Advertisement

ಜನಧನ ಖಾತೆ ಸೌಲಭ್ಯ ಪಡೆಯಿರಿ

03:54 PM Jul 27, 2019 | Naveen |

ಗುರುಮಠಕಲ್: ದೇಶದ ಬಡವ ಮತ್ತು ಅತಿ ಬಡವ ವರ್ಗದವರಿಗೆ ಜನಧನ ಯೋಜನೆ ಮುಖಾಂತರ ಬ್ಯಾಂಕ್‌ ಖಾತೆ ಹೊಂದಲು ಅವಕಾಶವಿದೆ. ದೇಶದ ಕೋಟ್ಯಂತರ ಕುಟುಂಬಗಳು ಮೊಬೈಲ್ ಹೊಂದಿವೆ. ಆದರೆ ಬ್ಯಾಂಕ್‌ ಖಾತೆ ಹೊಂದಿಲ್ಲ. ಇದನ್ನು ಬದಲಾವಣೆ ಮಾಡಬೇಕಾಗಿದೆ. ಜನಧನ ಖಾತೆ ಮೂಲಕ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಬ್ಯಾಂಕ್‌ ಅಧಿಕಾರಿ ಎಂದು ದೇವೇಂದ್ರಪ್ಪ ಮಹಾಮನಿ ಹೇಳಿದರು.

Advertisement

ಕಾಕಲವಾರ ಗ್ರಾಮದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್‌ ವತಿಯಿಂದ ಹಮ್ಮಿಕೊಂಡಿದ್ದ ಜನ ಸ್ಪಂದನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರುಪೆ ಕಾರ್ಡ್‌ ಹೆಸರಿನ ಈ ಸೌಲಭ್ಯ ಕೋಟ್ಯಂತರ ಜನರಿಗೆ ಅನುಕೂಲಕಾರಿ ಯಾಗಲಿದೆ. ಬಡ ವರ್ಗದ ಜನರಿಗೆ ಸರ್ಕಾರದ ವಿವಿಧ ಹಣಕಾಸು ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ಯೋಜನೆ ಪಟ್ಟಣ ಮತ್ತು ಗ್ರಾಮೀಣ ಜನತೆಯನ್ನು ಒಳಗೊಳ್ಳಲಿದ್ದು, ಎಲ್ಲರಿಗೂ ಡೊಮೆಸ್ಟಿಕ್‌ ಡೆಬಿಟ್ ಕಾರ್ಡ್‌ ನೀಡಲಾಗುವುದು ಎಂದರು.

ಡೆಬಿಟ್ ಕಾರ್ಡ್‌ನಿಂದ ಹಿಡಿದು ಅಪಘಾತ ವಿಮೆವರೆಗಿನ ಎಲ್ಲ ಬಗೆಯ ಬ್ಯಾಂಕಿಂಗ್‌ ಕ್ಷೇತ್ರದ ಮೂಲ ಸೌಲಭ್ಯಗಳನ್ನು ಯೋಜನೆ ಒಳಗೊಂಡಿದೆ. ಆಧಾರ್‌ ಕಾರ್ಡ್‌ ಸಂಬಂಧಿತ ಐದು ಸಾವಿರಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳಿಗೆ ಓವರ್‌ ಡ್ರಾಪ್ಟ್ ಸೌಲಭ್ಯ ಕಲ್ಪಿಸಲಾಗುವುದು. ರುಪೆ ಡೆಬಿಟ್ ಕಾರ್ಡ್‌ ಹೊಂದಿದ ಗ್ರಾಹಕರಿಗೆ ಒಂದು ಲಕ್ಷ ರೂ. ವರೆಗಿನ ಅಪಘಾತ ವಿಮೆಯನ್ನು ಯಾವುದೇ ವೆಚ್ಚವಿಲ್ಲದೇ ಒದಗಿಸಲಾಗುವುದು ಎಂದರು.

ನೀವು ಬ್ಯಾಂಕಿನ ವ್ಯವಹಾರ ಮಾಡುವಾಗ ಒಂದು ದಿನದ ಕೆಲಸವನ್ನು ಕಳೆದುಕೊಂಡು ಪಟ್ಟಣದ ಬ್ಯಾಂಕ್‌ ಶಾಖೆಗೆ ಹೋಗಬೇಕು ಎನ್ನುವುದು ಈಗ ಇಲ್ಲ. ಬ್ಯಾಂಕಿನ ಸೌಲಭ್ಯಗಳನ್ನು ಬಡ ಕುಟುಂಬಗಳ ಮನೆಯವರೆಗೆ ತಲುಪಿಸುವ ಉದ್ದೇಶದಿಂದ ಗ್ರಾಹಕ ಸೇವಾ ಕೇಂದ್ರಗಳನ್ನು ತೆರೆಯುವ ಮೂಲಕ ನಮ್ಮ ಪ್ರತಿನಿಧಿಯಾಗಿ ನಿಮ್ಮ ಗ್ರಾಮದವರೆ ನಿಮಗೆ ಬ್ಯಾಂಕಿಂಗ್‌ ಸೇವೆಗಳನ್ನು ಒದಗಿಸುವಂತಹ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

Advertisement

ಜನರಿಗೆ ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌ ಮತ್ತಿತರ ಬ್ಯಾಂಕಿಂಗ್‌ ಸೌಲಭ್ಯ ಕಲ್ಪಿಸಲು ಮೊದಲು ಗಮನ ಹರಿಸಲಾಗುವುದು. ಬ್ಯಾಂಕ್‌ ಖಾತೆ ಹೊಂದಿರದವರನ್ನು ಗುರುತಿಸುವುದು ಅಷೇr ಮುಖ್ಯ. ಸ್ವಾವಲಂಬನಾ ಹೆಸರಿನಲ್ಲಿ ನಿವೃತ್ತಿಯಾದವರಿಗೆ ಸೌಲಭ್ಯ ಮತ್ತು ವಿಮೆ ಸೌಲಭ್ಯ ಕಲ್ಪಿಸಲಾಗುವುದು. ಬ್ಯಾಂಕ್‌ ಖಾತೆ ತೆರಯಲು ಆಧಾರ್‌ ಕಾರ್ಡ್‌ ಕಡ್ಡಾಯವಲ್ಲ ಎಂದು ತಿಳಿಸಿದರು.

ಪ್ರಾದೇಶಿಕ ವ್ಯವಹಾರ ಕೇಂದ್ರದ ವ್ಯವಸ್ಥಾಪಕ ರಾಮಕೃಷ್ಣ ಶಣೈಅಧ್ಯಕ್ಷತೆ ವಹಿಸಿದ್ದರು. ವ್ಯವಸ್ಥಾಪಕರಾದ ದಿನೇಶ್‌, ರವಿಗೌಡ, ತೌಫಿಕ್‌, ಗುರುಮಠಕಲ್ ವ್ಯವಸ್ಥಾಪಕ ಅರ್ನಬ್‌, ವೀರಣ್ಣ, ಪಿಡಿಒ ಶರಣಪ್ಪ ಮೈಲಾರಿ, ಮುಖ್ಯಶಿಕ್ಷಕ ಮನೋಹರರಾವ್‌, ಎಸ್‌.ಬಿ.ಐ ಪ್ರತಿಧಿನಿಗಳಾದ ರವೀಂದ್ರರೆಡ್ಡಿ, ಪ್ರಕಾಶ, ವೆಂಕಟರೆಡ್ಡಿ ಸೇರಿದಂತೆ ಗ್ರಾಮ ಪಂಚಾಯತಿ ಸದಸ್ಯರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next