Advertisement
ಅತ್ಯಂತ ಹೆಚ್ಚು ಚಿನ್ನಾಭರಣ ಖರೀದಿಸುವ ನಗರಗಳ ಪೈಕಿ ದೇಶದಲ್ಲೇ ಕರಾವಳಿ ಜಿಲ್ಲೆ ಮುಂಚೂಣಿಯಲ್ಲಿದೆ. ಆಭರಣ ಖರೀದಿಸುವುದು ಇಲ್ಲಿ ಪ್ರತಿಷ್ಠೆ, ಆರ್ಥಿಕ ಲೆಕ್ಕಾಚಾರ ಎಂಬ ಗುಣ ಲಕ್ಷಣಕ್ಕಿಂತಲೂ ಅದು ಭಾವನಾತ್ಮಕ ಬೆಸುಗೆಯ ಕೊಂಡಿ. ಶುಭ ಸಮಾರಂಭದಿಂದ ಆರಂಭವಾಗಿ ಶುಭ ದಿನದಂದು ಚಿನ್ನಾಭರಣ ಖರೀದಿಸುವುದು ಇಲ್ಲಿ ವಾಡಿಕೆ ಯಾಗಿದೆ. ಈ ಪೈಕಿ ದೀಪಾವಳಿಯ ಶುಭ ಸಂದರ್ಭದಲ್ಲಿ ಚಿನ್ನಾಭರಣ ಖರೀದಿ ಸಂಭ್ರಮಕ್ಕೆ ವಿಶೇಷ ಮಹತ್ವವಿದೆ. ದರ ಸ್ವಲ್ಪ ಏರಿದ್ದರೂ ಹಬ್ಬದ ಸಂಭ್ರಮ ಒಳಗೊಂಡ ದೀಪಾವಳಿ ಕಾಲಕ್ಕೆ ಚಿನ್ನಾಭರಣ ಖರೀದಿ ಸಂಭ್ರಮ ಬಹಳಷ್ಟು ಇರುತ್ತದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.
Related Articles
ಉಡುಪಿ ಜಿಲ್ಲೆಯ ಪ್ರಮುಖ ಚಿನ್ನಾಭರಣ ಮಳಿಗೆಗಳೂ ಹಬ್ಬದ ನಿಮಿತ್ತ ಹಲವು ಕೊಡುಗೆಗಳನ್ನು ಘೋಷಿಸಿವೆ. ಹೀಗಾಗಿ ಗ್ರಾಹಕರು ಹಬ್ಬದ ಸಂದರ್ಭದಲ್ಲಿಯೇ ಮುಂದಿನ ದಿನಗಳಲ್ಲಿ ನಡೆಯಲಿರುವ ಶುಭಕಾರ್ಯಗಳಿಗೆ ಬೇಕಿರುವ ಜುವೆಲರಿಯನ್ನು ಖರೀದಿಸುತ್ತಿದ್ದಾರೆ. ಹಬ್ಬಕ್ಕೆ ಅಗತ್ಯವಿರುವ ಚಿನ್ನಾಭರಣ ಗಳೊಂದಿಗೆ ಬೆಳ್ಳಿಯ ಪರಿಕರಗಳನ್ನು ಖರೀದಿಸುವ ಗ್ರಾಹಕರು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಚಿನ್ನಾಭರಣ ಮಳಿಗೆಗಳಲ್ಲೂ ಚಿನ್ನ ಬೆಳ್ಳಿ, ವಜ್ರ ಹೀಗೆ ಪ್ರತ್ಯೇಕ ವಿಭಾಗದ ಜತೆಗೆ ಒಂದೊಂದು ವಿಭಾಗದಲ್ಲಿ ವಿವಿಧ ವಿನ್ಯಾಸದ ಆಭರಣಗಳನ್ನು ಪ್ರತ್ಯೇಕವಾಗಿ ಜೋಡಿಸಿ, ಗ್ರಾಹಕರಿಗೆ ಆಭರಣಗಳನ್ನು ನೋಡಿ ಖರೀದಿಸಲು ಇನ್ನಷ್ಟು ಅನುಕೂಲ ಮಾಡಿಕೊಡುತ್ತಿದ್ದಾರೆ.
Advertisement
ನವೆಂಬರ್ ಸಹಿತ ಮುಂದಿನ ತಿಂಗಳುಗಳಲ್ಲಿ ಶುಭ ಮುಹೂರ್ತ ಹೆಚ್ಚಿರುವುದರಿಂದ ಅನೇಕರು ಹಬ್ಬದ ಶುಭ ಸಂದರ್ಭದಲ್ಲಿ ಚಿನ್ನಾಭರಣ ಖರೀದಿಸುತ್ತಾರೆ. ಗ್ರಾಹಕರ ಸ್ಪಂದನೆಯೂ ಚೆನ್ನಾಗಿದೆ ಎನ್ನುತ್ತಾರೆ ಗುಜ್ಜಾಡಿ ಸ್ವರ್ಣ ಜುವೆಲರ್ ಪ್ರೈ.ಲಿ.ನ ಪಾಲುದಾರ ರಾಮದಾಸ್ ನಾಯಕ್. ಅನೇಕರು ಹಬ್ಬದಂದೇ ಚಿನ್ನಾಭರಣ ಖರೀದಿಸುತ್ತಾರೆ. ವಿಶೇಷವಾಗಿ ಹಲವರು ಪೂಜೆಗೆ ಬೇಕಿರುವ ಬೆಳ್ಳಿ ಸಾಮಗ್ರಿಗಳನ್ನು ಹಬ್ಬದ ದಿನದಂದೇ ಖರೀದಿಸುತ್ತಾರೆ. ಹಬ್ಬ ಒಂದು ರೀತಿಯ ಖರೀದಿ ಸಂಭ್ರಮ ತರುತ್ತದೆ ಎಂದು ನೋವೆಲ್ಟಿ ಜುವೆಲರ್ನ ಮ್ಯಾನೇಜಿಂಗ್ ಪಾರ್ಟನರ್ ಜಿ. ಜಯ ಆಚಾರ್ಯ ತಿಳಿಸಿದರು.
ಹಬ್ಬದ ನಿಮಿತ್ತ ಚಿನ್ನಾಭರಣ ಖರೀದಿ ಪ್ರಕ್ರಿಯೆ ಚೆನ್ನಾಗಿ ನಡೆಯುತ್ತಿದೆ. ಗ್ರಾಹಕರ ಸ್ಪಂದನೆಯೂ ಉತ್ತಮವಾಗಿದೆ ಎನ್ನುತ್ತಾರೆ ಉಡುಪಿ ಆಭರಣ ಜುವೆಲರಿಯ ಅಕೌಂಟ್ ಮ್ಯಾನೇಜರ್ ವಿನೋದ್ ಕಾಮತ್.