Advertisement

Wonderla: 1 ಟಿಕೆಟ್‌ ಖರೀಸಿದ್ರೆ ಇನ್ನೊಂದು ಉಚಿತ

03:16 PM Sep 13, 2024 | Team Udayavani |

ಬೆಂಗಳೂರು: ಎಂಜಿನಿಯರ್ಸ್‌ ದಿನದ ಪ್ರಯುಕ್ತ ಸೆ.15 ರಂದು ಎಂಜಿನಿಯರಿಂಗ್‌ ಪದವಿ ಪಡೆದ ಎಲ್ಲ ರಿಗೂ ವಂಡರ್‌ಲಾದ ಒಂದು ಟಿಕೆಟ್‌ ಖರೀದಿಸಿದರೆ ಮತ್ತೂಂದು ಟಿಕೆಟ್‌ ಉಚಿತವಾಗಿ ಪಡೆಯುವ ಕೊಡುಗೆಯನ್ನು ವಂಡರ್‌ಲಾ ಘೋಷಿಸಿದೆ.

Advertisement

ಈ ಕೊಡುಗೆಯು ಸೆ.15ರಂದು ಲಭ್ಯವಿದ್ದು, ಇಂಜಿನಿಯರಿಂಗ್‌ ಪದವೀಧರರು, ಡಿಪ್ಲೋಮಾ ಹಾಗೂ ಐಟಿಐ ಓದಿರುವವರು ಈ ಕೊಡುಗೆಗೆ ಅರ್ಹರಾಗಿರುತ್ತಾರೆ. ಯಾವುದೇ ವರ್ಷದಲ್ಲಿ ಪದವಿ ಪಡೆದಿದ್ದರೂ ಈ ಕೊಡುಗೆ ಅನ್ವಯವಾಗಲಿದೆ.

ಇದರ ಲಾಭ ಪಡೆಯಲು ವಿದ್ಯಾರ್ಥಿಗಳಾಗಿದಲ್ಲಿ ಕಾಲೇಜಿನ ಐಡಿ ಕಾರ್ಡ್‌ ತೋರಿಸಬೇಕು ಅಥವಾ ಎಂಜಿನಿಯರಿಂಗ್‌ ಪದವಿ ಪ್ರಮಾಣ ಪತ್ರವನ್ನು ಪರಿಶೀಲನೆಗಾಗಿ ಪಾರ್ಕ್‌ನಲ್ಲಿ ಪ್ರಸ್ತುತ ಪಡಿಸಬೇಕು.

https://bookings.wonderla.com/ ವೆಬ್‌ಸೈಟ್‌ ಮೂಲಕ ಮುಂಗಡವಾಗಿ ಟಿಕೆಟ್‌ ಬುಕ್‌ ಮಾಡಬಹುದು ಅಥವಾ ಸ್ಥಳದಲ್ಲಿಯೇ ಕೌಂಟರ್‌ಗಳಿಂದ ಟಿಕೆಟ್‌ಗಳನ್ನು ಖರೀದಿ ಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next