Advertisement

ವಿಮಾನ ಕೆಳಗೆ ಬೀಳುತ್ತದೆ ಎಂದು ಟ್ವೀಟ್ : ಪಿಯುಸಿ ವಿದ್ಯಾರ್ಥಿ ಅರೆಸ್ಟ್ !

06:00 PM Apr 03, 2023 | Vishnudas Patil |

ಸೂರತ್ : ಆಕಾಶಾ ಏರ್‌ಲೈನ್ಸ್ ವಿಮಾನ ಕೆಳಗೆ ಬೀಳುತ್ತದೆ ಎಂದು ಟ್ವೀಟ್‌ ಮಾಡಿದ ಸೂರತ್‌ನ 12 ನೇ ತರಗತಿಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಏರ್‌ಲೈನ್ಸ್ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಮುಂಬೈ ಪೊಲೀಸರು ಅವನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 18 ವರ್ಷದ ವಿದ್ಯಾರ್ಥಿ ಟ್ವಿಟರ್‌ನಲ್ಲಿ, “ಆಕಾಶಾ ಏರ್ ಬೋಯಿಂಗ್ 737 ಮ್ಯಾಕ್ಸ್ ಕೆಳಗೆ ಬೀಳಲಿದೆ” ಎಂದು ಪೋಸ್ಟ್ ಮಾಡಿದ್ದ.

ಏರ್‌ಲೈನ್‌ನ ದೂರಿನ ಆಧಾರದ ಮೇಲೆ, ಅಪರಿಚಿತ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಮುಂಬೈ ಪೊಲೀಸರು ಟ್ವೀಟ್‌ನ ಐಪಿ ವಿಳಾಸವನ್ನು ಗುಜರಾತ್‌ನ ಸೂರತ್‌ ನಲ್ಲಿ ಪತ್ತೆಹಚ್ಚಿ ತಂಡವನ್ನು ಕಳುಹಿಸಿ ಮಾರ್ಚ್ 27 ರಂದು ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.

ವಿದ್ಯಾರ್ಥಿಯ ಪ್ರಕಾರ, ಅವನ ಟ್ವೀಟ್‌ನ ಉದ್ದೇಶ ಗೊಂದಲವನ್ನು ಸೃಷ್ಟಿಸುವುದಾಗಿರಲಿಲ್ಲ. ವಿಮಾನದ ಬಗ್ಗೆ ಮಾತ್ರ ತಿಳಿದುಕೊಳ್ಳಲು ಬಯಸಿದ್ದೆ. ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಪೋಸ್ಟ್‌ನ ಪರಿಣಾಮಗಳನ್ನು ಅರಿತುಕೊಂಡಿಲ್ಲ ಎಂದು ಹೇಳಿದ್ದಾನೆ ಎಂದು ಪಿಟಿಐ ವರದಿ ಮಾಡಿದೆ.

ಪರೀಕ್ಷೆಗಳು ನಡೆಯುತ್ತಿರುವುದರಿಂದ ಒಂದು ದಿನದ ಬಂಧನದ ನಂತರ 5000 ರೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next