Advertisement
ಹೌದು ಎನ್ನುವ ಅನುಮಾನವನ್ನು ಅನೇಕ ತಜ್ಞರು ವ್ಯಕ್ತಪಡಿಸಿದ್ದಾರೆ. ಗುಜರಾತ್ ಮತ್ತು ಮಧ್ಯಪ್ರದೇಶದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲು ವುಹಾನ್‌ನಲ್ಲಿ ಕಾಣಿಸಿಕೊಂಡ “ಎಲ್’ ವಿಧದ ವೈರಸ್ ನ ಕಣವೇ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ಈ ಕುರಿತು ಅಧ್ಯಯನಗಳು ಆರಂಭವಾಗಿದ್ದು, ಸದ್ಯದಲ್ಲೇ ಈ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದೂ ಹೇಳಿದ್ದಾರೆ.
ಇಟಲಿ, ಸ್ಪೇನ್‌ನಲ್ಲೂ “ಎಲ್’ ದಾಳಿ: ಜಗತ್ತಿನ ಯಾವ ಪ್ರದೇಶಗಳಲ್ಲಿ ಸೋಂಕಿನಿಂದ ಹೆಚ್ಚಿನ ಸಾವು ನೋಟು ಉಂಟಾಗಿದೆಯೋ, ಅಲ್ಲೆಲ್ಲ “ಎಲ್’ ವಿಧದ ಕಣಗಳ ಕಾರುಬಾರು ಜೋರಾಗಿದೆ ಎಂದೇ ಅರ್ಥ. ಭಾರತದಲ್ಲಿ ಈ ರೀತಿಯ ಕಣವು ಗುಜರಾತ್, ಮಧ್ಯಪ್ರದೇಶದಲ್ಲಿ ಕಾಣಿಸಿಕೊಂಡರೆ, ವಿದೇಶಗಳಲ್ಲಿ ಚೀನಾದ ವುಹಾನ್, ಇಟಲಿ, ಸ್ಪೇನ್ ಮತ್ತು ನ್ಯೂಯಾರ್ಕ್ ನಲ್ಲಿ ಕಾಣಿಸಿಕೊಂಡಿವೆ. ಹೀಗಾಗಿಯೇ, ಈ ಎಲ್ಲ ಕಡೆಗಳಲ್ಲೂ ಸಾವಿನ ಸಂಖ್ಯೆ ಅಧಿಕವಾಗಿದೆ ಎಂದು ಸೋಂಕು ರೋಗಗಳ ತಜ್ಞ ಡಾ.ಅತುಲ್ ಪಟೇಲ್ ಹೇಳಿದ್ದಾರೆ.