Advertisement
ಆಗಿನ್ನು ಅಣ್ಣನಿಗೆ ಉಪನಯನವಾಗಿ ಕೆಲವೇ ದಿನಗಳಾಗಿ ದ್ದವು. ತನ್ನ ಸ್ನೇಹಿತರ ಜೊತೆಗೂಡಿ ಈಜು ಕಲಿಯುವುದಕ್ಕೆಂದು ಹೊರಟ. ಅಣ್ಣನ ಬಹುತೇಕ ಗೆಳೆಯರಿಗೆ ಅಷ್ಟಿಷ್ಟು ಈಜು ಬರುತ್ತಿತ್ತಂತೆ. ಗೆಳೆಯನೊಬ್ಬನ ಅಪ್ಪ ಎಲ್ಲರಿಗೂ ಈಜು ಕಲಿಸಲಿ ದ್ದರು. ಇವರಿಗೆಲ್ಲ ಅಭ್ಯಾಸ ಮಾಡಲು ಹಳ್ಳಿಯೊಂದರಲ್ಲಿನ ಬೃಹತ್ ಬಾವಿ ಸಿಕ್ಕಿತು. ಹೇಗೆ ಈಜಬೇಕು ಎನ್ನುವ ಬಗ್ಗೆ ಅಣ್ಣ ಆ ಹಿರಿಯರು ಕೊಟ್ಟ ಸಲಹೆಗಳನ್ನು ಕೇಳಿಸಿಕೊಂಡ, ಮರುಕ್ಷಣವೇ ಒಂದಿನಿತೂ ಹೆದರದೇ ಮುಖ ಮೊದಲು ಮಾಡಿ ಬಾವಿಯಲ್ಲಿ ಧುಮುಕಿಬಿಟ್ಟ. ಮೊದಲು, ತೇವ ಗಾಳಿ ಆತನ ಮುಖ ಸವರಿಹೋಯಿತು, ಗಳಿಗೆಯಲ್ಲೇ ಹಲವಾರು ಅಡಿ ಆಳದಲ್ಲಿದ್ದ. ಅಲ್ಲಿ ಗಾಳಿ-ಬೆಳಕಿನ ಸುಳಿವಿರಲಿಲ್ಲ. ಸುತ್ತಲೂ ಕೇವಲ ನೀರು. ಪ್ರಪಾತದಲ್ಲಿ ಆಳ-ಆಳವಾಗಿ ಜಾರುತ್ತಾ ಹೋದಂಥ ಭಾವ…ಇನ್ನೇನು ಪ್ರಜ್ಞೆ ತಪ್ಪಬೇಕು, ಅಷ್ಟರಲ್ಲೇ ಹಠಾತ್ತನೆ ಜನಿವಾರ ಎದೆಗೆ ಬಿಗಿಯಿತು, ಶಕ್ತಿಯೊಂದು ಆತನ ದೇಹವನ್ನು ಮೇಲಕ್ಕೆತ್ತಿತು. ಎಚ್ಚರಆದಾಗ ಅಣ್ಣ ನಮ್ಮ ಮನೆಯಲ್ಲಿದ್ದ. ಈಜು ಕಲಿಸಲು ಬಂದಿದ್ದ ಸ್ನೇಹಿತನ ತಂದೆ ಅದ್ಹೇಗೋ ಕಷ್ಟಪಟ್ಟು ಜನಿವಾರ ಹಿಡಿದು ಮೇಲಕ್ಕೆತ್ತಲು ಸಫಲರಾದರಂತೆ. ಅಂದರೆ ಅಣ್ಣ ಅಕ್ಷರಶಃ ಒಂದು ದಾರದಿಂದಾಗಿ ಬಚಾವಾಗಿದ್ದ! Related Articles
Advertisement
