ಪುಣೆ: ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಪಿಂಪ್ರಿ- ಚಿಂಚ್ವಾಡ್ ಕನ್ನಡ ಸಂಘಟನೆಯ ವತಿಯಿಂದ ಸರಳವಾಗಿ ಪುಣೆಯ ಬೋಸರಿ ಯಲ್ಲಿ ಆಚರಿಸಲಾಯಿತು.ಕೊರೊನಾ ಲಾಕ್‌ಡೌನ್ ನಿಮಿತ್ತ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡ ಹಿನ್ನೆಲೆ ಬಸವ ಸಮಿತಿಯ ಕೆಲವು ಸಂಚಾಲಕರು ಹಾಗೂ ಸಂಘಟಕರು ಜಂಟಿಯಾಗಿ ಸಂಜಯ್ ರೂಡಗಿ ಅವರ ಬಸವೇಶ್ವರ ಖಾನಾವಳಿಯಲ್ಲಿ ಬಸವೇಶ್ವರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಸವೇಶ್ವರ ಜಯಂತಿ ನಿಮಿತ್ತ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಲ್ಲಿ ಉಪಹಾರ ಮತ್ತು ಹಣ್ಣು ಹಂಪಲು ಹಂಚಲಾಯಿತು. ಈ ಸಂದರ್ಭ ಬಸವ ದಳದ ಉಪಾಧ್ಯಕ್ಷ ಸಿದ್ದರಾಮ ಎಂ. ದುತ್ತರಗಾವ್, ಕನ್ನಡ ಸಂಘಟನೆಯ ಧ್ರುವ ಕುಲಕರ್ಣಿ, ಗಂಗಾಧರ ಬೆನ್ನೂರ್, ಸುಧೀರ್ ಕಲಶೆಟ್ಟಿ, ಸಂಜಯ್ ರೋಡಗಿ, ರಾಜ್‌ಕುಮಾರ್ ಕಲಶೆಟ್ಟಿ, ಸಂತೋಷ್ ಮುರಳೀಧರ ಮತ್ತು ಕನ್ನಡ ಬಾಂಧವರು ಉಪಸ್ಥಿತರಿದ್ದರು.
ಮಾನವೀಯತೆಯ ಸೇವೆಸೋಲಾಪುರದ ರೈತನೋರ್ವ ತಾನು ಬೆಳೆದ 30 ಟನ್ ಕಲ್ಲಂಗಡಿ ಹಾಗೂ 2 ಟನ್ ಸೌತೆ ಕಾಯಿ ಕೊರೊನಾ ಹಿನ್ನೆಲೆ ಬೇಡಿಕೆ ಇಲ್ಲದೆ ಸಂಕಷ್ಟದಲ್ಲಿದ್ದು, ಸಹಾಯ ಮಾಡುವಂತೆ ವಾಟ್ಸ್ ಆ್ಯಪ್ ಗ್ರೂಪ್‌ನಲ್ಲಿ ಕೇಳಿಕೊಂಡಿದ್ದರು. ಇದನ್ನು ಕಂಡ ಪಿಂಪ್ರಿ-ಚಿಂಚಾÌಡ್ ಕನ್ನಡ ಸಂಘಟನೆ ಸಮಾಜದ ಹಿರಿಯರು ಮತ್ತು ಬಸವ ಭಕ್ತರಾದ ಶಿವಲಿಂಗ ಧವಲೇಶ್ವರ ಅವರ ಮುಂದಾಳತ್ವದಲ್ಲಿ ಮಲ್ಲಿನಾಥ ಕಲಶೆಟ್ಟಿ ಅವರ ಜತೆ ಆಚರಣೆಯ ಬಗ್ಗೆ ಚರ್ಚಿಸಿದ ಬಳಿಕ ರೈತನಿಂದ ಸುಮಾರು 10 ಟನ್ ಕಲ್ಲಂಗಡಿ ಮತ್ತು 2 ಟನ್ ಸೌತೆ ಕಾಯಿ ಖರೀದಿಸಿ ಪಿಂಪ್ರಿ-ಚಿಂಚಾÌಡ್ ಮಹಾನಗರ ಪಾಲಿಕೆಯ ಸ್ವತ್ಛತಾ ಸಿಬಂದಿ, ಅನಾಥಾಶ್ರಮ, ಕೋವೀಡ್ ಸೆಂಟರ್ ಆಶಾ ಕಾರ್ಯಕರ್ತರಿಗೆ, ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಹಂಚುವ ಮೂಲಕ ಬಸವ ಜಯಂತಿಯನ್ನು ಆಚರಿಸಲಾಯಿತು.
ಈ ಜನಸೇವಾ ಕಾರ್ಯಕ್ಕೆ ಹಲವಾರು ಶರಣರು ಮುಂದೆ ಬಂದು ಸಹಕಾರ ನೀಡಿ¨ªಾರೆ. ಮಲ್ಲಿನಾಥ ಕಲಶೆಟ್ಟಿ, ಲಕ್ಷ್ಮೀಕಾಂತ ರೋಕಡೆ, ವಿಷ್ಣು ವಿದ್ಯಾದರ್, ಶಿವು ಪಾಟೀಲ್, ಶಿವಾನಂದ ಗೌಡರ ,ಮಲ್ಲಪ್ಪ ಬಿ.ಕೆ., ಬಸವರಾಜ್ ಕಣಜೆ, ಚಂದ್ರಶೇಖರ್ ಹುಣಿಸಲ…, ಶಿವಣ್ಣ ನರೋನೆ, ಸಿದ್ದೇಶ್ವರ ನೆಂದನೆ, ಶ್ರೀ ದೇಶು¾ಖ್, ಮಹಾದೇವ್ ಶೀನಗರೇ ಮತ್ತು ಸಂತ ಸಾಯಿ ಶಾಲೆಯ ಸಿಬಂದಿ ಹಾಗೂ ಬಸವ ಭಕ್ತರು ಬಸವ ಜಯಂತಿ ಆಚರಿಸಲು ಸಹಕರಿಸಿದರು.
ವರದಿ: ಹರೀಶ್ ಮೂಡಬಿದ್ರಿ