Advertisement

ದೇಶದಲ್ಲೇ ಅತೀ ಹೆಚ್ಚು ಗುಜರಿ ವಾಹನ ಇರುವ ರಾಜ್ಯ ಕರ್ನಾಟಕ :ಇಲ್ಲಿವೆ 70 ಲಕ್ಷ ಹಳೆಯ ವಾಹನಗಳು

08:15 PM Mar 29, 2021 | Team Udayavani |

ನವದೆಹಲಿ: ದೇಶದಲ್ಲೇ ಅತಿ ಹೆಚ್ಚು ಗುಜರಿ ವಾಹನಗಳಿರುವುದು ಯಾವ ರಾಜ್ಯದಲ್ಲಿ ಗೊತ್ತಾ? ಕರ್ನಾಟಕದಲ್ಲಿ! ಹಳೆಯ ಹಾಗೂ ದೋಷಪೂರಿತ ವಾಹನಗಳನ್ನು ಗುಜರಿಗೆ ಹಾಕಿ, ವಾಯುಮಾಲಿನ್ಯವನ್ನು ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಗುಜರಿ ನೀತಿ ಘೋಷಿಸಿದ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ. ಕರ್ನಾಟಕದ ರಸ್ತೆಗಳಲ್ಲಿ ಬರೋಬ್ಬರಿ 70 ಲಕ್ಷಗಳಷ್ಟು ಹಳೆಯ ವಾಹನಗಳು ಸಂಚರಿಸುತ್ತಿವೆ. ಈ ಪೈಕಿ, 31.9 ಲಕ್ಷ ವಾಹನಗಳು 15-20 ವರ್ಷಗಳಷ್ಟು ಹಳೆಯದಾದರೆ, 38.1 ಲಕ್ಷ ವಾಹನಗಳು 20 ವರ್ಷಗಳಷ್ಟು ಹಳೆಯದು.

Advertisement

“ವಾಹನ್‌-4′ ಡಿಜಿಟಲೀಕೃತ ವಾಹನಗಳ ದಾಖಲೆಗಳಿಂದ ಈ ವಿಷಯ ತಿಳಿದುಬಂದಿದೆ. 15 ವರ್ಷಗಳಷ್ಟು ಹಳೆಯದಾದ 4 ಕೋಟಿ ವಾಹನಗಳು ದೇಶಾದ್ಯಂತ ಸಂಚರಿಸುತ್ತಿದ್ದು, ಈ ಪೈಕಿ 2 ಕೋಟಿ ವಾಹನಗಳು 20 ವರ್ಷಗಳಷ್ಟು ಹಳೆಯದ್ದು ಎಂದೂ ತಿಳಿದುಬಂದಿದೆ.

ಇನ್ನು ಉತ್ತರಪ್ರದೇಶದಲ್ಲಿ 56.5 ಲಕ್ಷ, ದೆಹಲಿಯಲ್ಲಿ 49.9 ಲಕ್ಷ, ಕೇರಳದಲ್ಲಿ 34.6 ಲಕ್ಷ ಮತ್ತು ತಮಿಳುನಾಡಿನಲ್ಲಿ 33.4 ಲಕ್ಷ ಹಳೆಯ ವಾಹನಗಳು ಸಂಚರಿಸುತ್ತಿವೆ ಎಂದು ದತ್ತಾಂಶಗಳು ಹೇಳಿವೆ.

ಇದನ್ನೂ ಓದಿ :ಕರುಣೆ ಮರೆತ ಖಾಕಿ : ತುಂಬು ಗರ್ಭಿಣಿಯನ್ನು 3 ಕಿ.ಮೀ ನಡೆಸಿದ ಮಹಿಳಾ ಪೊಲೀಸ್

ಸರ್ಕಾರದ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳ 15 ವರ್ಷ ದಾಟಿರುವ ವಾಹನಗಳನ್ನು ಗುಜರಿಗೆ ಹಾಕುವ ಪ್ರಕ್ರಿಯೆಯು 2022ರ ಏ.1ರಿಂದ ಆರಂಭವಾಗಲಿದೆ. ಭಾರೀ ಗಾತ್ರದ ವಾಹನಗಳ ಕಡ್ಡಾಯ ಫಿಟೆ°ಸ್‌ ಪರೀಕ್ಷೆ ನಿಯಮವು 2023ರ ಏ.1ರಿಂದ, ಇತರೆ ವಾಹನಗಳಿಗೆ ಈ ನಿಯಮವು 2024ರ ಜೂ.1ರಿಂದ ಜಾರಿಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next