ಅಣ್ಣ ಅಜಮಾಸು ಎಂಟು ವರ್ಷದವನಿದ್ದಾಗ ಒಂದು ದಿನ ಶಾಲೆಯಿಂದ ಮನೆಗೆ ಬಂದವನೇ ವೇಗವಾಗಿ ಸ್ಟೋರ್ ರೂಮ್ ಹೊಕ್ಕ. ಕುತೂಹಲದಿಂದ ನಾನೂ ಹಿಂಬಾಲಿಸಿದೆ. ಆತ ಏನನ್ನೋ ಬಚ್ಚಿಡುತ್ತಿದ್ದ. ತಟಕ್ಕನೆ ಅಮ್ಮನಿಗೆ ನಾವೇನೋ ನಡೆಸಿದ್ದೇವೆ ಎನ್ನುವ ಸುಳಿವು ಸಿಕ್ಕಿತು, ನಮಗಂತೂ ಆಕೆಯಿಂದ ಏನನ್ನೂ ಮುಚ್ಚಿಡಲು ಸಾಧ್ಯವಿರಲಿಲ್ಲ! “ಇಬ್ಬರೂ ಏನು ನಡೆಸಿದ್ದೀರಿ?’ ಎಂದು ಅಮ್ಮ ಕೇಳಿದಳು. ಅಣ್ಣ ಮುಗ್ಧವಾಗಿ ಕಣ್ಣು ಬಿಡುತ್ತಾ ಗುಟ್ಟು ಮುಚ್ಚಿಡಲು ಪ್ರಯತ್ನಿಸಿದ. ಅಮ್ಮನಿಗೂ ಕುತೂಹಲ ವಿತ್ತಾದರೂ, ಮನೆಗೆಲಸದಲ್ಲಿ ಆಕೆ ಬ್ಯುಸಿ ಇದ್ದಳು. ಹಾಗಾಗೇ ತಾತ್ಕಾಲಿಕವಾಗಿ ಈ ವಿಷಯವನ್ನು ಹಾಗೇ ಬಿಟ್ಟಳು. ಸ್ವಲ್ಪ ಸಮಯದ ನಂತರ, ಅಣ್ಣನ ಸ್ಕೂಲ್‌ಬಾಗ್‌ನೊಳಗಿಂದ ಎರಡು ಪುಟ್ಟ ತುಪ್ಪಳದ ಕಿವಿಗಳು ಮತ್ತು ಮಿನುಗುವ ಕಣ್ಣುಗಳು ಹೊರಬಂದವು. ನಂತರ “ಮಿಯಾಂವ್’ ಎನ್ನುವ ಮೃದು ಧ್ವನಿ ಹೊರಡಿಸಿತು ಬ್ಯಾಗಿನಿಂದ ಇಣುಕಿದ ಆ ಚೋಟು ಬೆಕ್ಕಿನ ಮರಿ. ಪುಸ್ತಕಗಳ ನಡುವೆ ಕುಳಿತ ಈ ಮರಿ ಬಹಳ ಮುದ್ದಾಗಿ ಕಾಣಿಸುತ್ತಿತ್ತು. ಅದನ್ನು ನೋಡಿದ್ದೇ ಅಮ್ಮನ ಕಣ್ಣುಗಳು ಒಂದು ಕ್ಷಣಕ್ಕೆ ಮಿನುಗಿಬಿಟ್ಟವು. ಆದರೆ ಕೂಡಲೇ ಮುಖ ಗಂಟಿಕ್ಕಿದಳು. ಆ ಒಂದು ಕ್ಷಣವೇ ನಮಗೆ ಸಾಕಿತ್ತು. ಬೆಕ್ಕಿನ ಮರಿಯನ್ನು ಮನೆಯಲ್ಲೇ ಇಟ್ಟುಕೊಳ್ಳೋಣ ಎಂದು ಅದ್ಹೇಗೋ ಒಪ್ಪಿಸಿ ಬಿಟ್ಟೆವು. ಇಂಕ್ ಫಿಲ್ಲರ್‌ನ ಮೂಲಕ ಉತ್ಸಾಹದಿಂದ ಅದರ ಹೊಟ್ಟೆ ತುಂಬಿಸಿದೆವು. ಬಹುಶಃ ತುಸು ಹೆಚ್ಚೇ ತುಂಬಿಸೆ ದೆವೇನೋ! ಆ ಮರಿ ಮಲಗಿದೆಯೋ ಅಥವಾ ಎದ್ದಿದೆಯೋ ಎಂದು ಆಗಾಗ ನೋಡುತ್ತಲೇ ಇದ್ದೆವು.
