Advertisement

ಗುರುದೇವ್‌ ಲೋಕಾರ್ಪಣೆ

11:41 AM Jan 12, 2018 | |

ಬೆಂಗಳೂರು: ಆರ್ಟ್‌ ಆಫ್ ಲಿವಿಂಗ್‌ನ ಸಂಸ್ಥಾಪಕ ಶ್ರೀಶ್ರೀ ರವಿಶಂಕರ್‌ ಗುರೂಜಿಯವರ ಮೊಟ್ಟ ಮೊದಲ ಅಧಿಕೃತ ಜೀವನ ಚರಿತ್ರೆ “ಗುರುದೇವ್‌: ಆನ್‌ ದಿ ಪ್ಲೆಟಿವ್‌ ಆಫ್ ದಿ ಪೀಕ್‌’ ಗುರುವಾರ ಬಿಡುಗಡೆಗೊಂಡಿತು. ಸ್ವತಃ ಶ್ರೀಶ್ರೀ ರವಿಶಂಕರ್‌ ಗುರೂಜಿಯವರ ಕಿರಿಯ ಸಹೋದರಿ ಭಾನುಮತಿ ನರಸಿಂಹನ್‌ ಅವರು ಈ ಜೀವನ ಚರಿತ್ರೆ ಬರೆದಿದ್ದು ವೆಸ್ಟ್‌ಲ್ಯಾಂಡ್‌ ಪ್ರಕಾಶನ ಸಂಸ್ಥೆ ಇದನ್ನು ಪ್ರಕಟಿಸಿದೆ. 

Advertisement

ಕನಕಪುರ ರಸ್ತೆಯ ಆರ್ಟ್‌ ಆಫ್ ಲಿವಿಂಗ್‌ ಇಂಟರ್‌ನ್ಯಾಷನಲ್‌ ಸಂಸ್ಥೆಯಲ್ಲಿ ಗುರುವಾರ ಸಂಜೆ ನಡೆದ ಸಮಾರಂಭದಲ್ಲಿ ಗುರೂಜಿಯವರ ಜೀವನ ಚರಿತ್ರೆ ಬಿಡುಗಡೆಗೊಳಿಸಲಾಯಿತು. ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ, ಮಣಿಪಾಲ್‌ ಗ್ಲೋಬಲ್‌ ಎಜುಕೇಷನ್‌ ಸಂಸ್ಥೆಯ ಅಧ್ಯಕ್ಷ ಟಿ.ವಿ. ಮೋಹನದಾಸ್‌ ಪೈ, ಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಮತ್ತಿತರ ಗಣ್ಯರು ಸಾಕ್ಷಿಯಾದರು. 

ಈ ಸಂದರ್ಭದಲ್ಲಿ ಗುರೂಜಿಯವರ ಜೊತೆಗಿನ ತಮ್ಮ ನೆನಪುಗಳನ್ನು ಹಂಚಿಕೊಂಡ ಭಾನುಮತಿ ನರಸಿಂಹನ್‌, ಯಾವಾಗಲೂ ನಾನು ಗುರೂಜಿಯವರ ಅನುಕರಣೆ ಮಾಡುತ್ತಾ ಬಂದಿದ್ದೇನೆ. ಚಿಕ್ಕವಳಿದ್ದಾಗ ಗೊತ್ತಿಲ್ಲದೇ ಅನುಕರಣೆ ಮಾಡುತ್ತಿದ್ದೆ, ನಂತರ ಜ್ಞಾನದೊಂದಿಗೆ ಅವರನ್ನು ಅನುಸರಿಸಿದೆ. ಅವರ ಪ್ರತಿಯೊಂದು ಮಾತು ಹಾಗೂ ಪ್ರತಿಯೊಂದು ಹೆಜ್ಜೆ ನನಗೆ ಸದಾ ಮಾರ್ಗದರ್ಶನ ಮಾಡಿವೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next