Advertisement

ಫೋರ್ಟ್‌ ವಿದ್ಯಾದಾಯಿನಿ ಸಭಾ: ಗುರು ಪೂರ್ಣಿಮೆ ಆಚರಣೆ

12:58 PM Jul 25, 2021 | Team Udayavani |

ಮುಂಬಯಿ: ಶತಮಾ ನೋತ್ಸವವನ್ನು ಆಚರಿಸಿದ ವಿದ್ಯಾದಾಯಿನಿ ಸಭಾ ಫೋರ್ಟ್‌ ಮುಂಬಯಿ ವತಿಯಿಂದ ಜು. 24ರಂದು ಬೆಳಗ್ಗೆ ಗುರು ಪೂರ್ಣಿಮೆ ಉತ್ಸವವನ್ನು ಸಂಸ್ಥೆಯ ಕಚೇರಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾಂಕೇತಿಕವಾಗಿ ಕೊರೊನಾ ಮಾರ್ಗಸೂಚಿಗಳ ಪಾಲನೆಯೊಂದಿಗೆ ಆಚರಿಸಲಾಯಿತು.

Advertisement

ವಿದ್ಯಾದಾಯಿನಿ ಭಜನ ಸಮಿತಿಯ ಅಧ್ಯಕ್ಷ ಸದಾನಂದ ಪೂಜಾರಿಯವರ ನೇತೃತ್ವದಲ್ಲಿ ಸದಸ್ಯರಿಂದ ಭಜನೆ, ಪುರೋಹಿತ ಹೆಜಮಾಡಿ ಹರೀಶ್‌ ಶಾಂತಿಯವರಿಂದ ಸದ್ಗುರು ಶ್ರೀ ನಾರಾಯಣ ಗುರು ಮಂಟಪದ ಶೃಂಗಾರ ನಡೆದು ಗುರು ಪೂಜೆ ಹಾಗೂ ಮಹಾ ಮಂಗಳಾರತಿಯು ಸಂಸ್ಥೆಯ ಅಧ್ಯಕ್ಷ ಪುರುಷೋತ್ತಮ ಎಸ್‌. ಕೋಟ್ಯಾನ್‌ ಅವರ ಉಪಸ್ಥಿತಿಯಲ್ಲಿ ನಡೆಯಿತು. ಪೂಜಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸರ್ವರನ್ನೂ ಅಧ್ಯಕ್ಷರು ಸ್ವಾಗತಿಸಿದರು.

ಕೆನರಾ ವಿದ್ಯಾದಾಯಿನಿ ರಾತ್ರಿ ಶಾಲೆಯ ಶಾಲಾಧಿಕಾರಿ ಡಾ| ಪ್ರಕಾಶ್‌ ಮೂಡಬಿದ್ರೆ, ಸಂಸ್ಥೆಯ ಜತೆ ಕಾರ್ಯದರ್ಶಿ ಶರತ್‌ ಪೂಜಾರಿ, ವಿದ್ಯಾದಾಯಿನಿ  ಸೇವಾದಳದ ಜಿಒಸಿ ಸುರೇಶ್‌ ಪೂಜಾರಿ, ಸತೀಶ್‌ ಶೆಟ್ಟಿ, ಜಗನ್ನಾಥ್‌ ಅಮೀನ್‌, ಪ್ರಶಾಂತ್‌ ಕರ್ಕೇರ, ಉಮೇಶ್‌ ಪೂಜಾರಿ, ಸಂತೋಷ್‌ ಪೂಜಾರಿ, ಅಶೋಕ್‌ ಪೂಜಾರಿ, ಗಣೇಶ್‌ ಪೂಜಾರಿ, ದಿನೇಶ್‌ ಪೂಜಾರಿ, ರಾಜು ಪೂಜಾರಿ,ರಾಜೇಶ್‌ ಸುವರ್ಣ, ಆಕಾಶ್‌ ಸುವರ್ಣ, ಜಯ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಪ್ರಸಾದ ವಿತರಣೆ ನಡೆಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next