ಷೆಗಾಗಿ ತಾನು ಜನಿಸಿದ ಮನೆಯ ಮುಂದೆಯೇ ನಿಂತ. ಒಂದಾನೊಂದು ಕಾಲದಲ್ಲಿ ತಾನು ಇದೇ ಮನೆಯಲ್ಲಿ ಜನ್ಮ ತಾಳಿದ್ದೆ ಎಂಬುದು ಆ ಯುವಕನಿಗೆ ವಿಸ್ಮತಿಯಾಗಿತ್ತು. ಕೊಳೆ ಯಾದ ಮೈ, ಹರಿದ ಉಡುಗೆ ತೊಡುಗೆ ಗಳು, ಕೆದರಿದ ಕೂದಲು… ಆತನನ್ನು ಗುರುತಿಸಲು ಸಾಧ್ಯ ವಿರಲಿಲ್ಲ.

ಆದರೆ ಹೆತ್ತ ಕರುಳಿಗೆ ತಿಳಿಯದಿರುತ್ತದೆಯೆ! ಆಡ್ಯ ವ್ಯಕ್ತಿಗೆ ಈತನೇ ತನ್ನ ಮಗ ಎಂಬುದು ತಿಳಿದುಹೋಯಿತು. “ಒಳಗೆ ಬಾ’ ಎಂದು ಕರೆದರೆ ಯುವಕ ಬರ ಲೊಲ್ಲ. ಪರಿಪರಿಯಾಗಿ ವಿನಂತಿಸಿದರೂ ಕೇಳಲಿಲ್ಲ. ಕೊನೆಗೆ ಆಡ್ಯ ವ್ಯಕ್ತಿ ಉಪಾಯ ಮಾಡಿ ತನ್ನ ಮನೆಗೆಲಸದವರನ್ನು ಕಳುಹಿಸಿ ಕೊಟ್ಟ. “ಕೆಲಸಕ್ಕೊಬ್ಬ ಆಳುಮಗ ಬೇಕು. ಬರುತ್ತೀಯಾ, ಇಲ್ಲೇ ಇರುತ್ತೀಯಾ’ ಎಂದು ಕೇಳಿದವರು. ಅದಕ್ಕೆ ಯುವಕ ಒಪ್ಪಿಕೊಂಡ.

ಆತನಿಗೆ ಸಣ್ಣಪುಟ್ಟ ಕೆಲಸಗಳನ್ನು ಕೊಡ ಲಾಯಿತು. ಆತನ ಉಡುಗೆ ತೊಡುಗೆ ಬದಲಾದವು. ನಿಧಾನವಾಗಿ “ಈ ಮನೆಯ ಮಗ ನೀನು’ ಎಂಬುದನ್ನು ತಿಳಿಹೇಳ ಲಾಯಿತು. ಆಡ್ಯರ ರೀತಿನೀತಿಗಳನ್ನು ಕಲಿಸಿ ಕೊಡಲಾಯಿತು. ನೈಜ ಹೆಸರನ್ನೂ ತಿಳಿಸ ಲಾಯಿತು. ಕೊನೆಗೆ ಆ ಮನೆಯ ಅಷ್ಟೆ„ಶ್ವರ್ಯಗಳ ಉತ್ತರಾಧಿಕಾರಿಯಾಗಿ ಆತ ಬದಲಾದ.

ಒಬ್ಬ ಗುರು ಏನು ಮಾಡುತ್ತಾನೆ ಎಂಬು ದನ್ನು ಹೇಳುವ ಕಥೆಯಿದು. ಜ್ಞಾನವನ್ನು ಹೊಂದಬಲ್ಲ ಯೋಗ್ಯನನ್ನು ಗುರುತಿಸಿ, ಆತನಲ್ಲಿ ಅದರ ಬಗ್ಗೆ ಹಸಿವನ್ನು ಹುಟ್ಟಿಸು ವುದು, ಸಾಧನೆಯ ದಾರಿಗೆ ನಿಧಾನವಾಗಿ ಪರಿಚಯಿಸುವುದು, ಅಂಬೆಗಾಲಿಕ್ಕುವ ಮಗುವಿನ ಕೈಹಿಡಿಯುವಂತೆ ಮೆಲ್ಲಮೆಲ್ಲನೆ ಮುಂದಕ್ಕೆ ಕರೆದೊಯ್ಯುವುದು…

