Advertisement
ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಕೊರೊನಾ ಸಂಕಷ್ಟ ಪರಿಸ್ಥಿತಿಯಲ್ಲಿ ಕ್ಷೇತ್ರಕ್ಕೆ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಮುಂದಿನ ದಿನಗಳಲ್ಲಿ ಸತತ ಪ್ರವಾಸ ಮಾಡಿ ಜನರ ಸಮಸ್ಯೆಗಳನ್ನು ಆಲಿಸಿ ಈ ಭಾಗದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದರು.
Related Articles
Advertisement
ಗುರುಮಠಕಲ್ ಕ್ಷೇತ್ರದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಬಂದಳ್ಳಿ ಗ್ರಾಮದ ಹತ್ತಿರ ಏಕಲವ್ಯ ಶಾಲೆ ಸ್ಥಾಪಿಸಲು ತಾನು ಶ್ರಮಪಟ್ಟಿದ್ದೇನೆ. ಆದರೆ ತನ್ನ ಗಮನಕ್ಕೆ ತಾರದೇ ಶಾಲೆ ಉದ್ಘಾಟನೆ ಮಾಡುವುದು ಎಷ್ಟು ಸರಿ ಎಂದು ಸಚಿವ ಬಿ. ಶ್ರೀರಾಮುಲು ಅವರಿಗೆ ಮನವಿ ಮಾಡಿದ್ದೇನೆ. ಅದನ್ನು ಪುರಸ್ಕರಿಸಿ ಕಾರ್ಯಕ್ರಮ ರದ್ದು ಮಾಡಿದ್ದಾರೆ. ಆದರೆ ನಾಯಕ ಸಮುದಾಯದ ಯುವಕರು ತಪ್ಪು ಗ್ರಹಿಸಿಕೊಂಡಿದ್ದಾರೆ. ಎಲ್ಲ ಸಮುದಾಯದ ಜನರನ್ನು ಸಹೋದರತೆಯಿಂದ ಕಾಣುವ ವ್ಯಕ್ತಿ ನಾನು. ಆದ್ದರಿಂದ ನಿಮ್ಮ ಮನಸ್ಸಿಗೆ ನೋವುಂಟಾಗಿದ್ದರೆ ಕ್ಷಮೆ ಇರಲಿ ಎಂದು ನಾಯಕ ಸಮುದಾಯದವರಲ್ಲಿ ಕೇಳಿಕೊಂಡರು.
ಸಂಸದರ ವಾಹನ ತಡೆದು ಆಕ್ರೋಶ
ಕಾರ್ಯಕರ್ತರ ಸಭೆಗೆ ಆಗಮಿಸಿದ ಕಲಬುರ್ಗಿ ಸಂಸದ ಜಾಧವ ಕೇವಲ ಭಾಷಣ ಮಾಡಿ, ಕೆಲ ಮನವಿ ಪತ್ರ ಸ್ವೀಕರಿಸಿದರು. ಆದರೆ ಬಿಜೆಪಿ ಕಾರ್ಯಕರ್ತರು ತಮ್ಮ ಸಮಸ್ಯೆಗೆ ಪರಿಹಾರ ಹೇಳಿ ಎಂದು ಕೇಳಿಕೊಂಡರು. ಆದರೆ ಇದ್ಯಾವುದಕ್ಕೆ ಕಿವಿಗೊಡದೆ ವಾಹನ ಹತ್ತಿ ಹೊರಡಲು ತಯಾರಾದರು. ಇದನ್ನು ಗಮನಿಸಿದ ಬಿಜೆಪಿ ಕಾರ್ಯಕರ್ತರು ಸಂಸದರ ವಾಹನ ತಡೆದು ಆಕ್ರೋಶ ವ್ಯಕ್ತಪಡಿಸಿದರು.