Advertisement
ಮೇ 10ರಂದು ಬೆಳಗ್ಗೆ ದೇವತಾ ಪ್ರಾರ್ಥನೆ, ಗಣಪತಿ ಹೋಮ, ಸಂಜೆ ಶ್ರೀರಾಮಚಂದ್ರ, ಲಕ್ಷ್ಮಣ, ಸೀತಾ ಮಾತೆಯ ಮೂರ್ತಿಯ ಶೋಭಾ ಯಾತ್ರೆ ನಡೆಯಿತು. ರಾತ್ರಿ ವಾಸ್ತು ಹೋಮ ಇತ್ಯಾದಿ ನvದವು.
ಮೇ 12ರಂದು ಬೆಳಗ್ಗೆ ಪಂಚಾಮೃತಾಭಿಷೇಕ, ಶಿಖರ ಕಲಾಭಿಷೇಕ, ಅಲಂಕಾರ ಪೂಜೆ, ಅಭಿಷೇಕ ಪೂಜೆ, ಹವನಗಳು ನಡೆಯಿತು. ಬಳಿಕ ದೇವಸ್ಥಾನದ ಹೊರಾವರಣದಲ್ಲಿ ನಿರ್ಮಿಸಲಾದ ಭವ್ಯ ವೇದಿಕೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಪೂಜೆ ನಡೆಯಿತು. ರವಿನಾಥ್ ವಿಶ್ವನಾಥ್ ಶೆಟ್ಟಿ ಮತ್ತು ಭಾರತಿ ರವಿನಾಥ್ ಶೆಟ್ಟಿ ಅವರ ಯಜಮಾನಿಕೆಯಲ್ಲಿ ನಡೆದ ಈ ಪೂಜೆಯಲ್ಲಿ ತೋನ್ಸೆ ಪಡುಮನೆ ಲಕ್ಷಿ¾à ವಿಶ್ವನಾಥ ಶೆಟ್ಟಿ ಪರಿವಾರ, ತೋನ್ಸೆ ಜಯಕೃಷ್ಣ ಶೆಟ್ಟಿ ಪರಿವಾರ, ಪಳ್ಳಿ ಶಾಂತಿ ನಿವಾಸ ಮನೆಯ ಪರಿವಾರ ಹಾಗೂ ಕುಟುಂಬದವರು, ಹಿತೈಷಿಗಳು, ಭಕ್ತಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಈ ಮಹೋತ್ಸವದ ನಾದ ವಾಲಗವನ್ನು ಅನಿಲ್ ಕೋಟ್ಯಾನ್ ಬಳಗ, ಜರಿಮೆರಿ ದಿನೇಶ್ ವಿ. ಕೋಟ್ಯಾನ್ ಬಳಗ, ಚೆಂಡೆಯನ್ನು ಅಶೋಕ್ ದೇವಾಡಿಗ ಬಳಗ ನಡೆಸಿಕೊಟ್ಟರು.
Related Articles
Advertisement
ಈ ಸಮಾರಂಭದಲ್ಲಿ ಸೂರತ್‌ನ ಶಿವ ಹಾಸ್ಪಿಟಾಲಿಟಿ ಸರ್ವೀಸ್‌ನ ಶಿವರಾಮ ಶೆಟ್ಟಿ, ರವಿನಾಥ್ ಶೆಟ್ಟಿ ಅವರ ಸಹೋದರರಾದ ರಮಾನಾಥ ಶೆಟ್ಟಿ ಪರಿವಾರ, ಉಮಾನಾಥ ಶೆಟ್ಟಿ ಪರಿವಾರ, ಕೇಶವ ಆಳ್ವ ಕುಂಜತ್ತೂರು ಪರಿವಾರ, ಪ್ರಜ್ವಲ್ ಶೆಟ್ಟಿ ಪರಿವಾರ, ಪ್ರಶಾಂತ್ ಶೆಟ್ಟಿ, ಸಚಿತ್ ಶೆಟ್ಟಿ, ಮೋಹಿತ್ ಕೆ. ಆಳ್ವ ಮತ್ತಿತರರ ಕುಟುಂಬಸ್ಥರು ಮತ್ತು ಕಡಂದಲೆ ಶೇಖರ ಶೆಟ್ಟಿ, ಘನ್ಸೋಲಿ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಅಣ್ಣಿ ಶೆಟ್ಟಿ, ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ, ಅಖಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮಪಾಲ ದೇವಾಡಿಗ, ಕಾಶೀಮೀರ ಭಾಸ್ಕರ ಶೆಟ್ಟಿ, ಬಾಲಕೃಷ್ಣ ಹೆಗ್ಡೆ, ಹರೀಶ್ ಶೆಟ್ಟಿ ಗುರ್ಮೆ, ಹರೀಶ್ ಪಿ. ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ತುಳು ಸಂಘದ ಅಧ್ಯಕ್ಷ ಶಂಕರ್ ಶೆಟ್ಟಿ ಮತ್ತು ಪದಾಧಿಕಾರಿಗಳು, ಸೂರತ್ ಕರ್ನಾಟಕ ಸಮಾಜದ ಅಧ್ಯಕ್ಷ ದಿನೇಶ್ ಶೆಟ್ಟಿ, ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ, ಬರೋಡಾ ತುಳು ಸಂಘದ ಮಾಜಿ ಅಧ್ಯಕ್ಷ ಜಯ ಶೆಟ್ಟಿ ಮತ್ತು ಪದಾಧಿಕಾರಿಗಳು, ಅಂಕಲೇಶ್ವರದ ಉದ್ಯಮಿ ಅಜಿತ್ ಶೆಟ್ಟಿ, ಸುರೇಶ್ ಶೆಟ್ಟಿ, ಹರೀಶ್ ಪೂಜಾರಿ, ಶಂಕರ್ ಶೆಟ್ಟಿ, ಕರುಣಾಕರ ಶೆಟ್ಟಿ ಅಂಕಲೇಶ್ವರ, ಶೆಲ್ಟರ್ ಗ್ರೂಪ್ ಸತೀಶ್ ಶೆಟ್ಟಿ, ಸನ್ ಶೈನ್ ಇನ್ ಹೋಟೇಲ್‌ನ ನವೀನ್ ಶೆಟ್ಟಿ ಮತ್ತು ಜಗದೀಶ್ ಶೆಟ್ಟಿ, ದ್ವಾರಕ ಹೋಟೇಲಿನ ಅರುಣ್ ಹೆಗ್ಡೆ, ಸೂರತ್ ಹೊಟೇಲು ಉಡುಪಿಯ ಪ್ರತೀನ್ ಶೆಟ್ಟಿ, ಮೀರಾರೋಡ್ ಭರತ್ ಶೆಟ್ಟಿ, ರುದ್ರ ಶೆಲ್ಟರ್‌ನ ಹರೀಶ್ ಶೆಟ್ಟಿ, ಉದ್ಯಮಿ ಪುನೀತ್ ದಾವನ್, ಸಿಂಧು ಶೆಟ್ಟಿ, ಸುಧಾಮನಿ ಕೆ ಶೆಟ್ಟಿ, ಮಾಲತಿ ಎಸ್. ಶೆಟ್ಟಿ, ಕಿರಣ್ ಶೆಟ್ಟಿ, ಕಿರಣ್ ಪಿ. ಶೆಟ್ಟಿ, ಪ್ರೀತಿ ವಿ. ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.
ಧಾರ್ಮಿಕ ಕಾರ್ಯ ನಡೆಯುತ್ತಿರಲಿಈ ಸಂದರ್ಭ ಮಾತನಾಡಿದ ಸ್ವಾಮೀಜಿಯವರು ಈ ಕ್ಷೇತ್ರದಲ್ಲಿ ಭಕ್ತಿಪೂರ್ವಕವಾಗಿ ಪ್ರಾರ್ಥಿಸಿದಲ್ಲಿ ಬೇಡಿಕೆ ಈಡೇರುತ್ತದೆ ಎಂಬುದನ್ನು ರವಿನಾಥ್ ಶೆಟ್ಟಿ ಅವರ ಮೂಲಕ ಕಾಣಬಹುದು. ಈ ಕ್ಷೇತ್ರದಲ್ಲಿ ಇಂತಹ ಧಾರ್ಮಿಕ ಕಾರ್ಯಗಳು ಆಗಾಗ ನಡೆಯುತ್ತಿರಲಿ. ಭಕ್ತರಿಗೆ ಇದನ್ನು ಕಾಣುವ ಭಾಗ್ಯ ಆಗಾಗ ಲಭಿಸಲಿ. ರವಿನಾಥ್ ಶೆಟ್ಟಿ ಅವರಂತಹ ಧರ್ಮ ರಕ್ಷಕರನ್ನು ಎÇÉೆಡೆಗಳಲ್ಲಿ ಕಾಣುವಂತಾಗಲಿ ಎಂದು ಶುಭ ಹಾರೈಸಿದರು. ರವಿನಾಥ ವಿ. ಶೆಟ್ಟಿ ಅವರ ತಾಯಿ ತೋನ್ಸೆ ಪಡುಮನೆ ಲಕ್ಷಿ¾à ವಿ. ಶೆಟ್ಟಿ, ಮಕ್ಕಳಾದ ಡಾ| ಆಶ್ನಾ ಆರ್. ಶೆಟ್ಟಿ, ಆಸ್ಥ ಆರ್. ಶೆಟ್ಟಿ ಉಪಸ್ಥಿತರಿದ್ದರು.