Advertisement
ಆಪ್ಟನ್ ಪಾತ್ರ ಬಹಳ“ವಿಶ್ವ ಚಾಂಪಿಯನ್‌ಶಿಪ್ ಅಂದರೆ ಅದು ಬರೀ ಚೆಸ್ ಆಟವಲ್ಲ. ಅಲ್ಲಿ ಬಹಳಷ್ಟು ಮಾನಸಿಕ ಮತ್ತು ಭಾವನಾತ್ಮಕ ಒತ್ತಡಗಳನ್ನು ನಾವು ನಿಭಾಯಿಸಬೇಕಾ ಗುತ್ತದೆ. ಈ ವಿಚಾರದಲ್ಲಿ ದಕ್ಷಿಣ ಆಫ್ರಿಕಾದ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಅವರ ಮಾರ್ಗ ದರ್ಶನ ನೆರವಾಯಿತು’ ಎಂದು ಗುಕೇಶ್ ಹೇಳಿದರು. ಆಪ್ಟನ್ ಮಾರ್ಗದರ್ಶನ ದಲ್ಲೇ ಭಾರತ ತಂಡ 2011ರಲ್ಲಿ ಏಕದಿನ ವಿಶ್ವಕಪ್, ಕಳೆದ ಪ್ಯಾರಿಸ್ ಒಲಿಂಪಿಕ್ಸ್ ಹಾಕಿಯಲ್ಲಿ ಕಂಚಿನ ಪದಕ ಗೆದ್ದಿತ್ತು. ಗುಕೇಶ್ ಕಲಿತ ಬಾಲ್ಯದ ಶಾಲೆಯಾದ “ವೇಲಮ್ಮಾಳ್ ವಿದ್ಯಾಲಯ’ ಭವ್ಯ ಸಮ್ಮಾನ ಕಾರ್ಯಕ್ರಮ ಹಾಗೂ ಪತ್ರಿಕಾ ಗೋಷ್ಠಿಯನ್ನು ಹಮ್ಮಿಕೊಂಡಿತ್ತು.
ಈ ಸಂದರ್ಭದಲ್ಲಿ ಮಾತಾಡಿದ ಗುಕೇಶ್ ಅವರ ತಂದೆ ಡಾ| ರಜನೀ ಕಾಂತ್, “ಆಸಕ್ತಿ ಹಾಗೂ ಕಠಿನ ಪರಿಶ್ರಮ ಇಲ್ಲದೇ ಏನೂ ಆಗದು. ಗುಕೇಶ್ ಚೆಸ್‌ಪಟು ಆದದ್ದು ಆಕಸ್ಮಿಕ. ಆತ ವೇಲಮ್ಮಾಳ್ ಸ್ಕೂಲ್‌ನ ಚೆಸ್ ಕ್ಲಾಸ್‌ಗೆ ಹೋದುದೇ ಮೂಲ. ಒಮ್ಮೆ ಅವನಿಗೆ ಚೆಸ್‌ನಲ್ಲಿ ಆಸಕ್ತಿ ಮೂಡಿತೆನ್ನುವಾಗ ನಾವು ಸಂಪೂರ್ಣ ಬೆಂಬಲ ನೀಡಲಾರಂಭಿಸಿದೆವು. ನಮ್ಮ ಮಕ್ಕಳು ಯಾವುದರಲ್ಲಿ ವಿಪರೀತ ಆಸಕ್ತಿ ಹೊಂದಿದ್ದಾರೋ ಅದಕ್ಕೆ ಹೆತ್ತವರು ಪೂರ್ತಿ ಬೆಂಬಲ ಕೊಡಬೇಕು. ಆಗಲೇ ಇಂಥ ಸಾಧನೆ ಸಾಧ್ಯ’ ಎಂದರು.