Advertisement

ಗುರುಪೂಜೆಯ ಗೌರವ ಸಂಗೀತ ಕಲಾಚಾರ್ಯ ಪ್ರೊ|ಕೆ. ವೆಂಕಟರಮಣನ್‌

07:30 AM Feb 18, 2017 | Team Udayavani |

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಖ್ಯಾತ ನಾಮರಲ್ಲಿ ಒಬ್ಬ ರಾದ ಪ್ರೊ| ಕೆ. ವೆಂಕಟರಮಣನ್‌ ಅವರಿಗೆ ಇತ್ತೀಚೆಗೆ ಮದರಾಸು ಸಂಗೀತ ಅಕಾಡೆಮಿಯ ಪ್ರತಿಷ್ಠಿತ “ಸಂಗೀತ ಕಲಾಚಾರ್ಯ’ ಸಮ್ಮಾನ ಸಂದಿರುವ ಪ್ರಯುಕ್ತ ಕಾಸರಗೋಡು ಸಮೀಪದ ಬಳ್ಳಪದವಿನಲ್ಲಿರುವ “ವೀಣಾವಾದಿನೀ ಸಂಗೀತ ಶಾಲೆ’ಯ ವಾರ್ಷಿಕೋತ್ಸವ ಸಂದರ್ಭದಲ್ಲಿ ಫೆಬ್ರವರಿ 19, 2017ರಂದು ಅವರಿಗಾಗಿ “ಗುರುಪೂಜಾ’ ಎಂಬ ವಿಶಿಷ್ಟ ಕಾರ್ಯಕ್ರಮವೊಂದನ್ನು ಏರ್ಪಾಟು ಮಾಡಲಾಗಿದೆ. ಕರಾವಳಿ ಕರ್ನಾಟಕದ ವ್ಯಕ್ತಿಯೊಬ್ಬರು ಕೇರಳದಲ್ಲಿ ನೆಲೆಸಿ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿ ಕೀರ್ತಿ ಗಳಿಸಿರುವುದು ಅಪರೂಪದ ಒಂದು ಸಂಗತಿ.

Advertisement

ಈಗ ಎಂಬತ್ತರ ಹರೆಯದಲ್ಲಿರುವ ಪಡುಬಿದಿರೆ ಖಂಡೇಮನೆಯ ಕೆ. ವೆಂಕಟರಮಣ ಅವರು ತನ್ನ ಹದಿನಾರನೇ ವರ್ಷದಲ್ಲಿ ಜೀವನೋಪಾಯಕ್ಕಾಗಿ ತಿರುವ ನಂತಪುರಕ್ಕೆ ಹೋದವರು. ಅಲ್ಲಿ ಸಂಗೀತ ಕ್ಷೇತ್ರ ಪ್ರವೇಶಿಸಿ, ಅನಂತರ ಅಲ್ಲಿನ ಸ್ವಾತಿ ತಿರುನಾಳ್‌ ಸಂಗೀತ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಜತೆಜತೆಗೆ ತಾನೂ ಸಾಧನೆ ಮಾಡಿ, ಪ್ರಸ್ತುತ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಒಂದು ದೊಡ್ಡ ಹೆಸರಾಗಿ ಮೂಡಿ ಬಂದಿರುವುದು ಈಗ ಇತಿಹಾಸ. 

ವೆಂಕಟರಮಣ ಅವರ ತಂದೆ ತಿರುವನಂತಪುರದಲ್ಲಿ ಅರ್ಚಕರಾಗಿದ್ದುದರಿಂದ ಬಾಲಕ ವೆಂಕಟರಮಣ ಪಡುಬಿದಿರೆಯಿಂದ ತಿರುವನಂತಪುರಕ್ಕೆ ಹೋಗುವಂತಾ ಯಿತು. ಚಿಕ್ಕಂದಿನಿಂದಲೇ ಸಂಗೀತದಲ್ಲಿ ಆಸಕ್ತಿಯಿದ್ದುದರಿಂದ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುವ ಮನಸ್ಸಾಗಿ ಸ್ವಾತಿ ತಿರುನಾಳ್‌ ಸಂಗೀತ ಶಾಲೆಗೆ ಸೇರಿದರು. “ಗಾನಭೂಷಣ’ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಪಡೆದುಕೊಂಡರು. 1956ರಲ್ಲಿ ಉನ್ನತ ಹಂತದ “ಸಂಗೀತ ವಿದ್ವಾನ್‌’ ಆದರು. 1960ರಿಂದ 1971ರವರೆಗೆ ಕೇರಳದ ವಿವಿಧ ಸರಕಾರಿ ಪ್ರೌಢಶಾಲೆಗಳಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿ, 1972ರಲ್ಲಿ ಸ್ವಾತಿ ತಿರುನಾಳ್‌ ಸಂಗೀತ ಕಾಲೇಜಿಗೆ ಪ್ರೊಫೆಸರ್‌ ಆಗಿ ಸೇರಿದರು. 1991ರಲ್ಲಿ ಉದ್ಯೋಗದಿಂದ  ನಿವೃತ್ತರಾಗುವವರೆಗೆ ಅಲ್ಲಿ ಸೇವೆ ಸಲ್ಲಿಸಿ ಸಾವಿರಾರು ಮಂದಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿದರು. ಇಂದು ಕೇರಳದಲ್ಲಿರುವ ಬಹುತೇಕ ಯುವ ಸಂಗೀತ ಕಲಾವಿದರು ಪ್ರೊ| ಪಡುಬಿದಿರೆ ವೆಂಕಟರಮಣನ್‌ ಅವರ ಶಿಷ್ಯರಾಗಿ¨ªಾರೆ.  

