Advertisement

ಗುಜರಾತ್: ಹೊಸ ಮುಖಗಳಿಗೆ ಮಣೆ‌; ಬಿಜೆಪಿ ಐಡಿಯಾ ವರ್ಕೌಟ್‌ ಆಯ್ತಾ?

11:02 PM Dec 08, 2022 | Team Udayavani |

ಗುಜರಾತ್: ಆಡಳಿತ ವಿರೋಧಿ ಅಲೆಯನ್ನು ಪರಿಗಣಿಸಿ ಬಿಜೆಪಿ ಈ ಬಾರಿ ಮಾಜಿ ಸಿಎಂ ವಿಜಯ್‌ ರೂಪಾಣಿ ಸೇರಿದಂತೆ 42 ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಿತ್ತು. ಅವರ ಬದಲಿಗೆ ಎಲ್ಲ ಹೊಸ ಮುಖಗಳನ್ನು ಕಣಕ್ಕಿಳಿಸಿತ್ತು. ಬಿಜೆಪಿಯ ಈ ಕಾರ್ಯತಂತ್ರ ನೂರಕ್ಕೆ ನೂರರಷ್ಟು ಫ‌ಲಿಸಿದೆ.

Advertisement

ವಿಜಯ್‌ ರೂಪಾಣಿ ಅವರ ಕ್ಷೇತ್ರವಾದ ರಾಜ್‌ಕೋಟ್‌ ಪಶ್ಚಿಮದಲ್ಲಿ ಸ್ಪರ್ಧಿಸಿದ್ದ ದರ್ಶಿತಾ ಶಾ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕಲಾರಿಯಾ ಮನಸುಖಭಾಯಿ ವಿರುದ್ಧ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ. 2017ರಲ್ಲಿ ರೂಪಾಣಿ ಅವರು ಈ ಕ್ಷೇತ್ರದಲ್ಲಿ 53,755 ಮತಗಳ ಅಂತರದಿಂದ ಗೆದ್ದಿದ್ದರು.

ರಾಜ್‌ಕೋಟ್‌ ಪೂರ್ವ ಕ್ಷೇತ್ರದಲ್ಲಿ ಸಚಿವ ಅರವಿಂದ ರಾಜ್ಯಾನಿ ಅವರಿಗೆ ಟಿಕೆಟ್‌ ನಿರಾಕರಿಸಿ, ಮಾಜಿ ಮೇಯರ್‌ ಉದಯ್‌ ಕಾಂಗಾಡ್‌ರಿಗೆ ಟಿಕೆಟ್‌ ನೀಡ ಲಾಗಿತ್ತು. ಉದಯ್‌ ಅವರು ಸುಮಾರು 30 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

ರಾಜ್‌ಕೋಟ್‌ ದಕ್ಷಿಣದಲ್ಲಿ ಶಾಸಕರಾಗಿದ್ದ ಗೋವಿಂದ್‌ ಪಟೇಲ್‌ ಬದಲಾಗಿ ರಮೇಶ್‌ಭಾಯಿಗೆ ಟಿಕೆಟ್‌ ಕೊಟ್ಟಿತ್ತು. ಅವರೂ ಲಕ್ಷಕ್ಕೂ ಅಧಿಕ ಮತಗಳನ್ನು ಗಳಿಸಿದ್ದಾರೆ. ಇನ್ನು, ಅಕೋಟಾ, ರಾವ್‌ಪುರ, ವೆಜಾಲ್ಪುರ್‌, ಕಾಮ್‌ರೇಜ್‌, ಉಧಾನಾ, ವೀರಂಗಾಮ್‌, ಗಾಂಧಿ ನಗರ ದಕ್ಷಿಣ ಸೇರಿದಂತೆ ಹೊಸ ಮುಖಗಳನ್ನು ಕಣಕ್ಕಿಳಿಸಿದ್ದ ಬಹುತೇಕ ಕ್ಷೇತ್ರಗಳನ್ನು ಬಿಜೆಪಿ ಬಾಚಿಕೊಂಡಿದೆ.

ಶೇ.80ಕ್ಕೂ ಹೆಚ್ಚು ಮತ ಪಡೆದ ಅಮಿತ್‌ ಶಾ! :

Advertisement

ಬಿಜೆಪಿ ಅಭ್ಯರ್ಥಿ ಅಮಿತ್‌ ಶಾ ಅವರು ವೆಲ್ಲಿಸ್‌ಬ್ರಿಡ್ಜ್ ಕ್ಷೇತ್ರದಲ್ಲಿ ಅಭೂತಪೂರ್ವ ಜಯ ಗಳಿಸಿದ್ದಾರೆ. ಅರೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೂ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರೇ ಎಂದು ಯೋಚಿಸುತ್ತಿದ್ದೀರಾ? ಇದು ಬಿಜೆಪಿಯ ಚಾಣಕ್ಯ ಅಮಿತ್‌ ಶಾ ಅಲ್ಲ! ಮಾಜಿ ಮೇಯರ್‌ ಅಮಿತ್‌ ಪಿ. ಶಾ. ಈ ಬಾರಿ ಬಿಜೆಪಿ ಹಾಲಿ ಶಾಸಕ ರಾಕೇಶ್‌ ಶಾ ಅವರನ್ನು ಕೈಬಿಟ್ಟು ಅಮಿತ್‌ ಶಾ ಅವರಿಗೆ ವೆಲ್ಲಿಸ್‌ಬ್ರಿಡ್ಜ್ ಟಿಕೆಟ್‌ ನೀಡಿತ್ತು. ಅಚ್ಚರಿಯೆಂಬಂತೆ ಶಾ ಅವರು ಭರ್ಜರಿ ಜಯ ಗಳಿಸಿದ್ದು ಮಾತ್ರವಲ್ಲದೇ ಬರೋಬ್ಬರಿ ಶೇ.80.39ರಷ್ಟು ಮತಗಳನ್ನು ಗಳಿಸುವ ಮೂಲಕ ದಾಖಲೆ ಬರೆದಿದ್ದಾರೆ. ಇದೇ ವೇಳೆ ಘಟೊÉàಡಿಯಾದಿಂದ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಅವರೂ ಶೇ.82.95 ಮತಗಳನ್ನು ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next