ರಾತ್ರಿಯಾಯಿತು. ಮರಿಯನ್ನು ಒಂಟಿಯಾಗಿ ಬಿಟ್ಟು ಹೊರ ಬಂದ ಕೂಡಲೇ ಅದು ಕಿರುಚಲಾರಂಭಿಸುತ್ತಿತ್ತು! ಇದರಿಂದಾಗಿ ಎಲ್ಲರೂ ಆಗಾಗ ನಿದ್ದೆಯಿಂದೇಳಬೇಕಾಯಿತು. ಅಮ್ಮನಿಗೆ ಕಿರಿಕಿರಿ ಆಯಿತು. ನಿಜ, ಇಡೀ ದಿನ ಆ ಪರಿ ಕೆಲಸ ಮಾಡಿದ್ದಳಲ್ಲ, ಆಕೆಗೂ ನಿದ್ದೆಯ ಅಗತ್ಯವಿತ್ತು. ಮರುದಿನ ನಾವು ಮಾಡಿದ ಮೊದಲ ಕೆಲಸವೆಂದರೆ, ಆ ಮರಿಯ ತಾಯಿಯ ಹುಡುಕಾಟ. ಸುದೈವವಶಾತ್ ಅದು ಮನೆ ಸನಿಹದಲ್ಲೇ ಇತ್ತು. ಬಹುಶಃ ರಾತ್ರಿಯೆಲ್ಲ ಈ ಮರಿ “ಮಿಯಾಂವ್’ಗುಟ್ಟಿದ್ದು ತಾಯಿ ಬೆಕ್ಕಿಗೆ ಜಾಡು ಹುಡುಕಲು ಸಹಾಯ ಮಾಡಿರಬಹುದು. ಆದರೆ ಇಡೀ ದಿನ ನಾವು ಬೆಕ್ಕಿನ ಮರಿಯನ್ನು ಮಿಸ್ ಮಾಡಿ ಕೊಂಡೆವು. ನಾನಂತೂ ಬೆಕ್ಕಿನ ಮರಿಯಂತೆ “ಮಿಯಾಂವ್ ಮಿಯಾಂವ್’ ಎನ್ನುತ್ತಾ ಮನೆಯಲ್ಲಿ ಅಡ್ಡಾಡಿದೆ. ಸರಿಯಾಗಿ ಬೆಕ್ಕಿನ ಮರಿಯಂತೆ ವರ್ತಿಸಲು ಬರದ ನನ್ನನ್ನು ನೋಡಿ ಅಣ್ಣ ನಗುತ್ತಿದ್ದ! ಕಡೇಪಕ್ಷ ಆತನಿಗೆ ನಗು ತರಿಸಿದೆ ಎಂದು ನನಗೆ ಸಂತೋಷ ವಾಗಿತ್ತು. ಏಕೆಂದರೆ ಯಾವಾಗಲೂ ನನ್ನ ಮುಖದಲ್ಲಿ ಮಂದಹಾಸ ಮೂಡಿಸುತ್ತಿ ದ್ದವನೇ ಅಣ್ಣ.
ಅದು ನಮ್ಮ ಮೊದಲ ಬೆಕ್ಕಿನ ಕಥೆಯಾಯಿತು ಬಿಡಿ. ಆದರೆ ಈಗ ಆಶ್ರಮದಲ್ಲಿ ಅನೇಕ ಬೆಕ್ಕುಗಳಿವೆ, ಅದರಲ್ಲೂ “ಶಂಕರಿ’ಯ ಕುಟುಂಬದ 5 ತಲೆಮಾರು ನಮ್ಮ ಆಶ್ರಮದಲ್ಲೇ ಬದುಕು ಕಂಡಿವೆ. ಅವೆಲ್ಲವೂ ನೋಡುವುದಕ್ಕೆ ಒಂದೇ ರೀತಿಯಲ್ಲಿವೆ! ಗುರುದೇವ್ ಮಧ್ಯಾಹ್ನ ಊಟಕ್ಕೆ ಕುಳಿತರೆ ಸಾಕು ಶಂಕರಿ ಪ್ರತ್ಯಕ್ಷವಾಗುತ್ತಿತ್ತು. ಮಿಯಾಂವ್‌ಗಳ ಮೂಲಕ ತನ್ನ ಇರುವಿಕೆ ಯನ್ನು ಗಮನಕ್ಕೆ ತರುತ್ತಿತ್ತು. ಗುರುದೇವ ಅದಕ್ಕೆ ಮೊಸರನ್ನ ಕೊಡುತ್ತಿದ್ದರು, ಅದು ಸಂತೋಷದಿಂದ ಮೊಸರನ್ನ ಮುಗಿಸಿ, ಮಾಯವಾಗುತ್ತಿತ್ತು. ಎಷ್ಟು ವಿಚಿತ್ರವೆಂದರೆ, ಗುರುದೇವರು ಪ್ರವಾಸದಲ್ಲಿದ್ದಾಗ ಶಂಕರಿ ಕಾಣಿಸಿಕೊಳ್ಳುತ್ತಲೇ ಇರಲಿಲ್ಲ!
