Advertisement
ಜತೆಗೆ ಇನ್ನೊಂದು ಈಕೆಯ ಹೆಗ್ಗಳಿಕೆಯೆಂದರೆ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಏಕೈಕ ಮಹಿಳೆ ಎಂಬುದು.
Related Articles
Advertisement
ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾದ ಈ ಸಿನೆಮಾದಲ್ಲಿ ಜಾನ್ವಿ ಕಪೂರ್ ಮುಖ್ಯ ಪಾತ್ರ ವಹಿಸಿದರೆ, ಪಂಕಜ್ ತ್ರಿಪತಿ ಮತ್ತು ಅಂಗದ್ ಬೇಡಿ ಪೋಷಕ ಪಾತ್ರವನ್ನು ನಿರ್ವಹಿಸಿದ್ದಾರೆ. ಶರಣ್ ಶರ್ಮಾ ಈ ಸಿನೆಮಾಕ್ಕೆ ನಿರ್ದೇಶನ ನೀಡಿದ್ದಾರೆ.
ಮಿಲಿಟರಿ ಕುಟುಂಬದಲ್ಲೇ ಜನಿಸಿದ ಸೆಕ್ಸೇನಾ ಹುಟ್ಟಿದ್ದು 1975ರಲ್ಲಿ. ಬಾಲ್ಯದಿಂದಲೂ ವಿಮಾನ ಹಾರಿಸುವುದನ್ನೇ ಕನಸು ಕಾಣುತ್ತಿದ್ದ ಗುಂಜನ್‌ಗೆ ವಿಮಾನ ಯಾನ ಸಂಸ್ಥೆಯಲ್ಲಿ ಕಲಿಕೆಗೆ ಅವಕಾಶ ಸಿಕ್ಕಿರುವುದಿಲ್ಲ. ಆದರೆ ಈಕೆಯ ತಂದೆ ಈಕೆಗೆ ಯುದ್ಧ ವಿಮಾನದಲ್ಲಿ ಅವಕಾಶ ಸಿಗಬಹುದೆಂದು ಹುರಿದುಂಬಿಸುತ್ತಾರೆ.
ಹಾರೋ ಆಸೆ ಇದ್ದವಳಿಗೆ ವಿಮಾನವಾದರೇನು? ಯುದ್ಧ ವಿಮಾನವಾದರೇನು? ಹೇಗೋ ಯುದ್ಧ ವಿಮಾನ ಪೈಲೆಟ್ ತರಬೇತಿ ಶಾಲೆಗೆ ಸೇರ್ಪಡೆಯಾಗುತ್ತಾಳೆ. ಅಲ್ಲಿ ಎಲ್ಲ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದರೂ ತೂಕ ಜಾಸ್ತಿ, ಎತ್ತರ ಕಡಿಮೆ ಇದ್ದುದರಿಂದ ಅವಳನ್ನು ಅನರ್ಹಗೊಳಿಸಲಾಗುತ್ತದೆ. ತೂಕವನ್ನಾದರೂ ಇಳಿಸಬಹುದು…ಎತ್ತರವನ್ನು ಹೆಚ್ಚಿಸುವುದಾದರೂ ಹೇಗೆ? ನಾನು ವಿಮಾನ ಹಾರಿಸುವುದು ಕನಸಿನ ಮಾತೇ ಎಂದು ಆ ಆಸೆಯನ್ನು ತ್ಯಜಿಸಿ, ಮದುವೆಯಾಗುವ ತೀರ್ಮಾಣಕ್ಕೆ ಬಂದಿರುತ್ತಾಳೆ.
ಆದರೆ ತಂದೆ ಮತ್ತೆ ಹುರಿದುಂಬಿಸಿ ತೂಕ ಇಳಿಸಲು ಶ್ರಮ ಪಡುವಂತೆ ಮಾಡುತ್ತಾರೆ. ತೂಕ ಕಡಿಮೆಯಾಗುತ್ತದೆ, ಆದರೂ ಈಕೆ ಭಾರತೀಯ ವಾಯುಸೇನಾ ಪೈಲೆಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾಳೆ. ದೇವರು ಈಕೆಗೆ ವಿಮಾನ ಹಾರಿಸಲು ಸಾಮರ್ಥ್ಯವಿರುವಂತೆಯೇ ಹುಟ್ಟಿಸಿದ್ದ. ಯಾಕೆ ಗೊತ್ತೆ? ಈಕೆಯ ಕೈಗಳು ಆ ದೇಹದ ಎತ್ತರಕ್ಕೆ ಹೋಲಿಸಿದರೆ ಒಂದೂವರೆ ಇಂಚು ಉದ್ದವಾಗಿತ್ತು. ಇದರಿಂದ ಒಂದೂವರೆ ಇಂಚು ಕಡಿಮೆ ಎತ್ತರವಿದ್ದರೂ ವಿಮಾನ ಹಾರಿಸುವ ಸಾಮರ್ಥ್ಯ ಈಕೆಗೆ ಲಭ್ಯವಾಗಿತ್ತು.
