Advertisement

ಜನರಿಗೆ ಖಾತ್ರಿ ಯೋಜನೆ ಆಸರೆ: ಮುಕ್ಕಣ್ಣ

04:39 PM May 30, 2020 | Naveen |

ಗುರುಮಠಕಲ್‌: ತಾಲೂಕಿನ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ಮೊದಲ ಬಾರಿಗೆ ತಾಪಂ ಸಾಮಾನ್ಯ ಸಭೆ ನಡೆಸಿದರು.

Advertisement

ತಾಲೂಕಿನ ಗಾಜರಕೋಟ ಗ್ರಾಮದಲ್ಲಿ 700 ಜನರು ಬೆಂಗಳೂರಿನಿಂದ ಹಿಂದಿರುಗಿದ್ದು, ಅವರಿಗೆ ಉದ್ಯೋಗ ಖಾತ್ರಿಯ ಜಾಬ್‌ ಕಾರ್ಡ್‌ ನೀಡುವ ಮೂಲಕ ವಲಸೆಯಿಂದ ಹಿಂದಿರುಗಿದವರಿಗೆ ಕೆಲಸದ ಖಾತ್ರಿ ಯೋಜನೆಗೆ ಚಾಲನೆ ನೀಡಿದರು. ಗಾಜರಕೋಟ ಗ್ರಾಮದ ಮನೆ ಮನೆಗೆ ತೆರಳಿ ಬೆಂಗಳೂರಿನಿಂದ ಬಂದಿರುವ ವಲಸೆ ಕಾರ್ಮಿಕರನ್ನು ಗುರುತಿಸಿ ಒಂದು ಕುಟುಂಬಕ್ಕೆ 100 ದಿನಗಳ ಕೆಲಸವಾಗಿದ್ದು, ದಿನಕ್ಕೆ 275 ರೂ.ಯಂತೆ ಕೂಲಿ ನೀಡಲಾಗುತ್ತಿದೆ. ಹೆಚ್ಚುವರಿಯಾಗಿ ಸಲಕರಣೆಗಳಿಗೆ 10 ರೂ. ಪಾವತಿಸಲಾಗುವುದು. ಪ್ರತಿ ವಾರಕ್ಕೊಮ್ಮೆ ಕೂಲಿ ಪಾವತಿಸಲಾಗುವುದು ಎಂದು ಕೂಲಿಕಾರರಿಗೆ ಹೇಳಿದರು.

ಉದ್ಯೋಗ ಖಾತ್ರಿಗೆ ಸಂಬಂಧಪಟ್ಟಂತಹ ಸಂದೇಹ ಮತ್ತು ಸಮಸ್ಯೆಗಳ ಬಗ್ಗೆ ಕೂಲಿಗಾರರ ಜತೆ ಸಂವಾದ ನಡೆಸಿ ಸಮಸ್ಯೆಗಳನ್ನು ಪರಿಹರಿಸಿದರು. ಎಡಿ ಚಂದ್ರಶೇಖರ್‌ ಪವಾರ, ಗಾಜರಕೋಟ ಪಿಡಿಒ ಮಹಾದೇವಪ್ಪ ಸೇರಿದಂತೆ ತಾಲೂಕಿನ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next