Advertisement
ಆಧ್ಯಾತ್ಮಿಕ ಜೀವನದಲ್ಲಿ ತೊಡಗದಿರುವುದರಿಂದ ಜೀವನದಲ್ಲಿ ಮಾನಸಿಕ ನೆಮ್ಮದಿ ಕಾಣದೆ ಕೆಲವರು ಆತ್ಮಹತ್ಯೆಯಂತಹ ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ. ನಮ್ಮಲ್ಲಿ ಆಧ್ಯಾತ್ಮಿಕತೆ ವಿರುದ್ಧ ಮಾತನಾಡುವ ಸ್ವಾತಂತ್ರ್ಯವನ್ನು ಹೆಚ್ಚಾಗಿಯೇ ನೀಡಲಾಗಿದ್ದು, ಬುದ್ಧಿಜೀವಿಗಳು ಹೇಳಿಕೊಳ್ಳುವ ಕೆಲವರು ತಮ್ಮ ಸ್ವಂತ ಧರ್ಮವನ್ನೇ ಹೀಯಾಳಿಸಿ ಇತರ ಧರ್ಮಗಳನ್ನು ವೈಭವೀಕರಿಸುತ್ತಿದ್ದಾರೆ. ತಮ್ಮ ಕಾಲಿಗೆ ತಾವೇ ಕೊಡಲಿ ಏಟು ಹಾಕುತ್ತಿದ್ದಾರೆ. ನಮ್ಮ ಧರ್ಮದತ್ತ ನಾವೇ ಪ್ರಾಮುಖ್ಯ ನೀಡದಿದ್ದಲ್ಲಿ ಹಿಂದೆ ಆಳಲು ಬಂದವರಿಗೆ ಮುಂದಕ್ಕೂ ಆಳುವಂತ ಪರಿಸ್ಥಿತಿ ನಿರ್ಮಾಣ ಮಾಡಿಸಿದಂತಾಗುತ್ತದೆ ಎಂದರು. ಎಲ್ಲ ಜಾತಿ, ಧರ್ಮ, ಕಟ್ಟು ಪಾಡುಗಳನ್ನು ಮೀರಿ ಹಿಂದೂಗಳು ಒಗ್ಗೂಡಬೇಕು. ಹಿಂದೂ ಧರ್ಮದ ಆಚಾರ-ವಿಚಾರಗಳನ್ನು ತಿಳಿಸಿ ಮುಂದಿನ ಪೀಳಿಗೆಯನ್ನು ಸಿದ್ಧಪಡಿಸಬೇಕು ಹಾಗೂ ಅವರಿಗೆ ಧರ್ಮದ ಬಗ್ಗೆ ತಿಳಿಸಬೇಕು ಎಂದರು. ಬಳಿಕ ‘ರೋಗ ನಿವಾರಣೆಗಾಗಿ ಖಾಲಿ ಪೆಟ್ಟಿಗೆಯ ಉಪಾಯ’ ಪುಸ್ತಕವನ್ನು ಬಿಡುಗಡೆಗೊಳಿಸಿದರು.
ಉಮೇಶ್ ಶೆಣೈ ಅವರನ್ನು ಮಂಗಳೂರು ಬಿಜೈ ವನದುರ್ಗಾ ದೇವಸ್ಥಾನದ ಧರ್ಮದರ್ಶಿಗಳಾದ ರಾಜೇಶ್ ಹಾಗೂ ರಾಧಾಪ್ರಭು ಅವರನ್ನು ಸನಾತನ ಸಂಸ್ಥೆಯ ನೇತ್ರಾವತಿ ಅವರು ಸಮ್ಮಾನಿಸಿದರು. ಸನಾತನ ಸಂಸ್ಥೆಯ ಧರ್ಮಪ್ರಸಾರ ಸೇವಕಿ ಮಂಜುಳಾಗೌಡ ಕಾರ್ಯಕ್ರಮದ ವಿವರ ನೀಡಿದರು. ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.