Advertisement

28ರಿಂದ ಗುರುಕುಲ ಕ್ರಿಕೆಟ್‌ ಕಪ್‌-2017ಆರಂಭ

10:31 AM Aug 27, 2017 | Team Udayavani |

ಕಲಬುರಗಿ: ಸ್ವಾಮಿನಾರಾಯಣ ಗುರುಕುಲ ಇಂಟರ್‌ನ್ಯಾಷನಲ್‌ ಸ್ಕೂಲ್‌ ಆಶ್ರಯದಲ್ಲಿ ಆ. 28ರಿಂದ ಭಾರತ ಮತ್ತು ಶ್ರೀಲಂಕಾ ತಂಡಗಳ ನಡುವ ಗುರುಕುಲ ಇಂಡಿಪೆಂಡೆನ್ಸ್‌ ಕಪ್‌ -2017ರ ಪಂದ್ಯಾವಳಿ ನಡೆಯಲಿವೆ. ಇದರ ಅಂಗವಾಗಿ ಶನಿವಾರ ಬೆಳಗ್ಗೆ ರೈಲಿನ ಮೂಲಕ ಶ್ರೀಲಂಕಾ ದೇಶದ ವರ್ಣಕುಲ ಸೂರ್ಯ ನೇತೃತ್ವದ ಕ್ರಿಕೆಟ್‌ ನೇತೃತ್ವದಲ್ಲಿ ಕೆಲವು ಶ್ರೀಲಂಕಾ ದೇಶದ 16 ವಯಸ್ಸಿನ
ಆಟಗಾರರನ್ನೊಳಗೊಂಡ ಕ್ರಿಕೆಟ್‌ ತಂಡ ಕಲಬುರಗಿಗೆ ಆಗಮಿಸಿತು. ಅವರನ್ನು ನಗರದ ರೈಲು ನಿಲ್ದಾಣದಿಂದ ಸರದಾರ ವಲ್ಲಭಭಾಯಿ ಪಟೇಲ್‌ ವೃತ್ತದ ವರೆಗೆ ಸ್ವಾಮಿನಾರಾಯಣ ಗುರುಕುಲ ಇಂಟರ್‌ನ್ಯಾಷನಲ್‌ ಸ್ಕೂಲ್‌ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿ ಸದಸ್ಯರು ಮೆರವಣಿಗೆ ಮಾಡುವ ಮೂಲಕ ಸ್ವಾಗತಿಸಿದರು. ಹಾಲಿ ಶ್ರೀಲಂಕಾ ತಂಡದ ಹಿರಿಯ ಆಟಗಾರ ಮಾಲಿಂಗಾ ಅವರಿಗೆ ಚಿಕ್ಕಂದಿನಲ್ಲಿ ಕೋಚ್‌ ಆಗಿ ಸೇವೆ ಸಲ್ಲಿಸಿದ ವರ್ಣಕುಲಸೂರ್ಯ ವಡುಮೆಸ್ತರಿಗೆ ದಿಲ್‌ವಿನ್‌ ವಾಲ್ಟರ್‌ ಜಾನ್‌ ಮೆಂಡಿಸ್‌ ಆಗಮಿಸಿದ್ದು ಪ್ರಮುಖ ಆಕರ್ಷಣೆ ಆಗಿತ್ತು. ಬಹುತೇಕ ಕಿರಿಯ ಕ್ರಿಕೆಟ್ಟಿಗರು ಖುಷಿ ಪಟ್ಟು ಫೋಟೋ ತೆಗೆಯಿಸಿಕೊಂಡರು. ಗುರುಕುಲ ಇಂಡಿಪೆಂಡೆನ್ಸ್‌ ಕಪ್‌ -2017ರ ಪಂದ್ಯವಾಳಿಗಾಗಿ ಶ್ರೀಲಂಕಾ ದೇಶದ ಮೋರಾಲಿಯನ್ಸ್‌ ನ್ಪೋರ್ಟ್‌ ಕ್ಲಬ್‌, ಕಲಬುರಗಿಯ ಶ್ರೀ ಸ್ವಾಮಿನಾರಾಯಣ ಗುರುಕುಲ ಇಂಟರ್‌ ನ್ಯಾಷನಲ್‌ ಸ್ಕೂಲ್‌, ಎಸ್‌.ಆರ್‌.ಮೆಹತಾ ಸ್ಕೂಲ್‌, ಎಬಿಪಿಎಸ್‌ ಮಳಖೇಡ ತಂಡಗಳು ಈ ಕಪ್‌ಗಾಗಿ ಕಾದಾಟಲಿವೆ. ಆ. 28ರಿಂದ 30ರ ವರೆಗೆ ಮೂರು ದಿನಗಳ ಕಾಲ ಸ್ವಾಮಿ ನಾರಾಯಣ ಗುರುಕುಲ ಶಾಲೆ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿವೆ. ನಾಲ್ಕು ತಂಡದ 16 ವಯಸ್ಸಿನ ಒಳಗಿನ ಆಟಗಾರರು ಆಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next