ಅಮ್ಮ ಹಾಡುತ್ತಿದ್ದಳು ಮತ್ತು ಚಿಕ್ಕ ವಯಸ್ಸಿನಿಂದಲೇ ವೀಣಾ ವಾದನ ಕರಗತವಾಗಿತ್ತು. ನಾನು ಮತ್ತು ಅಣ್ಣ ಅಮ್ಮನಿಂದ ವೀಣೆ ನುಡಿಸು ವುದು ಕಲಿತೆವು. ಕೆಲವೊಮ್ಮೆ, ಅಣ್ಣ ಸಿನೆಮಾ ಹಾಡು ನುಡಿಸಿಯೂ ನಮಗೆ ಸಿಕ್ಕಿಬಿದ್ದಿದ್ದಾನೆ! ಬಾಲಕ ರವಿ ಹೈಸ್ಕೂಲ್ ಓದಿದ್ದು ಸೇಂಟ್ ಜೋಸೆಫ್Õ ಕಾಲೇಜಿನಲ್ಲಿ. ಒಮ್ಮೆ ಶಾಲೆಯ ಪ್ರಿನ್ಸಿಪಾಲರು ಅಣ್ಣನನ್ನು ಕರೆದು ಅಂತರ್‌ಶಾಲಾ ಕರ್ನಾಟಕ ಸಂಗೀತ ಸ್ಪರ್ಧೆಯಲ್ಲಿ ಸೇ. ಜೋಸೆಫ್Õನಿಂದ ಯಾರೊ ಬ್ಬರೂ ಸ್ಪರ್ಧಿಸುತ್ತಿಲ್ಲ ಎಂದು ಹೇಳಿ ದರು. ಆಗ ಅಣ್ಣ , “”ಯಾಕೆ? ನಾನಿ ದ್ದೀನಲ್ಲ, ನಾನು ಸ್ಪರ್ಧಿ ಸುತ್ತೇನೆ” ಅಂದ. ವೀಣೆಯಲ್ಲಿ ಒಂದು ಹಾಡು ನುಡಿಸುವುದನ್ನು ಕಲಿತು ಆ ಸ್ಪರ್ಧೆ ಯಲ್ಲಿ ಪ್ರಥಮ ಬಹುಮಾನವನ್ನೂ ಗೆದ್ದ. ಪ್ರಿನ್ಸಿಪಾಲರಂತೂ ಬಹಳ ಖುಷಿಯಾಗಿದ್ದರು. ಅಣ್ಣ ಪ್ರೈಜ್ ಜೊತೆಗೆ ಮನೆಗೆ ಬಂದದ್ದು ನೋಡಿ ಅಮ್ಮನಿಗೆ ಬಹಳ ಆಶ್ಚರ್ಯವಾಗಿತ್ತು. ಅಮೃತ ವರ್ಷಿಣಿ ರಾಗದಲ್ಲಿ “ಸುಧಾಮಯಿ ಸುಧಾನಿಧಿ’ ಅನ್ನುವ ಹಾಡು ನುಡಿಸಿದ್ದ. ಕೇವಲ ಎರಡು ತಿಂಗಳು ಪ್ರಾಕ್ಟೀಸ್ ಮಾಡಿ ಪ್ರೈಜ್ ಪಡೆದಿದ್ದ. ಆದರೆ ಅದ್ಭುತವೆಂದರೆ, ಅಣ್ಣ ಅಮೃತ ವರ್ಷಿಣಿ ರಾಗ ನುಡಿಸಿದಾಗ ತುಂತುರು ಆರಂಭವಾಗುತ್ತಿತ್ತು!
ಅಣ್ಣನಿಗೆ ಕಾವ್ಯದಲ್ಲೂ ಆಳವಾದ ಆಸಕ್ತಿಯಿತ್ತು. 14 ವರ್ಷದ ವೇಳೆಗೆ ಕನ್ನಡದಲ್ಲಿ ಕೆಲವು ಕವಿತೆಗಳನ್ನು ಬರೆದ. ಆ ಕವಿತೆಗಳು “ಮಂಜಿನ ಹನಿ’ ಹೆಸರಲ್ಲಿ ಪ್ರಕಟವಾದವು. ಸೃಷ್ಟಿ ಮತ್ತು ಜೀವನ ರಹಸ್ಯಗಳ ಬಗ್ಗೆ ಈ ಪದ್ಯಗಳಲ್ಲಿ ಸ್ಪಷ್ಟ ಮತ್ತು ಆಳವಾದ ಚಿಂತನೆಯಿತ್ತು.
