ಯೋಂಟ್‌ವಿಲೇ, ಕ್ಯಾಲಿಫೋರ್ನಿಯ : ಇಲ್ಲಿನ ಹಿರಿಯರ ಆಸರೆ ಗೃಹದಲ್ಲಿ ಮೂವರು ಮಹಿಳೆಯರು ಮತ್ತು ಅವರನ್ನು ಒತ್ತೆ ಸೆರೆಯಲ್ಲಿ ಇರಿಸಿಕೊಂಡಿದ್ದ ಓರ್ವ ಬಂದೂಕುಧಾರಿಯ ಶವ ನಿನ್ನೆ ಶುಕ್ರವಾರ ತಡ ರಾತ್ರಿ ಪತ್ತೆಯಾಗಿದೆ.
ಇದರೊಂದಿಗೆ ಪೊಲೀಸರು ಮತ್ತು ಒತ್ತೆಕೋರನ ನಡುವಿನ ಮುಖಾಮುಖೀಯು ದುರಂತದಲ್ಲಿ ಕೊನೆಗೊಂಡಂತಾಗಿದೆ.
ಮೃತ ಬಂದೂಕುಧಾರಿಯು ಪಾತ್‌ವೇ ಹೋಮ್ ನ ಓರ್ವ ಸದಸ್ಯನಾಗಿದ್ದು ಆತನು ಒತ್ತೆ ಸೆರೆಯಲ್ಲಿ ಇರಿಸಿಕೊಂಡಿದ್ದ ಮೂವರು ಮಹಿಳೆಯರು ಈ ಹಿರಿಯರ ಆಸರೆ ಗೃಹದ ಸಿಬಂದಿಗಳಾಗಿದ್ದಾರೆ ಎಂದು ಸ್ಟೇಟ್ ಸೆನೆಟರ್ ಬಿಲ್ ಡಾಡ್ ತಿಳಿಸಿದ್ದಾರೆ.
ಒತ್ತೆಯಾಳುಗಳ ವಿಮೋಚನೆಗಾಗಿ ನಡೆದಿದ್ದ ಕಾರ್ಯಾಚರಣೆಯಲ್ಲಿ ಮೂವರು ಮಹಿಳೆಯರು ಮತ್ತು ಒತ್ತೆಕೋರ ಮೃತಪಟ್ಟಿರುವುದು ಅನಂತರ ಗೊತ್ತಾಯಿತು.
ಕ್ಯಾಲಿಫೋರ್ನಿಯದ ಹಿರಿಯರ ಆಸರೆ ಗೃಹದಲ್ಲಿ ಸುಮಾರು 1,000 ವಿಕಲಾಂಗರು ಇದ್ದಾರೆ. ಇವರಲ್ಲಿ ಸೇನೆಯ ಹಿರಿಯರು ಕೂಡ ಸೇರಿದ್ದಾರೆ.