Advertisement

ಧನಿಕ ಒಂದೇಟಿಗೆ “ನೀನೇ ನನ್ನ ಮಗ’ ಎಂದು ಹೇಳಿದ್ದರೆ ಭಿಕ್ಷುಕ ಯುವಕ ಹೆದರಿ ಬಿಡುತ್ತಿದ್ದ, ಇದರಲ್ಲೇನೋ ಮೋಸವಿದೆ ಎಂದುಕೊಳ್ಳುತ್ತಿದ್ದ. ತಪ್ಪಿಸಿಕೊಳ್ಳುವುದೂ ಸಾಧ್ಯವಿತ್ತು. ಪರಮ ಸತ್ಯ, ಜ್ಞಾನ ಹಾಗೆಯೇ; ಅದು ನಮ್ಮೊಳಗೆಯೇ ಇದೆ. ಆದರೆ ಯಾರಾದರೂ ಹಾಗೆ ಹೇಳಿದರೆ ನಾವು ನಂಬು ವುದಿಲ್ಲ. ಭಿಕ್ಷುಕನಂತೆ ಆ ಹೊಸ ಅರಿವನ್ನು ಸ್ವಾಗತಿಸಲು, ಅದಕ್ಕೆ ಹೊಂದಿ ಕೊಳ್ಳಲು ಹೆದರುತ್ತೇವೆ.

ಗುರು ಬಹಳ ಬುದ್ಧಿ ವಂತ. ಜ್ಞಾನಾರ್ಥಿಯನ್ನು ಆತ ಬಹಳ ನಿಧಾನವಾಗಿ ಜ್ಞಾನ ಮಾರ್ಗ ದಲ್ಲಿ ಒಯ್ಯುತ್ತಾನೆ. ಕಥೆಗಳನ್ನು ಹೇಳುತ್ತಾನೆ, ಪರಮ ಸತ್ಯದ ಬಗ್ಗೆ ಆಸೆಯನ್ನು ಹುಟ್ಟಿಸು ತ್ತಾನೆ, ಅದನ್ನು ಸಾಧಿಸುವ ಬಗ್ಗೆ ತಹತಹವನ್ನು ಮೂಡಿ ಸುತ್ತಾನೆ. ಹಂತ ಹಂತವಾಗಿ ಆ ಮಾರ್ಗದಲ್ಲಿ ಸಾಗುತ್ತೇವೆ. ಕೊನೆಗೊಂದು ದಿನ ಇದು ಗುರುವಿನ ಉಪಾಯ ಎಂಬುದೂ ನಮಗೆ ತಿಳಿದು ಬಿಡುತ್ತದೆ. ಕೊನೆಯಲ್ಲಿ ನಾವು ನಿಜವಾಗಿ ಏನಾಗಿದ್ದೇ ವೆಯೋ; ಅಂದರೆ ನಮ್ಮೊಳ ಗೆಯೇ ಇರುವ ಪರಮ ಸತ್ಯದ ಅರಿವು- ಅದಾಗಿಬಿಡುತ್ತೇವೆ.ಈ ಕಥೆಯೂ ಬೌದ್ಧ ಮೂಲದ್ದೇ ಆಗಿದೆ.

ಒಂದೂರು. ಆ ಊರಿನ ಆಡ್ಯ ವ್ಯಕ್ತಿಯ ಮಗ ಬಹಳ ಎಳೆಯ ವಯಸ್ಸಿನಲ್ಲಿಯೇ ಮನೆಯಿಂದ ತಪ್ಪಿಸಿಕೊಂಡಿದ್ದ. ಒಂದು ಕೆಟ್ಟ ಘಳಿಗೆಯಲ್ಲಿ ಮಗು ಕಾಣೆಯಾಗಿತ್ತು. ನಾಪತ್ತೆಯಾದ ಮಗುವನ್ನು ಹುಡುಕಾಡದ ಸ್ಥಳವಿಲ್ಲ. ಆದರೂ ಬಾಲಕ ಸಿಗಲಿಲ್ಲ.