ಸಹೋದರನ ಜೊತೆಗೆ ನಾನು ಕಳೆದ ದಿನಗಳೆಲ್ಲವೂ ಅಮೂಲ್ಯವಾದುವು. ಕೊಳ, ಸರೋವರ ಅಥವಾ ಸಮುದ್ರಗಳು ಸೃಷ್ಟಿಯಾಗಿರುವುದು ನೀರಿನಿಂದಲೇ ಆದರೂ ಅವೆಲ್ಲ ಒಂದಕ್ಕಿಂತ ಒಂದು ಭಿನ್ನ. ಅಂತೆಯೇ ನಾವು ಬೆಳೆಯುತ್ತಾ ಹೋದಂತೆ ಎಲ್ಲವೂ ಮೊದಲಿನಂತೆಯೇ ಇದೆ ಎನಿಸುತ್ತದೆ, ಆದರೆ ಅನುಭವಿಗಳ ಪ್ರಜ್ಞೆಯ ಗುಣಮಟ್ಟದಲ್ಲಿ ಸಾಗರದಷ್ಟು ಬದಲಾವಣೆಯಾಗಿರುತ್ತದೆ. ನಾವು ಚಿಕ್ಕವರಿದ್ದಾಗ ಚೆನ್ನೈನಲ್ಲಿನ ಮರೀನಾ ಬೀಚ್‌ಗೆ ಹೋಗುತ್ತಿದ್ದೆವು. ಅಲ್ಲಿ “ತೆಂಗಾಯಿ ಮಾನಾYಯಿ ಪಟ್ಟಾನಿ ಚುಂಡಲ್'( ಕೊಬ್ಬರಿ, ಬೇಯಿಸಿದ ಬಟಾಣಿ ಮತ್ತು ಮಾವಿನ ಕಾಯಿ ಮಿಶ್ರಣ) ತಿನ್ನುತ್ತಿದ್ದೆವು. ನಮ್ಮ ಕಾಲುಗಳನ್ನು ಸಾಗರದ ಅಲೆಗಳಿಗೆ ಒಡ್ಡುತ್ತಿದ್ದೆವು. ಆದರೆ ಈಗ ನಾನು ಸಾಗರವನ್ನು ನೋಡುವ ರೀತಿ ಬದಲಾಗಿದೆ. ಈಗ ಕಡಲಲೆಗಳನ್ನು ಕಂಡು ಅದಮ್ಯ ಶಾಂತತೆಯನ್ನು ಅನುಭವಿಸುತ್ತೇನೆ. ಎಷ್ಟೊಂದು ಅಲೆಗಳು: ಚಿಕ್ಕ ಅಲೆಗಳು, ದೊಡ್ಡ ಅಲೆಗಳು, ಮೃದು ಅಲೆಗಳು, ಆಕ್ರಾಮಕ ಅಲೆಗಳು…ಇವೆಲ್ಲವೂ ಥೇಟ್ ಮನಸ್ಸಿನಲ್ಲಿ ಏರಿಳಿಯುವ ಭಾವನೆಗಳ ಹಾಗೆ. ಕೆಲವೊಮ್ಮೆ ಅವು ಉಬ್ಬರದಲೆಗಳಾಗಿ ಮುಂದೆ ಬರುತ್ತವೆ, ಮತ್ತೆ ವಾಪಸ್ ಹೊರಡುತ್ತವೆ. ಇದೂ ಧ್ಯಾನದಂತೆಯೇ- ಮೂಲದತ್ತ ಹಿಂದಿರು ಗುವುದು. ಗುರುಗಳು ನನಗೆ ಕೊಟ್ಟಿರುವ ಜೀವನ ವಾದರೂ ಎಂಥದ್ದು! ನನ್ನ ಅದೃಷ್ಟವನ್ನು ಕಂಡು ನಾನೇ ಬೆರಗಾಗುತ್ತೇನೆ. ಗುರುದೇವ ಭವ್ಯವಾದ ಸಮುದ್ರವಿದ್ದಂತೆ. ನೋಡುವುದಕ್ಕೆ ಶಾಂತ, ಆದರೂ ಚೈತನ್ಯಭರಿತ.