Advertisement

ಚಂದ್ರಯಾನ-2 ಕಂಟ್ರೋಲ್‌ ಯೂನಿಟ್‌ ಅಭಿವೃದ್ಧಿಪಡಿಸಿದ ಗುರ್ರಪ್ಪ

11:12 PM Sep 08, 2019 | Team Udayavani |

ಚಿಕ್ಕಬಳ್ಳಾಪುರ: ಚಂದ್ರಯಾನ-2 ಸಾಧನೆ ಬಳಿಕ ವಿಶ್ವದ ಗಮನ ಸೆಳೆಯುತ್ತಿರುವ ಇಸ್ರೋ ಟೀಮ್‌ನಲ್ಲಿ ಚಿಕ್ಕಬಳ್ಳಾಪುರದ ವಿಜ್ಞಾನಿಯೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಅತಿ ಹಿಂದುಳಿದ ತಾಲೂಕಾದ ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿಯ ಗುರ್ರಪ್ಪ, ಹಲವು ವರ್ಷಗಳಿಂದ ಇಸ್ರೋದಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಂದ್ರಯಾನ-2ರ ವಿಕ್ರಮ ಲ್ಯಾಂಡರ್‌ ವೇಳೆ ಇಸ್ರೋ ನಿಯಂತ್ರಣ ಘಟಕಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರ ಅಕ್ಕಪಕ್ಕ ಗುರ್ರಪ್ಪ, ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆದರು.

Advertisement

ಇಸ್ರೋ ಸಂಸ್ಥೆಯಲ್ಲಿ ಟೀಮ್‌ ಆಪರೇಟರ್‌ ಆಗಿ ಇವರು ಕಾರ್ಯ ನಿರ್ವ ಹಿಸುತ್ತಿದ್ದು, ಚಂದ್ರಯಾನದಲ್ಲಿ ಆರ್ಬಿಟರ್‌ ಕಳುಹಿಸುವ ಚಿತ್ರಗಳನ್ನು ಫೋಕಸ್‌ ಮಾಡಿ ಆ ಚಿತ್ರಗಳನ್ನು ವಿಜ್ಞಾನಿಗಳಿಗೆ ನೀಡುವ ಕೆಲಸ ಮಾಡುತ್ತಿದ್ದಾರೆ. ಇಸ್ರೋ ನಿಯಂತ್ರಣ ಘಟಕದಲ್ಲಿರುವ ಕಂಟ್ರೋಲ್‌ ಯೂನಿಟ್‌ ಮ್ಯಾನೇಜರ್‌ ಆಗಿರುವ ಇವರು, ಸದ್ಯ ಚಂದ್ರಯಾನ-2ರ ಕಂಟ್ರೋಲ್‌ ಯೂನಿಟ್‌ನ್ನು ಕೂಡ ಅಭಿವೃದ್ಧಿಪಡಿಸಿದ್ದಾರೆ.

ಗುರ್ರಪ್ಪ, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಜಂಗಾಲಹಳ್ಳಿ ಹಾಗೂ ಪೋಲಂಪಲ್ಲಿ ಗ್ರಾಮದಲ್ಲಿ ಮುಗಿಸಿ, ಪ್ರೌಢಶಿಕ್ಷಣವನ್ನು ಗುಡಿಬಂಡೆಯಲ್ಲಿ ಮುಗಿಸಿದ್ದಾರೆ. ನಂತರ ಬೆಂಗಳೂರಿನಲ್ಲಿ ಡಿಪ್ಲೋಮಾ ಕೋರ್ಸ್‌ ಓದಿ, ಬಳಿಕ ಬೆಂಗಳೂರಿನ ಬಿಇಎಂಎಸ್‌ ಕಾಲೇಜಿನಲ್ಲಿ ಇಂಜಿನಿಯರಿಂಗ್‌ ಮುಗಿಸಿ ಕಳೆದ 28 ವರ್ಷಗಳಿಂದ ಇಸ್ರೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೊಂದಿಗೆ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಡಿ.ಪಾಳ್ಯದ ಆರ್‌.ಶ್ರೀನಾಥ್‌ ಎಂಬುವರು ಸಹ ಕೆಲಸ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next