ಇದಾಗಿ ಎಷ್ಟೋ ವರ್ಷಗಳ ಬಳಿಕ ಆ ಬಾಲಕ ತಿರುಗಾಡಿ ಯುವಕನಾಗಿ ಊರೂರು ಸುತ್ತಾಡುತ್ತ, ತಿರುಪೆ ಎತ್ತುತ್ತ ಮತ್ತೆ ಅದೇ ಊರಿಗೆ ಬಂದ. ಅವನಿಗೆ ತಾನು ಇದೇ ಊರಿನವನು ಎಂಬುದು ಮರೆತು ಹೋಗಿತ್ತು. ಹಾಗೆಯೇ ಭಿಕ್ಷೆಗಾಗಿ ತಾನು ಜನಿಸಿದ ಮನೆಯ ಮುಂದೆಯೇ ನಿಂತ. ಒಂದಾನೊಂದು ಕಾಲದಲ್ಲಿ ತಾನು ಇದೇ ಮನೆಯಲ್ಲಿ ಜನ್ಮ ತಾಳಿದ್ದೆ ಎಂಬುದು ಆ ಯುವಕನಿಗೆ ವಿಸ್ಮತಿಯಾಗಿತ್ತು. ಕೊಳೆ ಯಾದ ಮೈ, ಹರಿದ ಉಡುಗೆ ತೊಡುಗೆ ಗಳು, ಕೆದರಿದ ಕೂದಲು… ಆತನನ್ನು ಗುರುತಿಸಲು ಸಾಧ್ಯ ವಿರಲಿಲ್ಲ.

ಆದರೆ ಹೆತ್ತ ಕರುಳಿಗೆ ತಿಳಿಯದಿರುತ್ತದೆಯೆ! ಆಡ್ಯ ವ್ಯಕ್ತಿಗೆ ಈತನೇ ತನ್ನ ಮಗ ಎಂಬುದು ತಿಳಿದುಹೋಯಿತು. “ಒಳಗೆ ಬಾ’ ಎಂದು ಕರೆದರೆ ಯುವಕ ಬರ ಲೊಲ್ಲ. ಪರಿಪರಿಯಾಗಿ ವಿನಂತಿಸಿದರೂ ಕೇಳಲಿಲ್ಲ. ಕೊನೆಗೆ ಆಡ್ಯ ವ್ಯಕ್ತಿ ಉಪಾಯ ಮಾಡಿ ತನ್ನ ಮನೆಗೆಲಸದವರನ್ನು ಕಳುಹಿಸಿ ಕೊಟ್ಟ. “ಕೆಲಸಕ್ಕೊಬ್ಬ ಆಳುಮಗ ಬೇಕು. ಬರುತ್ತೀಯಾ, ಇಲ್ಲೇ ಇರುತ್ತೀಯಾ’ ಎಂದು ಕೇಳಿದವರು. ಅದಕ್ಕೆ ಯುವಕ ಒಪ್ಪಿಕೊಂಡ.

ಆತನಿಗೆ ಸಣ್ಣಪುಟ್ಟ ಕೆಲಸಗಳನ್ನು ಕೊಡ ಲಾಯಿತು. ಆತನ ಉಡುಗೆ ತೊಡುಗೆ ಬದಲಾದವು. ನಿಧಾನವಾಗಿ “ಈ ಮನೆಯ ಮಗ ನೀನು’ ಎಂಬುದನ್ನು ತಿಳಿಹೇಳ ಲಾಯಿತು. ಆಡ್ಯರ ರೀತಿನೀತಿಗಳನ್ನು ಕಲಿಸಿ ಕೊಡಲಾಯಿತು. ನೈಜ ಹೆಸರನ್ನೂ ತಿಳಿಸ ಲಾಯಿತು. ಕೊನೆಗೆ ಆ ಮನೆಯ ಅಷ್ಟೆ„ಶ್ವರ್ಯಗಳ ಉತ್ತರಾಧಿಕಾರಿಯಾಗಿ ಆತ ಬದಲಾದ.

ಒಬ್ಬ ಗುರು ಏನು ಮಾಡುತ್ತಾನೆ ಎಂಬು ದನ್ನು ಹೇಳುವ ಕಥೆಯಿದು. ಜ್ಞಾನವನ್ನು ಹೊಂದಬಲ್ಲ ಯೋಗ್ಯನನ್ನು ಗುರುತಿಸಿ, ಆತನಲ್ಲಿ ಅದರ ಬಗ್ಗೆ ಹಸಿವನ್ನು ಹುಟ್ಟಿಸು ವುದು, ಸಾಧನೆಯ ದಾರಿಗೆ ನಿಧಾನವಾಗಿ ಪರಿಚಯಿಸುವುದು, ಅಂಬೆಗಾಲಿಕ್ಕುವ ಮಗುವಿನ ಕೈಹಿಡಿಯುವಂತೆ ಮೆಲ್ಲಮೆಲ್ಲನೆ ಮುಂದಕ್ಕೆ ಕರೆದೊಯ್ಯುವುದು…

