ಅಹಮದಾಬಾದ್ : ತಾಯ್ತನದ ಅನುಭವ ಹೆಣ್ಣಿಗೆ ಸಂಭ್ರಮದೊಂದಿಗೆ ಅಪಾರ ನೋವು ನೀಡುವ ಕ್ಷಣ. ಪ್ರಸವ ವೇದನೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬಳು ಭಯಾನಕ ಕ್ಷಣ ಎದುರಿಸಿದ ಘಟನೆ ಅಮ್ರೇಲಿ ಜಿಲ್ಲೆಯ ಗಿರ್ ದಟ್ಟಾರಣ್ಯದಲ್ಲಿ ಜೂನ್ 29 ರ ನಡುರಾತ್ರಿ ನಡೆದಿದೆ.
ಕುಗ್ರಾಮ ಲಾನಾಸಾಪುರ್ ಎಂಬಲ್ಲಿನ 32 ರ ಹರೆಯದ ಮಂಗುಬೆನ್ ಮುಕ್ವಾನಾ ಅವರು ನಡುರಾತ್ರಿ ಪ್ರಸವ ವೇದನೆಯಿಂದ ಬಳಲುತ್ತಿದ್ದು ಅಂಬುಲೆನ್ಸ್‌ನಲ್ಲಿ ಜಫ್ರಾಬಾದ್‌ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಮಾರ್ಗಮಧ್ಯದಲ್ಲಿ 12 ಸಿಂಹಗಳು ಅಡ್ಡಗಟ್ಟಿ ಘರ್ಜನೆ ಮೊಳಗಿಸಿವೆ.
ಪ್ರಸವ ವೇದನೆಯಿಂದ ಬಳಲುತ್ತಿದ್ದ ಮಂಗುಬೆನ್ ಸಿಂಹಗಳು ಸುತ್ತುವರಿದಿರುವ ವಿಷಯ ಕೇಳಿ ಇನ್ನಷ್ಟು ಹೆದರಿ ಕಂಗಾಲಾಗಿ ಹೋಗಿದ್ದಾರೆ. ಅಂಬುಲೆನ್ಸ್‌ನಲ್ಲಿದ್ದ ಚಾಲಕ ಮತ್ತು ತುರ್ತು ಚಿಕಿತ್ಸಕ ವೈದ್ಯರನ್ನು ಸಂಪರ್ಕಿಸಿ ಧೈರ್ಯ ತುಂಬಿ ಸುಃಖ ಪ್ರಸವವಾಗುವಂತೆ ನೋಡಿಕೊಂಡಿದ್ದಾರೆ. 20 ನಿಮಷಗಳ ಕಾಲ ಸಿಂಹಗಳು ಕದಲೆದೆ ಅಂಬುಲೆನ್ಸ್ ಅಡ್ಡಗಟ್ಟಿವೆ. ಕೊನೆಗೂ ಮುದ್ದಾಗ ಗಂಡು ಮಗುವಿಗೆ ಮುಂಗುಬೆನ್ ಜನ್ಮ ನೀಡಿದ್ದಾರೆ.
ತುರ್ತು ಸ್ಥಿತಿ ವೇಳೆ ವೈದ್ಯರು ತುರ್ತು ಚಿಕಿತ್ಸಕ ಅಶೋಕ್ ಮತ್ತು ಚಾಲಕ ರಾಜು ಜಾಧವ್‌ಗೆ ಮಾರ್ಗ ಮಧ್ಯೆ ಅಂಬುಲೆನ್ಸ್ ನಿಲ್ಲಿಸಿ ಎಲ್ಲಾ ರೀತಿಯ ಮಾಹಿತಿ ನೀಡಿ ಪ್ರಸವಕ್ಕೆ ನೆರವಾಗುವಂತೆ ನೋಡಿಕೊಂಡಿದ್ದಾರೆ.
ಪ್ರಸವವಾದ ಬಳಿಕ ಚಾಲಕ ನಿಧಾಕ್ಕೆ ಅಂಬುಲೆನ್ಸ್ ಮುಂದಕ್ಕೆ ತಂದಿದ್ದು ಸಿಂಹಗಳು ದಾರಿ ಬಿಟ್ಟು ಕದಲಿವೆ.