Advertisement
ಪಟ್ಟಣದ ಸುಮಾರು 2 ಕಿ.ಮೀ ದೂರದಲ್ಲಿ ಕಲೆ,ಸಾಹಿತ್ಯ, ಶಿಲ್ಪಕಲೆ, ಶಾಸನಗಳಿರುವ ಐತಿಹಾಸಿಕಹಿನ್ನೆಲೆ, ಧಾರ್ಮಿಕ ಪರಂಪರೆ ಹೊಂದಿದ ಭವ್ಯವಾದನಾಗಾವಿ ಯಲ್ಲಮ್ಮ ದೇವಾಲಯವಿದೆ.ಮುಖ್ಯದ್ವಾರ ಪ್ರವೇಶಿಸಿ ಸ್ವಲ್ಪ ಮುಂದೆ ಹೋದರೆನಾಗಶೇಷ ಗುಡಿಯ 60 ಕಂಬಗಳು ಕಾಣಿಸುತ್ತವೆ.
Related Articles
Advertisement
ಯಲ್ಲಮ್ಮ ದೇವಿಗೆ ಕರ್ನಾಟಕ ಮಾತ್ರವಲ್ಲದೇಮಹಾರಾಷ್ಟ್ರ, ಆಂಧ್ರಪ್ರದೇಶ, ಗುಜರಾತರಾಜ್ಯ ಹಾಗೂ ರಾಜ್ಯದ ಪ್ರಮುಖ ಜಿಲ್ಲೆಗಳಿಂದ ಹುಣ್ಣಿಮೆ, ಅಮವಾಸ್ಯೆ, ಪ್ರತಿ ಮಂಗಳವಾರ,ಶುಕ್ರವಾರ ಭಕ್ತಾದಿಗಳು ಅಪಾರ ಪ್ರಮಾಣದಲ್ಲಿಆಗಮಿಸಿ, ದರ್ಶನ ಪಡೆಯುತ್ತಾರೆ. ಆದರೆಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿಯೂ ಹೊರಜಿಲ್ಲೆ, ತಾಲೂಕು ಹಾಗೂ ರಾಜ್ಯದವರಿಗೆ ದರ್ಶನಕ್ಕೆಅವಕಾಶ ನೀಡಿಲ್ಲ.ದೇವಾಲಯದಲ್ಲಿ ಪ್ರತಿ ವರ್ಷ ಅಶ್ವಯುಜಶುದ್ಧ ಪ್ರತಿಪದೆಯಿಂದ ಘಟಸ್ಥಾಪನೆಯೊಂದಿಗೆಒಂಭತ್ತು ದಿನಗಳ ಕಾಲ ನವರಾತ್ರಿ ಪೂಜೆಗಳುನಡೆಯುತ್ತವೆ.
ಪ್ರತಿದಿನ ದೇವಿಗೆ ವಿಶೇಷ ಪೂಜೆ,ಕುಂಕುಮಾರ್ಚನೆ, ಮಂತ್ರ ಪುಷ್ಪಗಳ ಸೇವೆನಡೆಯುತ್ತದೆ.ಪ್ರತಿ ವರ್ಷ ಸೀಗಿ ಹುಣ್ಣಿಮೆಯಂದು ಪಲ್ಲಕ್ಕಿಉತ್ಸವ ಹಾಗೂ ಜಾತ್ರೆ ನಡೆಯುತ್ತದೆ. ಅ.20ರಂದು ಪಟ್ಟಣದ ಸರಾಫ ಲಚ್ಚಪ್ಪ ನಾಯಕಮನೆಯಲ್ಲಿ ಮಧ್ಯಾಹ್ನ 1:30ಕ್ಕೆ ಮಾಜಿ ಸಚಿವ,ಶಾಸಕ, ದೇವಸ್ಥಾನ ಸಮಿತಿ ಗೌರವಾಧ್ಯಕ್ಷಪ್ರಿಯಾಂಕ್ ಖರ್ಗೆ, ತಹಶೀಲ್ದಾರ್ ಉಮಾಕಾಂತಹಳ್ಳೆ ಅಧ್ಯಕ್ಷತೆಯಲ್ಲಿ ಪಟ್ಟಣದ ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ವಿಘ್ನೇಶ್ವರ ಪೂಜೆ, ಗುರುಪೂಜೆ,ಪಲ್ಲಕ್ಕಿ ಪೂಜೆ ನಡೆಯುತ್ತದೆ.
ಮಧ್ಯಾಹ್ನ 2 ಗಂಟೆಗೆ ಪಲ್ಲಕ್ಕಿಯು ಪಟ್ಟಣದ ಪ್ರಮುಖ ಬೀದಿಗಳಮುಖಾಂತರ ಹೊರಟು ದೇವಸ್ಥಾನ ತಲುಪುತ್ತದೆ.ದೇವಸ್ಥಾನ ತಲುಪಿದ ನಂತರ ದೇವಸ್ಥಾನದ ಸುತ್ತಐದು ಪ್ರದಕ್ಷಿಣೆ ಹಾಕಿ ದೇವರ ಪಲ್ಲಕಿ ಗರ್ಭ ಗುಡಿ ತಲುಪುತ್ತದೆ.
ಎಂ.ಡಿ ಮಶಾಖ