ಧನಿಕ ಒಂದೇಟಿಗೆ “ನೀನೇ ನನ್ನ ಮಗ’ ಎಂದು ಹೇಳಿದ್ದರೆ ಭಿಕ್ಷುಕ ಯುವಕ ಹೆದರಿ ಬಿಡುತ್ತಿದ್ದ, ಇದರಲ್ಲೇನೋ ಮೋಸವಿದೆ ಎಂದುಕೊಳ್ಳುತ್ತಿದ್ದ. ತಪ್ಪಿಸಿಕೊಳ್ಳುವುದೂ ಸಾಧ್ಯವಿತ್ತು. ಪರಮ ಸತ್ಯ, ಜ್ಞಾನ ಹಾಗೆಯೇ; ಅದು ನಮ್ಮೊಳಗೆಯೇ ಇದೆ. ಆದರೆ ಯಾರಾದರೂ ಹಾಗೆ ಹೇಳಿದರೆ ನಾವು ನಂಬು ವುದಿಲ್ಲ. ಭಿಕ್ಷುಕನಂತೆ ಆ ಹೊಸ ಅರಿವನ್ನು ಸ್ವಾಗತಿ ಸಲು, ಅದಕ್ಕೆ ಹೊಂದಿ ಕೊಳ್ಳಲು ಹೆದರುತ್ತೇವೆ.

ಗುರು ಬಹಳ ಬುದ್ಧಿ ವಂತ. ಜ್ಞಾನಾರ್ಥಿಯನ್ನು ಆತ ಬಹಳ ನಿಧಾನವಾಗಿ ಜ್ಞಾನ ಮಾರ್ಗ ದಲ್ಲಿ ಒಯ್ಯುತ್ತಾನೆ. ಕಥೆಗಳನ್ನು ಹೇಳುತ್ತಾನೆ, ಪರಮ ಸತ್ಯದ ಬಗ್ಗೆ ಆಸೆಯನ್ನು ಹುಟ್ಟಿಸು ತ್ತಾನೆ, ಅದನ್ನು ಸಾಧಿಸುವ ಬಗ್ಗೆ ತಹತಹವನ್ನು ಮೂಡಿ ಸುತ್ತಾನೆ. ಹಂತ ಹಂತವಾಗಿ ಆ ಮಾರ್ಗದಲ್ಲಿ ಸಾಗುತ್ತೇವೆ. ಕೊನೆಗೊಂದು ದಿನ ಇದು ಗುರುವಿನ ಉಪಾಯ ಎಂಬುದೂ ನಮಗೆ ತಿಳಿದು ಬಿಡುತ್ತದೆ. ಕೊನೆಯಲ್ಲಿ ನಾವು ನಿಜವಾಗಿ ಏನಾಗಿದ್ದೇ ವೆಯೋ; ಅಂದರೆ ನಮ್ಮೊಳ ಗೆಯೇ ಇರುವ ಪರಮ ಸತ್ಯದ ಅರಿವು- ಅದಾಗಿಬಿಡುತ್ತೇವೆ.

ಗುರು ನಮಗೆ ಏನನ್ನೂ ನೀಡುವುದಿಲ್ಲ. ನಮ್ಮಲ್ಲಿ ಇದ್ದರೂ “ಇಲ್ಲ’ ಎಂದು ನಾವು ತಿಳಿದುಕೊಳ್ಳುವ ಕೆಲವಂಶಗಳ ಬಗ್ಗೆ ಗುರು ನಮ್ಮನ್ನು ಜಾಗೃತಗೊಳಿಸುತ್ತಾನೆ. ಗುರುವಿನ ಕೆಲಸ ನಮ್ಮನ್ನು ಮರಳಿ ನಮ್ಮದೇ ಮನೆಗೆ ಪರಿಚಯಿಸುವುದು, ಕರೆತರುವುದು; ಅದೂ ನಾವು ಎಂದೂ ಬಿಟ್ಟುಹೋಗಿರದ ನಮ್ಮದೇ ಮನೆಗೆ.

Advertisement

Udayavani is now on Telegram. Click here to join our channel and stay updated with the latest news.

Next