Advertisement

Kalaburagi; ಮೂವರಿಗೆ ಗುಲ್ಬರ್ಗ ವಿವಿ ಗೌರವ ಡಾಕ್ಟರೇಟ್ ಪದವಿ

02:42 PM Aug 09, 2024 | Team Udayavani |

ಕಲಬುರಗಿ: ಇಲ್ಲಿನ ಗುಲ್ಬರ್ಗ ವಿಶ್ವವಿದ್ಯಾಲಯವು ತನ್ನ 42 ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲು ನಿರ್ಧರಿಸಿದೆ.

Advertisement

ಆ. 12 ರಂದು ನಡೆಯುವ ವಿವಿಯ ವಾರ್ಷಿಕ ಘಟಿಕೋತ್ಸವದಲ್ಲಿ ಹಿರಿಯ ನ್ಯಾಯವಾದಿ ಅರ್ಚನಾ ಪ್ರದೀಪ ತಿವಾರಿ, ಹೋರಾಟಗಾರ ಲಕ್ಷ್ಮಣ ದಸ್ತಿ ಹಾಗೂ ಯಶಸ್ವಿ ಕೃಷಿ ಉದ್ಯಮಿ ಪೂಜ್ಯ ಲಿಂಗರಾಜಪ್ಪ ಬಸವರಾಜಪ್ಪ ಅಪ್ಪ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುತ್ತದೆ.

ವಿವಿಯ ಸಿಂಡಿಕೇಟ್, ವಿದ್ಯಾ ವಿಷಯಕ ಪರಿಷತ್ ಸಭೆ ಹಾಗೂ ವಿಷಯ ತಜ್ಞರ ಸಮಿತಿ ಶಿಫಾರಸ್ಸಿನ ಮೇರೆಗೆ ರಾಜ್ಯಪಾಲರು ಮೂವರ ಗೌರವ ಡಾಕ್ಟರೇಟ್ ಗೆ ಅನುಮೋದನೆ ನೀಡಿದ್ದಾರೆ ಎಂದು ಗುಲ್ಬರ್ಗ ವಿವಿಯ ಕುಲಪತಿ ಪ್ರೊ ದಯಾನಂದ ಅಗಸರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next