ಕಾರ್ಗಿಲ್ ಯುದ್ಧದ ಕಾಲಘಟ್ಟವದು. ಯುದ್ಧ ವಿಮಾನದಲ್ಲಿ ಪೈಲೆಟ್ ಆಗಿ ಮಹಿಳೆಯರಿನ್ನೂ ಆ ಕ್ಷೇತ್ರಕ್ಕೆ ಕಾಲಿಟ್ಟಿರಲಿಲ್ಲ. ಯುದ್ಧ ವಿಮಾನ ಮುನ್ನಡೆಸಿದ ಮೊದಲ ಮಹಿಳೆ ಎಂಬ ಖ್ಯಾತಿಯನ್ನು ಕಾರ್ಗಿಲ್ ಯುದ್ಧ ಗುಂಜನ್‌ಗೆ ಒದಗಿತ್ತು. ಸಕ್ಸೇನಾ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸುವಾಗ ಆಕೆಯ ವಯಸ್ಸು 24. ಕಾರ್ಗಿಲ್ ಯುದ್ಧದ ಸಮಯದಲ್ಲಿ ಆಕೆಯ ಪ್ರಮುಖ ಕೆಲಸವೆಂದರೆ ಗಾಯಗೊಂಡ ಸೈನಿಕರನ್ನು ಯುದ್ಧಭೂಮಿಯಿಂದ ಸ್ಥಳಾಂತರಿಸುವುದು. ಅಲ್ಲಿದ್ದ 10 ಪೈಲೆಟ್‌ಗಳಲ್ಲಿ ಸಕ್ಸೇನಾ ಒಬ್ಬಳೇ ಮಹಿಳಾ ಪೈಲೆಟ್ ಆಗಿದ್ದಳು. ಸಕ್ಸೇನಾ ತನ್ನ ಪೈಲೆಟ್ ವೃತ್ತಿಯನ್ನು 7 ವರ್ಷಗಳ ಅನುಭವಗಳೊಂದಿಗೆ 2004ರಲ್ಲಿ ಕೊನೆಗೊಳಿಸುತ್ತಾಳೆ.
ರಚ್ನಾ ಬಿಷಟ್ ರಾವತ್ ತನ್ನ “ಕಾರ್ಗಿಲ್ ಅನ್‌ಟೋಲ್ಡ್ ಸ್ಟೋರೀಸ್ ಫ್ರಮ್ ಮ್ ದ ವಾರ್’ ಎಂಬ ಪುಸ್ತಕದ ಒಂದು ಚಾಪ್ಟರ್‌ನಲ್ಲಿ ಗುಂಜನ್ ಸಕ್ಸೇನಾಳ ಕುರಿತು ಬರೆಯುತ್ತಾರೆ.
ಗುಂಜನ್ ಸಕ್ಸೇನಾ; ದ ಕಾರ್ಗಿಲ್ ಗರ್ಲ್ ಸಿನೆಮಾ ತೆರೆಕಂಡ ಬಳಿಕ ಅವರ ಸಾಧನೆಯ ಬಗ್ಗೆ ಅನುಮಾನಗಳು ಎದ್ದಿದ್ದವು. ಅದಕ್ಕೆ ಅವಳು ಖಾಸಗಿ ವಾಹಿನಿಯೊಂದರಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ.
“ನಾನು ತುಂಬಾ ಅದೃಷ್ಟವಂತೆ. ನನ್ನ ಹೆಸರಿನೊಂದಿಗೆ ಹಲವು ಮೊದಲುಗಳು ಸೇರಿಕೊಂಡಿವೆ. ಅದರಲ್ಲಿ ಕೆಲವು ಮೊದಲಿಗೆ ಬೆಸಿಕ್‌ಟ್ರೈನಿಂಗ್ ಮತ್ತು ಹೆಲಿಕಾಪ್ಟರ್ ಟ್ರೈನಿಂಗ್‌ನಲ್ಲಿ (ಲಿಮ್ಕಾ ಬುಕ್ ಆಫ್ ರೆರ್ಕಾಡ್‌ನಲ್ಲಿ ದಾಖಲಾಗಿದೆ) ಅತೀ ಹೆಚ್ಚು ಸಮಯ ಬಾನಿನಲ್ಲಿ ಹಾರಾಡಿದ್ದಾಗಿ ದಾಖಲೆ ಬರೆದಿದ್ದೆ.. ಮತ್ತೆ ವುಮೆನ್ ಪೈಲಟ್‌ಗಳಲ್ಲಿ ಮೊದಲ BG ಯಾಗಿ ಹಾಗೂ ಕಾಡು ಮತ್ತು ಹಿಮದಲ್ಲಿ ಓಡಾಡಲು ತರಬೇತಿ ಪಡೆದ ಮೊದಲ ಮಹಿಳಾ ಆಫೀಸರ್ ಎಂಬ ಹೆಗ್ಗಳಿಕೆ ಪಡೆದಿದ್ದೇನೆ’ ಎಂದಿದ್ದಾರೆ.
ರಂಜಿನಿ, ಮಿತ್ತಡ್ಕ