1956ರಷ್ಟು ಹಿಂದೆ ಆಕಾಶವಾಣಿ ಸಂಗೀತ ಸಮ್ಮೇಳನದಲ್ಲಿ ಹಾಡಿ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದ್‌ ಅವರಿಂದ ಮನ್ನಣೆ ಪಡೆದುದು ಪ್ರೊ| ವೆಂಕಟರಮಣ ಅವರ ಜೀವನದ ಅವಿಸ್ಮರಣೀಯ ಘಳಿಗೆ. ಶೃಂಗೇರಿ ಶ್ರೀಗಳಿಂದ ಪಾವಂಜೆ ಹರಿದಾಸ ಲಕ್ಷ್ಮೀನಾರಣಪ್ಪಯ್ಯ ಸ್ಮಾರಕ ಪುರಸ್ಕಾರ, ಕಂಚಿ ಕಾಮಕೋಟಿ ಯತಿಗಳಿಂದ “ಆಸ್ಥಾನ ವಿದ್ವಾನ್‌’ ಪದವಿ, ಸ್ವಾತಿ ತಿರುನಾಳ್‌ ಸಂಗೀತ ಸಭಾ ವತಿಯಿಂದ “ಗುರು ಪೂಜಾ ಪುರಸ್ಕಾರ’ ಮೊದಲಾದ ಪುರಸ್ಕಾರಗಳನ್ನು ಗಳಿಸಿದ್ದಾರೆ. ಆಕಾಶವಾಣಿಯ “ಎ’ ದರ್ಜೆಯ ಕಲಾವಿದರಾಗಿದ್ದಾರೆ. 

ತಿರುವನಂತಪುರ, ಮಂಗಳೂರು, ಕಲ್ಲಿಕೋಟೆ, ವಿಜಯ ವಾಡ, ತಿರುಚ್ಚಿ, ಚೆನ್ನೈ ಮೊದಲಾದ ಪ್ರತಿಷ್ಠಿತ ಸ್ಥಳಗಳಲ್ಲಿ ಮಾತ್ರವಲ್ಲದೆ ಇತರ ನೂರಾರು ಕಡೆಗಳಲ್ಲಿ ಪ್ರಮುಖ ಕಛೇರಿ ಗಳಲ್ಲಿ ಹಾಡಿರುವ ಇವರು ಇಂದಿಗೂ ಉತ್ತಮ ಶಾರೀರ ಉಳಿಸಿಕೊಂಡಿ¨ªಾರೆ. ಪುರಂದರದಾಸರ ಕೀರ್ತನೆಗಳಿಗೆ ಸ್ವಂತ ರಾಗಸಂಯೋಜನೆ ಮಾಡಿರುವುದು ಇವರ ವೈಶಿಷ್ಟ್ಯಗಳಲ್ಲಿ ಒಂದು.  ಕಛೇರಿಗಳಲ್ಲಿ ದೇವರನಾಮಗಳನ್ನೇ ಹಾಡಿ ತೋರಿಸಿರುವುದು ಇನ್ನೊಂದು ವಿಶೇಷತೆ.

Advertisement

ಕೇರಳದ ವಿವಿಗಳಲ್ಲಿ ಎಂಎ ಮತ್ತು ಎಂಫಿಲ್‌ ವಿದ್ಯಾರ್ಥಿ ಗಳಿಗೆ ಸಂದರ್ಶಕ ಪ್ರಾಧ್ಯಾಪಕರಾಗಿ ಇಂದಿಗೂ ಪಾಠ ಹೇಳು ತ್ತಿ¨ªಾರೆ. ತನ್ನ ಶಿಷ್ಯ ಬಳ್ಳಪದವು ಯೋಗೀಶ ಶರ್ಮ ಕಾಸರ ಗೋಡು ಸಮೀಪದ ಬಳ್ಳಪದವಿನಲ್ಲಿ ಸ್ಥಾಪಿಸಿದ “ವೀಣಾ ವಾದಿನೀ ಸಂಗೀತ ಶಾಲೆ’ಗೆ ಇಂದಿಗೂ ವರ್ಷಕ್ಕೆ ಹಲವು ಬಾರಿ ಆಗಮಿಸಿ ನಿಗದಿತ ಅವಧಿಯ ಕಮ್ಮಟಗಳನ್ನು ನಡೆಸಿ ಆಸಕ್ತ ವಿದ್ಯಾರ್ಥಿ ಗಳಿಗೆ ಉನ್ನತ ಹಂತದ ಸಂಗೀತ ಪಾಠ ಮಾಡು ತ್ತಿ¨ªಾರೆ. ಇಂತಹ ಹಿರಿಯ ಕಲಾವಿದರಿಗೆ “ವೀಣಾವಾದಿನೀ’ ವತಿಯಿಂದ “ಗುರುಪೂಜೆ’ ನಡೆಯುತ್ತಿರುವುದು ಅರ್ಥಪೂರ್ಣವಾಗಿದೆ.

ವಿ| ಅರ್ಥಾ ಪೆರ್ಲ

Advertisement

Udayavani is now on Telegram. Click here to join our channel and stay updated with the latest news.

Next